ಬಿಜೆಪಿ‌ ಬರುತ್ತೆ, ನಾವು ಸಾಯ್ತೇವೆ ಎಂದ ಹಿರಿಯ ಕೈ ಮುಖಂಡ

By Suvarna News  |  First Published Dec 9, 2019, 12:57 PM IST

ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಈಗಾಗಲೇ ಬಿಜೆಪಿ ಹಲವು ಕಡೆ ಗೆಲುವಿನ ನಗೆ ಬೀರಿದೆ. ಈ ಸಂದರ್ಭ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ನಾನು ಹೇಳಿದ ಕಾಂಗ್ರೆಸ್ ಭವಿಷ್ಯ ನಿಜವಾಗಿದೆ ಎಂದು ಹೇಳಿದ್ದಾರೆ.


ಮಂಗಳೂರು(ಡಿ.09): ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಈಗಾಗಲೇ ಬಿಜೆಪಿ ಹಲವು ಕಡೆ ಗೆಲುವಿನ ನಗೆ ಬೀರಿದೆ. ಈ ಸಂದರ್ಭ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ನಾನು ಹೇಳಿದ ಕಾಂಗ್ರೆಸ್ ಭವಿಷ್ಯ ನಿಜವಾಗಿದೆ ಎಂದು ಹೇಳಿದ್ದಾರೆ.

'ಅನರ್ಹತೆ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು'..!

Tap to resize

Latest Videos

undefined

ಈ ಹಿಂದೆ ಹಲವು ಬಾರಿ ಜನಾರ್ಧನ ಪೂಜಾರಿ ಅವರು, ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಹಿನ್ನೆಲೆ ಮಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಭವಿಷ್ಯವನ್ನ ನಾನು ಮೊದಲೇ ಹೇಳಿದ್ದೇನೆ. ನಮ್ಮ ಪಕ್ಷದವರಿಗೆ ಅರ್ಥ ಮಾಡಿಕೊಳ್ಳಿ ಎಂದು ಹೇಳಿದೆ ಎಂದಿದ್ದಾರೆ.

ಬಿಜೆಪಿ‌ ಅಧಿಕಾರಕ್ಕೆ ಬರುತ್ತದೆ, ನಾವು ಸಾಯುತ್ತೇವೆ

ನೀವು ದುರಹಂಕಾರ ಮಾಡಿದ್ರೆ ಬಿಜೆಪಿಯನ್ನ ತಡೆಯಲು ಆಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದೆ. ಕೈ ಮುಗಿದು ಪ್ರಾರ್ಥನೆ ಮಾಡಿದ್ರೂ, ಕಣ್ಣೀರು ಸುರಿಸಿದ್ರೂ ನಮ್ಮ ಪಾರ್ಟಿಯವರಿಗೆ ಅರ್ಥ ಆಗಿಲ್ಲ. ಕೆಲ ತಿಂಗಳ ಹಿಂದೆಯೇ ಸರಿ ಮಾಡಿಕೊಳ್ಳಿ ಎಂದು ಹೇಳಿದೆ. ದುರಹಂಕಾರ ಮಾಡಬೇಡಿ ಎಂದು ಸೂಚನೆ ಕೊಟ್ಟೆ. ನನ್ನ ಮಾತು ಕೇಳಿಲ್ಲ, ಇವತ್ತು ಅನುಭವಿಸಿದ್ದಾರೆ, ಮುಂದೆಯೂ ಅನುಭವಿಸುತ್ತಾರೆ. ಬಿಜೆಪಿ‌ ಅಧಿಕಾರಕ್ಕೆ ಬರುತ್ತದೆ, ನಾವು ಸಾಯುತ್ತೇವೆ ಎಂದು ಹೇಳಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್: ಅನರ್ಹರು ಈಗ ಅರ್ಹರು, ಸೋತ್ರು ವಿಶ್ವನಾಥ್‌ಗೆ ಸಿಕ್ತು ಭರವಸೆ

click me!