ನಂಬಿಕೆಯೇ ದೇವರು ಎಂಬುದಕ್ಕೆ ನಾನೇ ಸಾಕ್ಷಿ: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha News  |  First Published Jan 11, 2025, 8:21 PM IST

ನಂಬಿಕೆಯೇ ದೇವರು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು. 
 


ಮಧುಗಿರಿ (ಜ.11): ನಂಬಿಕೆಯೇ ದೇವರು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು. ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಆವರಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು, ಚುನಾವಣೆಗೂ ಮುನ್ನವೇ ನಾನು ಕ್ಷೇತ್ರದ ಗ್ರಾಮದೇವತೆ ದಂಡಿಮಾರಮ್ಮ ಆಶಿರ್ವಾದ ಪಡೆದು ಕ್ಷೇತ್ರಕ್ಕೆ ಕಾಲಿರಿಸಿದೆ. ಆಗಲೇ ಈ ಕ್ಷೇತ್ರದ ಮಹಿಮೆ ಗ್ರಾಮದೇವತೆಯ ಶಕ್ತಿ ಬಗ್ಗೆ ಅರಿತಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರವಿದ್ದಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಾರೆಂದು ಅಪವಾದ ಮಾಡುತ್ತಾರೆ. 

ಆದರೆ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿದೆ. ಆದರೆ ಪ್ರಚಾರ ಗೀಳು ನಮಗಿಲ್ಲ, ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಗೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಿದ್ದು. ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ. ಮಧುಗಿರಿ ಹಾಗೂ ಕೊರಟಗೆರೆ ತಾಲೂಕುಗಳಿಗೆ ಇದರ ಪ್ರಯೋಜನವಾಗಲಿದೆ. ಅಲ್ಲದೆ ಇದರ ಮೂಲಕ ಕೋಲಾರಕ್ಕೆ ಲಿಂಕ್‌ ಮಾಡಲು ಒತ್ತಾಯವಿದ್ದು, ಈ ಬಗ್ಗೆ ತಾಂತ್ರಿಕ ಸಲಹೆ ಕೇಳಿದ್ದೇನೆ ಎಂದರು.

Tap to resize

Latest Videos

ಭದ್ರಾ ಮೇಲ್ದಂಡೆ ಯೋಜನೆಯನ್ನು ಗೋವಿಂದ ಕಾರಜೋಳ ಕ್ಷೇತ್ರ ಶಿರಾ, ಪಾವಗಡ ಕ್ಷೇತ್ರಗಳಿಗೂ ನೀರು ಹರಿಸಲು ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಯಾವುದು ಶಾಶ್ವತವಲ್ಲ, ಅಧಿಕಾರದಲ್ಲಿದಾಗಿನ ಗಮ್ಮತ್ತು ಸಾರ್ವಜನಿಕರ ಕೆಲಸ ಮಾಡಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲಿದೆ ಎಂದರು. ಕೇಂದ್ರ ಸರ್ಕಾರದ ಹೆಚ್ಚು ಅನುದಾನವನ್ನು ತುಮಕೂರು ಜಿಲ್ಲೆಗೆ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಿಲ್ಲೆಯಲ್ಲಿನ ವಿಶೇಷಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. 75 ವರ್ಷ ತುಂಬಿದವರಿಗೆ ಮೋದಿಜಿ ಸರ್ಕಾರ 1400 ರು.ಮಾಸಾಶನ ನೀಡಲಿದೆ ಎಂದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಕ್ರಮ: ಕೇಂದ್ರ ಸಚಿವ ವಿ.ಸೋಮಣ್ಣ

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಬಿಜೆಪಿ ಮುಖಂಡ ಎಲ್‌ಸಿ ನಾಗರಾಜು, ಪುರವರಮೂರ್ತಿ, ರಾಮದಾಸ್‌, ಎಸಿ ಗೋಟೂರು ಶಿವಪ್ಪ, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌, ಇಒ ಲಕ್ಷ್ಮಣ್‌, ಬಿಇಒ ಕೆ.ಎನ್‌.ಹನುಮಂತರಾಯಪ್ಪ ಹಾಗೂ ಬಿಜೆಪಿ , ಜೆಡಿಎಸ್‌ ಮುಖಂಡರು ಇದ್ದರು.

click me!