ಕಳೆದ ಮೂರು ತಿಂಗಳಿಂದ ಕರಿ ಚಿರತೆ ಗ್ರಾಮದ ಸುತ್ತ ಮುತ್ತಲಿನ ಜಾನುವಾರು, ನಾಯಿಗಳ ಮೇಲೆ ದಾಳಿ ಮಾಡುತ್ತಿತ್ತು. ಇದರಿಂದ ಗ್ರಾಮಸ್ಥರು ಬಹಳ ಆತಂಕದಲ್ಲಿದ್ದರು. ಇದೀಗ ಕರಿ ಚಿರತೆ ಸೆಯೆರಾಗಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರವಾರ(ಏ.20): ಹಲವು ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಬ್ಲ್ಯಾಕ್ ಪ್ಯಾಂಥರ್ ಕೊನೆಗೂ ಸೆರೆಯಾಗಿದೆ ಹೌದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಂದೂರು ಜಡ್ಡಿಗದ್ದೆಯಲ್ಲಿ ಇಂದು(ಗುರುವಾರ) ಕರಿ ಚಿರತೆ ಸೆರೆಯಾಗಿದೆ.
ಕಳೆದ ಮೂರು ತಿಂಗಳಿಂದ ಕರಿ ಚಿರತೆ ಗ್ರಾಮದ ಸುತ್ತ ಮುತ್ತಲಿನ ಜಾನುವಾರು, ನಾಯಿಗಳ ಮೇಲೆ ದಾಳಿ ಮಾಡುತ್ತಿತ್ತು. ಇದರಿಂದ ಗ್ರಾಮಸ್ಥರು ಬಹಳ ಆತಂಕದಲ್ಲಿದ್ದರು. ಇದೀಗ ಕರಿ ಚಿರತೆ ಸೆಯೆರಾಗಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
undefined
TEMPERATURE HIKE: ಶಿರಸಿ 38 ಡಿಗ್ರಿ ಉಷ್ಣಾಂಶ ದಾಖಲು, ತತ್ತರಿಸಿದ ಜನತೆ, ಜಾನುವಾರುಗಳು!
ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದೊಂದು ತಿಂಗಳಿಂದ ಬೋನನ್ನು ಇಟ್ಟು ಕಾದು ಕುಳಿತಿದ್ದರು. ಕೊನೆಗೂ ಅರಣ್ಯ ಇಲಾಖೆಯ ಟ್ರ್ಯಾಪ್‌ನಲ್ಲಿ ಬ್ಲ್ಯಾಕ್ ಪ್ಯಾಂಥರ್ ಸಿಲುಕಿಕೊಂಡಿದೆ. ಕರಿ ಚಿರತೆ ಸೆರೆ ಸಿಕ್ಕಿದಂತೇ ಹೊನ್ನಾವರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.