ಮಂಗಳೂರಿನಲ್ಲಿ ಜೋಗಿ 'ಎಲ್’ ಕಾದಂಬರಿ ಸಾಹಿತ್ಯ ಸಲ್ಲಾಪ

By Web Desk  |  First Published Sep 7, 2019, 12:22 AM IST

ಸೆ. 8ರಂದು ಎಲ್ ಕಾದಂಬರಿಯ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ/  ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ/ ಮಂಗಳೂರಿನಲ್ಲಿ ಸಾಹಿತ್ಯ ಸಾಧಕರ ಸಮ್ಮಿಲನ


ಮಂಗಳೂರು[ಸೆ. 07]  ಕರ್ಣಾಟಕ ಬ್ಯಾಂಕ್, ಸಾವಣ್ಣ ಪ್ರಕಾಶನ ಮತ್ತು ಕಥೆಕೂಟದ ವತಿಯಿಂದ ಕತೆಗಾರ ಜೋಗಿ ಅವರ ಹೊಸ ಕಾದಂಬರಿ ‘ಎಲ್’ ಬಗ್ಗೆ ಸಾಹಿತ್ಯ-ಸಲ್ಲಾಪ ಕಾರ್ಯಕ್ರಮ ಸೆ.8ರಂದು ಸಾಯಂಕಾಲ 5.30ಕ್ಕೆ ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಬಿ.ಎ.ವಿವೇಕ ರೈ ಮೊಬೈಲ್ ಬುಕ್ ಬಿಡುಗಡೆ ಮಾಡಲಿದ್ದಾರೆ. 

Tap to resize

Latest Videos

undefined

ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ : ಜೋಗಿ

ವಿಮರ್ಶಕ ನರೇಂದ್ರ ಪೈ, ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಧಾರಾಣಿ, ರಂಗಕರ್ಮಿ ನಾ.ದಾ.ಶೆಟ್ಟಿ, ಕತೆಗಾರ ಗೋಪಾಲಕೃಷ್ಣ ಕುಂಟಿನಿ, ಕರ್ಣಾಟಕ ಬ್ಯಾಂಕಿನ ಎಜಿಎಂ ಶ್ರೀನಿವಾಸ ದೇಶಪಾಂಡೆ, ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ಸುವರ್ಣ ನ್ಯೂಸ್‌.ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

click me!