‘ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತವಾಗಿ ಸಂಚು ಮಾಡಲಾಗಿದೆ’

By Suvarna News  |  First Published Dec 4, 2019, 2:45 PM IST

ಜೋಡೆತ್ತಿನ ಸಭೆಯ ಉದ್ದೇಶವೇ ಸಿದ್ದರಾಮಯ್ಯನನ್ನು ಸರಿಸಿ ತಾವು ಅಧಿಕಾರಕ್ಕೆ ಬರಬೇಕು ಎನ್ನುವುದಾಗಿದೆ| ಇವರ ಕುತಂತ್ರ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ| ಸಿದ್ದರಾಮಯ್ಯ ತಾವು ಸುಮ್ಮನೆ ಇದ್ದು ಕಾಂಗ್ರೆಸ್ಸಿಗರು ಸೋಲುವಂತೆ ನಡುವಳಿಕೆ ತೋರಿಸಬೇಕು ಇದರಿಂದ ನಿಮಗೆ ಅನುಕೂಲವಾಗಲಿದೆ  ಎಂದು ಸಿದ್ದರಾಮಯ್ಯಗೆ ವಿನಂತಿಸಿದ ಯತ್ನಾಳ|


ವಿಜಯಪುರ[ಡಿ.04]:  ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲಾಗುತ್ತಿದೆ. ಮೊನ್ನೆ ಹೆಚ್ ಡಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಜೋಡೆತ್ತುಗಳು ನಡೆಸಿದ ಸಭೆ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತವಾಗಿ ಸಂಚು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೋಡೆತ್ತಿನ ಸಭೆಯ ಉದ್ದೇಶವೇ ಸಿದ್ದರಾಮಯ್ಯನನ್ನು ಸರಿಸಿ ತಾವು ಅಧಿಕಾರಕ್ಕೆ ಬರಬೇಕು ಎನ್ನುವುದಾಗಿದೆ. ಇವರ ಕುತಂತ್ರ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ, ಹಾಗಾಗಿ ಜೋಡೆತ್ತುಗಳು ಅದರಲ್ಲಿ ಅವರು ಸಂಪೂರ್ಣ ವಿಫಲರಾಗುತ್ತಾರೆ. ಸಿದ್ದರಾಮಯ್ಯ ಅವರು ತಾವು ಸುಮ್ಮನೆ ಇದ್ದು ಕಾಂಗ್ರೆಸ್ಸಿಗರು ಸೋಲುವಂತೆ ನಡುವಳಿಕೆ ತೋರಿಸಬೇಕು. ಇದರಿಂದ ನಿಮಗೆ ಅನುಕೂಲವಾಗಲಿದೆ  ಎಂದು ಸಿದ್ದರಾಮಯ್ಯ ಅವರಿಗೆ ಯತ್ನಾಳ ವಿನಂತಿಸಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ದಿನೇಶ ಗುಂಡೂರಾವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಲ್ಲಿ ಭಯವಿದೆ, ಅವರ ಕೈಯಲ್ಲಿ ಶಾಸಕರುಗಳು ಉಳಿದಿಲ್ಲ. ಹಾಗೇ ಕುಮಾರಸ್ವಾಮಿ ಅವರ ಕೈಯಲ್ಲೂ ಸಹ ಅವರ ಶಾಸಕರು ಉಳಿದಿಲ್ಲ. ಬೈ ಎಲೆಕ್ಷನ್ ನಲ್ಲಿ ಗೆದ್ದು ಮತ್ತೆ ಅಧಿಕಾರ ನಡೆಸಬೇಕು ಎಂದು ಅವರು ಕನಸು ಕಂಡಿದ್ರು. ಆದರೆ  ಕಳೆದ ಮೂರ್ನಾಲ್ಕು ದಿನಗಳಲ್ಲಿ ಅವರಿಗೆ ಚಿತ್ರಣ ಗೊತ್ತಾಗಿದೆ, ಹಾಗಾಗಿ ದಿನೇಶ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 9ರ ಬಳಿಕ ಸಂಪೂರ್ಣ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಚಿತ್ರಣವಿದೆ. ಮುಂದಿನ ಮೂರೂವರೆ ವರ್ಷ ಬಿ ಎಸ್ ಯಡಿಯೂರಪ್ಪ ಅವರೇ ಸಿಎಂ‌ ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ. 

ಮತ್ತೆ ಪಕ್ಷದಲ್ಲಿ ಅಸಮಾಧಾನ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಆಗಬೇಕು ಎಂದು ಅಸಮಾಧಾನ ಆಗುವವರೇ ನಾವು, ನಾವೇ ಆಗೋದಿಲ್ಲ ಅಂದ ಮೇಲೆ ಯಾರೂ ಅಸಮಾಧಾನ ಆಗಲ್ಲ. ಸರ್ಕಾರ ಉಳಿಯಬೇಕು ಎಂದು ನಾವೇ ಮುಖ್ಯಮಂತ್ರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ.  ನಮ್ಮ ಅಭಿಮಾನಿಗಳ ಭಾವನೆ ಮಂತ್ರಿ ಆಗಬೇಕು ಎಂಬುದು ಸಹಜ, ಅದನ್ನು ನಾನು ದೊಡ್ಡದು ಮಾಡೋದಿಲ್ಲ. ಉಪಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನ ಬಿಜೆಪಿಗೆ ಸಿಗಲಿದೆ. ಬಿ ಎಸ್ ವೈ ಅವರ ನೇತ್ರತ್ವದಲ್ಲಿ ಸುಭದ್ರ ಸರ್ಕಾರ ನಡೆಯಲಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!