ರಾಜ್ಯದ ಉಪ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ದಿನದಲ್ಲಿ ಚುನಾವಣೆ ನಡೆಯಲಿದ್ದು, ಗೆಲುವಿನ ಸಂಪೂರ್ಣ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.
ಶಿವಮೊಗ್ಗ [ಡಿ.04]: ಮತ್ತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಖರ್ಗೆ ಅಥವಾ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಖರ್ಗೆನೂ ಸಿಎಂ ಆಗಲ್ಲ, ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಆಗಲ್ಲ. ರಾಜ್ಯದ ಜನರು ಬಿಜೆಪಿ ಪರವಾಗಿದ್ದಾರೆ. ನಮ್ಮ ಸರ್ಕಾರಕ್ಕೆ ಪೂರ್ಣ ಬಹುಮತ ಬರಲಿದೆ ಎಂದು ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿ ಮುಂದಿನ ಮೂರುವರೆ ವರ್ಷ ಸ್ಥಿರ ಸರ್ಕಾರ ಇರಬೇಕೋ ಬೆಡವೋ ಎಂದು ಜನ ತೀರ್ಮಾನ ಮಾಡುತ್ತಾರೆ. ರಾಜ್ಯದ ಜನತೆ ಪೂರ್ಣ ಬಹುಮತ ನೀಡುತ್ತಾರೆ ಎನ್ನುವ ಪೂರ್ಣ ವಿಶ್ವಾಸ ಇದೆ ಎಂದರು.
ಇನ್ನು 15 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಅವಕಾಶ ಹೆಚ್ಚೇ ಇದೆ. ಆದರೆ 8 ಸ್ಥಾನಕ್ಕಿಂತ ಕಡಿಮೆ ಬಿಜೆಪಿಗೆ ಬಾರದೆ ಇರಲು ಸಾಧ್ಯವಿಲ್ಲ. ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಡಿಸೆಂಬರ್ 9ರ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವ ನಾಯಕರಿಗೆ ತಮ್ಮ ಸೋಲಿನ ಕುರಿತು ಮರೆತು ಹೋಗಿದೆ. ಖರ್ಗೆ ಗುಲ್ಬರ್ಗದಲ್ಲಿ ಸೋತಿರುವುದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದನ್ನು ಮರೆತಿದ್ದಾರೆ. ನಿಖಿಲ್ ಲೋಕಸಭಾ ಚುನಾವಣೆ ಸೋತಿದ್ದನ್ನು ಕುಮಾರಸ್ವಾಮಿ ಮರೆತಿದ್ದಾರೆ. ಎಷ್ಟು ಕ್ಷೇತ್ರದಲ್ಲಿ ಡಿಪಾಸಿಟ್ ಉಳಿಸಿಕೊಳ್ಳುತ್ತೀರಾ ಎನ್ನುವುದನ್ನು ನೋಡಿಕೊಳ್ಳಿ ಎಂದು ಈಶ್ವರಪ್ಪ ಹೇಳಿದರು.
ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!...
ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಸರ್ಕಾರ ಮಾಡಿಕೊಂಡು ರಾಜ್ಯ ಹಾಳು ಮಾಡಿದ್ರಿ ಎಂದು ನಿಮ್ಮ ಶಾಸಕರೇ ನಿಮ್ಮನ್ನು ಬಿಟ್ಟು ಹೊರಗೆ ಬಂದರು. ಇದ್ರಿಂದ ನಿಮ್ಮ ಸರ್ಕಾರ ಬಿದ್ದು ಹೋಯ್ತು ಎಂದು ಈಶ್ವರಪ್ಪ ಹೇಳಿದರು.
ನಾವು ಯಾಕೆ ಬಿಜೆಪಿ ಜೊತೆ ಹೋಗಬಾರದು ಅಂತಾ ಹಲವು ಶಾಸಕರು ಮನಸು ಮಾಡುತ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಕಾಲ ಕರ್ನಾಟಕದಲ್ಲಿ ಮುಗಿಯಿತು. ಯಾವ ರೀತಿ ದೇಶದಲ್ಲಿ ಬಿಜೆಪಿ ಇದೆಯೋ, ಅದೇ ರೀತಿ ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ಇರಲಿದೆ ಎಂದರು.
ಇನ್ನು ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ನಿವಾಸದ ಮೇಲೆ ಐಟಿ ದಾಳಿ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ತಮಗೆ ಈ ವಿಚಾರಗಳ ಬಗ್ಗೆ ತಿಳಿದಿಲ್ಲ ಎಂದರು.
ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು,9ರಂದು ಫಲಿತಾಂಶ ಪ್ರಕಟವಾಗಲಿದೆ