ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಷ್ಟೇ ಅಲ್ಲದೆ ಎಲ್ಲಾ ಸಮುದಾಯಗಳ ತಳವರ್ಗಗಳ ಮತ್ತು ಒಟ್ಟು ಸಮಾಜದ ನಿಜವಾದ ನಾಯಕ. ಆ ಅರ್ಥದಲ್ಲಿ, ಅವರು ಗ್ರಾಮ್ಶಿ ಪ್ರತಿಪಾದಿಸಿದ ಸಂಪೂರ್ಣ ‘ಆರ್ಗಾನಿಕ್ ಇಂಟಲೆಕ್ಚುಯಲ್’ ಎಂದು ಲೇಖಕ-ಚಿಂತಕ ಪ್ರೊ ಕೆ ಫಣಿರಾಜ್ ವಾದಿಸಿದರು.
ಉಡುಪಿ (ಏ.20) : ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಷ್ಟೇ ಅಲ್ಲದೆ ಎಲ್ಲಾ ಸಮುದಾಯಗಳ ತಳವರ್ಗಗಳ ಮತ್ತು ಒಟ್ಟು ಸಮಾಜದ ನಿಜವಾದ ನಾಯಕ. ಆ ಅರ್ಥದಲ್ಲಿ, ಅವರು ಗ್ರಾಮ್ಶಿ ಪ್ರತಿಪಾದಿಸಿದ ಸಂಪೂರ್ಣ ‘ಆರ್ಗಾನಿಕ್ ಇಂಟಲೆಕ್ಚುಯಲ್’ ಎಂದು ಲೇಖಕ-ಚಿಂತಕ ಪ್ರೊ ಕೆ ಫಣಿರಾಜ್ ವಾದಿಸಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(Gandhian Center for Philosophical Arts and Sciences) ನ ಆಶ್ರಯದಲ್ಲಿ ನಡೆದ 'ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಐತಿಹಾಸಿಕ ಮಹತ್ವ' ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಫಣಿರಾಜ್(Pro.Phaniraj), ಡಾ.ಅಂಬೇಡ್ಕರ್(Dr BR Ambedkar) ಅವರನ್ನು ಕೇವಲ ದಲಿತರ ನಾಯಕ ಎಂದು ಪ್ರತಿನಿಧಿಸುವುದು ತಪ್ಪು. ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯಗಳ ತಳ ವರ್ಗಗಳ ಬಗ್ಗೆ ಅವರು ಸಾಕಷ್ಟು ಕಾಳಜಿ ಹೊಂದಿದ್ದರು. ಜೀವನದ ಪ್ರತಿಯೊಂದು ರಂಗದಲ್ಲೂ ಪ್ರಜಾಸತ್ತಾತ್ಮಕ ಮೌಲ್ಯಗಳು ಇರಬೇಕು ಎಂದು ಅವರು ಬಯಸಿದ್ದರು. ಅವರು ರಾಜಕೀಯ ಪ್ರಜಾಪ್ರಭುತ್ವಕ್ಕಿಂತ ಸಾಮಾಜಿಕ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಪ್ರಜಾಸತ್ತಾತ್ಮಕ ಮೌಲ್ಯಗಳು ಕೇವಲ ರಾಜಕೀಯವಲ್ಲ, ಸಮಾಜದ ಭಾಗವಾಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
undefined
ಗ್ರಾಮಾಂತರಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ದೇಶದ ಆಸ್ತಿ
ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಕೆಲವು ಕಡೆ ಅಲ್ಲಗೆಳೆಯುತ್ತಿರುವುದು ವಿಷಾದನೀಯ. ಇದು ಸಂವಿಧಾನವನ್ನು, ವಿಶೇಷವಾಗಿ ಅದರ ಪ್ರಗತಿಪರ ಅಂಶಗಳನ್ನು ಎಲ್ಲಾ ವಿರೋಧಗಳ ನಡುವೆಯೂ ಗಂಟೆಗಳ ಕಾಲ ಪ್ರತಿಪಾದಿಸಿ ರಕ್ಷಿಸಿದ ವ್ಯಕ್ತಿಗೆ ದೊಡ್ಡ ಅನ್ಯಾಯ ಎಂದು ಪ್ರೊ ಫಣಿರಾಜ್ ಹೇಳಿದರು.
ಜಾತಿ ವ್ಯವಸ್ಥೆಯ ಹುಟ್ಟು ಕುರಿತು ಡಾ ಅಂಬೇಡ್ಕರ್ ಅವರ ವಿದ್ವತ್ಪೂರ್ಣ ಕೆಲಸ ಬಹಳ ವಿಶಿಷ್ಟವಾಗಿದೆ. ಇದು ಅನುಕರಣೆಯ ಸಿದ್ಧಾಂತವನ್ನು ಆಧರಿಸಿದೆ, ಅಂದರೆ ಮೇಲ್ಜಾತಿ ಎಂದು ಕರೆಯಲ್ಪಡುವವರು ಜಾತಿಯನ್ನು ರೂಪಿಸಿದರು ಮತ್ತು ಇತರ ಜಾತಿಗಳು ಅದನ್ನು ಅನುಕರಿಸಿದವು, ಇದರ ಪರಿಣಾಮವಾಗಿ ಈ ಕ್ಲಿಷ್ಟ ಸಮಾಜಿಕ ರಚನೆ ಹುಟ್ಟಿಕೊಂಡಿದೆ. ಅಂತಿಮವಾಗಿ, ಜಾತಿ ವ್ಯವಸ್ಥೆಯು ಲಿಫ್ಟ್ ಮತ್ತು ಮೆಟ್ಟಿಲುಗಳಿಲ್ಲದ ಬಹುಮಹಡಿ ಕಟ್ಟಡ- ಇಲ್ಲಿ ಯಾವುದೇ ಆಂತರಿಕ ಚಲನೆಯಿಲ್ಲ ಎಂದು ಪ್ರೊ ಫಣಿರಾಜ್ ಹೇಳಿದರು.
ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್ ಅದ್ಬುತ ಕೆಲಸ
ಮಹಾಡ್ ಸತ್ಯಾಗ್ರಹದಂತಹ ಉದಾಹರಣೆಗಳನ್ನು ಉಲ್ಲೇಖಿಸಿ, ಪ್ರೊ.ಫಣಿರಾಜ್ ಅವರು 'ಜಾತಿ ವಿನಾಶ' ಪ್ರಕ್ರಿಯೆ ಮತ್ತು ಎಲ್ಲಾ ತಳವರ್ಗಗಳ ಗೌರವಾನ್ವಿತ ಜೀವನ- ಡಾ ಅಂಬೇಡ್ಕರ್ ಅವರಿಗೆ ಅಹಿಂಸಾತ್ಮಕವಾಗಿ ದೊರಕುವುದು ಅಗತ್ಯವಾಗಿತ್ತು ಎಂದು ಹೇಳಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಡಾ.ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಡಾ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಸಂಯೋಜಿತ ದೃಷ್ಟಿಕೋನಗಳು ಸಂಪೂರ್ಣವಾದ ವಿಶ್ವಾತ್ಮಕ ದೃಷ್ಟಿಕೋನವಾಗಿದೆ ಎಂದರು