'ನನ್ನ ಹತ್ರ ಹಣ ಕೇಳಿದ್ರೆ ಕೊಟ್ಟುಬಿಡ್ತಿದ್ದೆ..' 13 ವರ್ಷದ ಮಗನನ್ನು ಕಳೆದುಕೊಂಡು ಶಕುಂತಲಾ ಕಣ್ಣೀರು!

By Santosh Naik  |  First Published Jan 11, 2025, 8:43 PM IST

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ತ್ರಿಶಾಲ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಗೆಳೆಯರ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.


ಬೆಂಗಳೂರು (ಜ.11): ಬಿಜೆಪಿ ಕಾರ್ತಕರ್ತೆ ಶಕುಂತಲಾ ನಟರಾಜ್‌ ಅವರ 13 ವರ್ಷದ ಪುತ್ರ, 7ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿ ತ್ರಿಶಾಲ್‌ ಆತ್ಮಹತ್ಯೆ ಪ್ರಕರಣ ರಾಜ್ಯಕ್ಕೆ ಅಚ್ಚರಿ ನೀಡಿದೆ. 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಆತ್ಮಹತ್ಯೆಯ ಯೋಚನೆ ಆದರೂ ಹೇಗೆ ಬರೋಕೆ ಸಾಧ್ಯ? ಅದರಲ್ಲೂ ಡೆತ್‌ ನೋಟ್‌ ಬರೆದಿಟ್ಟು ಸಾವುಗೆ ಶರಣಾಗುವ ಯೋಚನೆ ಹೇಗೆ ಬಂತು? ಅನ್ನೋದನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಹಲವು ವರದಿಗಳ ಪ್ರಕಾರ ಪಾರಿವಾಳದ ಬೆಟ್ಟಿಂಗ್‌ ವಿಚಾರದಲ್ಲಿ ಗೆಳೆಯರ ನಡುವಿನ ಗಲಾಟೆಯಲ್ಲಿ ಭಾಗಿಯಾಗಿದ್ದರಿಂದ ನೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. 

ಮಗನ ಸಾವಿಗೆ ಕಾರಣವೇನು ಅನ್ನೋದರ ಬಗ್ಗೆ ಶಕುಂತಲಾ ನಟರಾಜ್‌ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ವೈರಲ್‌ ಆಗಿದೆ. 'ಆತನ ಜೊತೆಯಲ್ಲಿದ್ದ ಹುಡುಗರು ಇವನ ಬಳಿ ಹಣ ಕೊಡು, ಹಣ ಕೊಡು ಎಂದು ಟಾರ್ಚರ್‌ ಮಾಡುತ್ತಿದ್ದರಂತೆ. ಇದನ್ನ ತ್ರಿಶಾಲ್‌ ನಮ್ಮಲ್ಲಿ ಯಾರಿಗೂ ಹೇಳಿರಲಿಲ್ಲ. ಆದ್ರೆ ಡೆತ್‌ನೋಟ್‌ನಲ್ಲಿ ಮಾತ್ರ ಈ ವಿಚಾರ ಬರೆದಿಟ್ಟಿದ್ದಾನೆ. ಹರ್ಷ ಅನ್ನೋ ಹುಡುಗನ ಹೆಸರು, ಹಾಗೂ ಆದಿತ್ಯ ಅನ್ನೋ ಹುಡುಗನ ಹೆಸರನ್ನು ಬರೆದಿಟ್ಟಿದ್ದಾನೆ. ಅವರಿಗೆ ಶಿಕ್ಷೆ ಆಗಲೇಬೇಕಮ್ಮ, ಅವರು ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಅಂತಾ ಬರೆದಿಟ್ಟಿದ್ದಾನೆ.

ಇವರ ನಡುವೆ ಏನು ವಿಚಾರ ನಡೆದಿತ್ತು ಅನ್ನೋದು ಗೊತ್ತಾಗಿಲ್ಲ. ಅವರ ದುಡ್ಡನ್ನು ತ್ರಿಶಾಲ್‌ನ ಸ್ನೇಹಿತ ಯಾರೋ ಕದ್ದಿದ್ದ. ಅದಕ್ಕಾಗಿ ಇವನ ಬಳಿ ಹಣ ಕೊಡು ಕೊಡು ಅಂತಾ ಪೀಡಿಸುತ್ತಿದ್ದರು. ಆದಿತ್ಯ ಅನ್ನೋ ಹುಡುಗ ದೊಡ್ಡವನೇ. ಆಗಲೇ ಅವನಿಗೆ 18 ವರ್ಷ ಆಗಿದೆ. ಅವನು ನನ್ನ ಮನೆಗೆ ಬಂದು ನನ್ನ ಹತ್ರ ಹಣ ಕೇಳಿದ್ರೆ ನಾವು ಏನೋ ಮಾಡುತ್ತಿದ್ದೆವು. ನಮಗೆ ಇಡೀ ವಿಚಾರವೇ ಗೊತ್ತಿಲ್ಲ. ಅಮ್ಮನಿಗೆ ತೊಂದರೆ ಆಗಬಾರದು ಅಂತಾ ಆತ್ಮಹತ್ಯೆ ಮಾಡಕೊಂಡಿದ್ದಾನೆ. ಏನೋ 4500 ರೂಪಾಯಿ ಕೊಡಬೇಕಿತ್ತಂತೆ. ಅದರ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ' ಎಂದು ಹೇಳಿದ್ದಾರೆ.

Tap to resize

Latest Videos

ತ್ರಿಶಾಲ್‌ ತನ್ನ ತಾಯಿ ಶಂಕುತಲಾ ಜೊತೆ ತುಮಕೂರಿನ ವಿಜಯನಗರದ 2 ನೇ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾಲಾ ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ, 7ನೇ ತರಗತಿ ವಿದ್ಯಾರ್ಥಿ ತ್ರಿಶಾಲ್ ನೇಣಿಗೆ ಶರಣು!

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ (Shakuntala Nataraj), ತಮ್ಮ ರಾಜಕೀಯ ನಿಲುವುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕಾರಿ ಟೀಕೆಗಳಿಂದ ಸದಾ ಚರ್ಚೆಯಲ್ಲಿರುವ ವ್ಯಕ್ತಿ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರ ಕುಟುಂಬದ ಬಗ್ಗೆ ಟೀಕಿಸಿ ಬಂಧನಕ್ಕೊಳಗಾಗಿದ್ದ ಇವರು, ವಿವಾದಗಳಿಂದಲೇ ಹೆಚ್ಚು ಪರಿಚಿತರಾಗಿದ್ದಾರೆ. 

ಆ.. 2,000 ವಿಡಿಯೋ, 15,000 ಫೋಟೋಗಳಿರುವ ಮೊಬೈಲ್ ವಾಪಸ್ ಕೊಡಿ; ಪ್ರಜ್ವಲ್ ರೇವಣ್ಣ ಮನವಿ!

click me!