ಎಲ್ಲ ವರ್ಗಗಳ ಹಿತರಕ್ಷಣೆ ಬಿಜೆಪಿಯ ಆದ್ಯತೆ: ಸಿ.ಟಿ.ರವಿ

By Kannadaprabha News  |  First Published Jan 29, 2023, 9:41 PM IST

ಕೇಂದ್ರ ಸರ್ಕಾರ ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಸಂಕಲ್ಪವನ್ನು ಸಾಕಾರಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದರು. 


ದೊಡ್ಡಬಳ್ಳಾಪುರ (ಜ.29): ಕೇಂದ್ರ ಸರ್ಕಾರ ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಸಂಕಲ್ಪವನ್ನು ಸಾಕಾರಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದರು. ಇಲ್ಲಿನ ಮಾಂಗಲ್ಯ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ವಿಕಾಸ ಭಾರತದ ವಿಕಾಸ ಎಂಬ ಪರಿಕಲ್ಪನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆದಿವೆ ಎಂದ ಅವರು, ವಿಶ್ವ ಮಟ್ಟದಲ್ಲಿ ಭಾರತದ ಘನತೆ ಉತ್ತುಂಗಕ್ಕೇರಲು ಪ್ರಧಾನಿ ಅವರ ಹಲವು ದಿಟ್ಟಕ್ರಮಗಳು ಕಾರಣವಾಗಿವೆ ಎಂದರು.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಶಿಸ್ತುಬದ್ಧವಾಗಿದ್ದು, ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದಲ್ಲಿ ಶಾಂತಿ, ಸಹಬಾಳ್ವೆಗೆ ಭಂಗ ತರುವ ಯಾವುದೇ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರ ಬದ್ಧವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊರೋನಾ ನಿಗ್ರಹದ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾತಿ, ಧರ್ಮ, ಕುಲ, ಮತ ನೋಡಲಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ದೇಶವನ್ನು ರಕ್ಷಿಸುವ ಕೆಲಸ ನಡೆಯಿತು. ದೇಶದ ಈ ನಡೆ ಜಾಗತಿಕ ಮನ್ನಣೆಗೂ ಪಾತ್ರವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಪ್ರಧಾನಿ ಅವರ ಕೊಡುಗೆ ದೊಡ್ಡದು ಎಂದರು.

Latest Videos

undefined

ತಾರಕ ರತ್ನ ಆರೋಗ್ಯದಲ್ಲಿ ಅಲ್ಪ ಚೇತರಿಕೆ: ಆಸ್ಪತ್ರೆಗೆ ಕುಟುಂಬ ಮತ್ತು ಗಣ್ಯರ ದಂಡು

ಮಕ್ಕಳಲ್ಲಿ ಜಾತಿ-ಧರ್ಮದ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದು ಕಾಂಗ್ರೆಸ್‌ ಎಂದು ಆರೋಪಿಸಿದ ಅವರು, ನಿರ್ದಿಷ್ಟಸಮುದಾಯಗಳ ಓಲೈಕೆ ರಾಜಕಾರಣ ಮಾಡಿದ್ದು ಯಾರು ಎಂಬುದು ದೇಶಕ್ಕೇ ಗೊತ್ತಿದೆ. ಇಂತಹ ಜನ ಬಿಜೆಪಿಗೆ ಪಾಠ ಹೇಳೋದು ನೋಡಿದ್ರೆ ಹಾಸ್ಯಾಸ್ಪದ ಎನಿಸುತ್ತದೆ ಎಂದರು. ಮೋದಿ ಕೊಡುವ ಸೌಲಭ್ಯ ಮಾತ್ರ ಬೇಕು, ಓಟು ಬೇರೆಯವರಿಗೆ ಎಂಬ ಧೋರಣೆಯಿಂದ ಜನತೆ ಹೊರಬಂದಿದ್ದಾರೆ. ಸ್ವಾರ್ಥ, ವಂಶಪಾರಂಪರ‍್ಯ ಆಡಳಿತವನ್ನು ಜನತೆ ಒಪ್ಪಿಕೊಳ್ಳುವ ಕಾಲ ಮುಗಿದಿದೆ. ಇನ್ನು ಸ್ವಾಭಿಮಾನಿ ಭಾರತೀಯರ ಯುಗಾರಂಭವಾಗಿದ್ದು, ಕಾಂಗ್ರೆಸ್‌, ಜೆಡಿಎಸ್‌ನ ಆಟ ನಡೆಯಲ್ಲ. 

ಸಂಘಟನೆಯನ್ನು ಎಲ್ಲ ಹಂತಗಳಲ್ಲಿ ಸದೃಢಗೊಳಿಸಿ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಬೇಕು. ಬಿಜೆಪಿಯ ಜನಪರ ಕಾರ‍್ಯಗಳನ್ನು ಜನರಿಗೆ ತಲುಪಿಸುವ ಮೂಲಕ ವಿಶ್ವಾಸ ವೃದ್ಧಿಸಬೇಕು ಎಂದು ಕರೆ ನೀಡಿದರು. ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮೇನಾರಾಯಣ್‌, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೇನಾರಾಯಣ್‌, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಗೋಪಿ, ಧೀರಜ್‌ ಮುನಿರಾಜ್‌, ಕೆ.ವಿ.ಸತ್ಯಪ್ರಕಾಶ್‌, ಪಕ್ಷದ ವಿವಿಧ ಘಟಕಗಳ ಮುಖಂಡರು ಉಪಸ್ಥಿತರಿದ್ದರು.

ನಿರ್ದಿಷ್ಟ ಸಮುದಾಯದ ಪತ್ರಿಕೆಗಳಿಗೆ ಜಾಹಿರಾತು: ನಿರ್ದಿಷ್ಟಸಮುದಾಯದ ಒಡೆತನದ ಪತ್ರಿಕೆಗಳಿಗೆ ಮಾತ್ರ ಸರ್ಕಾರದ ಜಾಹಿರಾತನ್ನು ಕಡ್ಡಾಯವಾಗಿ ನೀಡುವ ಕುರಿತು ಹರಡಿಸುವ ಸುದ್ದಿ ಸತ್ಯಕ್ಕೆ ದೂರ. ಇದೊಂದು ಸುಳ್ಳು ಸುದ್ದಿ. ಬಿಜೆಪಿ ಎಲ್ಲ ಜಾತಿ-ಸಮುದಾಯಗಳ ಪ್ರಾತಿನಿಧಿಕ ಸರ್ಕಾರ ಎಂದು ಹೇಳಿದರು. ಮುಂಚೆ ನಮ್ಮನ್ನು ಸಂವಿಧಾನ ವಿರೋಧಿ ಸರಕಾರ ಎನ್ನುತ್ತಿದ್ದರು. ಆದರೆ ಸಂವಿಧಾನ ದಿನಾಚರಣೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದದ್ದು ನರೇಂದ್ರ ಮೋದಿ ಸರ್ಕಾರ ಎಂಬುದು ಗಣನೀಯ. 

ಸಂವಿಧಾನಕ್ಕೆ ಮಹತ್ವದ ಗೌರವ ನೀಡುವ ಪ್ರಧಾನಿ, ಎಲ್ಲ ಹಂತದಲ್ಲೂ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಬಿಜೆಪಿಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದವರು ಈ ರೀತಿಯ ಸುಳ್ಳು ಸುದ್ದಿಯ ಮೂಲಕ ಅಪಪ್ರಚಾರ ಮಾಡುತ್ತಾರೆ ಎಂದು ಕುಟುಕಿದರು. ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಪ್ರವಾಸ ಮಾಡಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನೆರೆ ಬಂದಾಗ ನೆರವಾಗಿದ್ದು ಮೋದಿ ಸರ್ಕಾರವೇ ಹೊರತು ಕಾಂಗ್ರೆಸ್‌ ಅಲ್ಲ. ಕಿಸಾನ್‌ ಸಮ್ಮಾನ್‌, ಹಾಲಿಗೆ ಸಹಾಯ ಧನ, ಭಾಗ್ಯಲಕ್ಷ್ಮೇ ಯೋಜನೆ ಯಾರ ಕೊಡುಗೆ ಎಂಬುದನ್ನು ಟೀಕಾಕಾರು ಮನನ ಮಾಡಿಕೊಳ್ಳಬೇಕು ಎಂದರು.

ಪತ್ನಿ ಶೀಲ ಶಂಕಿಸಿ ಕೊಲೆ ಪ್ರಕರಣ: ಪರಾರಿಯಾಗುತ್ತಿದ್ದ ಆರೋಪಿ ಬಂಧನ

ಸಿದ್ದು-ಡಿಕೆಶಿ ನಡುವೆ ಆಂತರಿಕ ಕಚ್ಚಾಟ: ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಡುವೆ ಆತಂಕರಿಕ ಕಚ್ಚಾಟವಿದ್ದು, ಅದು ಮುಗಿಯದ ಅಧ್ಯಾಯ. ಯಾರಿಂದಲೂ ತೇಪೆ ಹಚ್ಚಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದರು. ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಕಾಂಗ್ರೆಸ್‌ನವರು ಫೆಬ್ರವರಿಯಲ್ಲಿ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಡಿಸೆಂಬರ್‌ನಲ್ಲೇ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಆಗಲಿಲ್ಲ. ಟಿಕೆಟ್‌ ಕೊಟ್ಟಬಳಿಕ ಏಳುವ ಅಸಮಾಧಾನ ಶಮನ ಮಾಡಲು ಸಾಧ್ಯವಿಲ್ಲದ ಸ್ಥಿತಿ ತಲುಪಿದೆ. ಹಾಗಾಗಿ ಪಟ್ಟಿಬಿಡುಗಡೆ ಮುಂದೂಡಲಾಗುತ್ತಿರಬಹುದು ಎಂದು ಲೇವಡಿ ಮಾಡಿದರು.

click me!