ಯೋಗದ ಮೂಲಕ ಭಾರತ ಜಗತ್ತಿಗೆ‌ ಮಹತ್ತರ ಕೊಡುಗೆ ನೀಡಿದೆ: ನಳಿನ್‌ ಕುಮಾರ್ ಕಟೀಲ್‌

By Suvarna NewsFirst Published Jun 21, 2020, 11:03 AM IST
Highlights

ಯೋಗ ಮನಸ್ಸು ಬುದ್ದಿಯ ಮೂಲಕ ಭಗವಂತ, ಮೋಕ್ಷವನ್ನು ಕಾಣುವ ಪದ್ಧತಿ| ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಮಹತ್ವದ ಕೊಡುಗೆ ನೀಡಿದೆ| ಕೇವಲ ನಮ್ಮ ದೇಶದಲ್ಲಿ ಉಳಿಸದ ಜಗತ್ತಿಗೆ ಯೋಗ ಪರಿಚಯ|
ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಯೋಗ ಇಂದು ವಿಶ್ವ ಯೋಗ ದಿನವಾಗಿ ಆಚರಣೆ| 

ಬೆಂಗಳೂರು(ಜೂ.21): ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿಯಾಗಿದೆ. ಯೋಗದ ಮೂಲಕ ಭಾರತ ಜಗತ್ತಿಗೆ‌ ಮಹತ್ತರ ಕೊಡುಗೆಯನ್ನು ನೀಡಿದೆ. ವಿಜ್ಞಾನ, ಗಣಿತದಿಂದ ಹಿಡಿದು ಹಲವು ಕೊಡುಗೆಯಲ್ಲಿ ಯೋಗವೂ ಕೂಡ ಒಂದಾಗಿದೆ. ಇಂದು ಯೋಗ ಆಧ್ಯಾತ್ಮದ ಒಂದು ಭಾಗವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ. 

ಇಂದು(ಭಾನುವಾರ) ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಾಣುವುದಾಗಿದೆ, ಯೋಗದ ಮೂಲಕ ಕಣ್ಣು ಮುಚ್ಚಿ ಭಗವಂತನ ಧ್ಯಾನ ಮಾಡಿದರೆ, ಉಳಿದವು ಕಣ್ಣು ಬಿಟ್ಟು ಭಗವಂತನ ಕಾಣುವ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚಣೆ: ಇಲ್ಲಿವೆ ಫೋಟೋಸ್

ಯೋಗ ಮನಸ್ಸು ಬುದ್ದಿಯ ಮೂಲಕ ಭಗವಂತ, ಮೋಕ್ಷವನ್ನು ಕಾಣುವ ಪದ್ಧತಿಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಮಹತ್ವದ ಕೊಡುಗೆ ನೀಡಿದೆ. ಕೇವಲ ನಮ್ಮ ದೇಶದಲ್ಲಿ ಉಳಿಸದ ಜಗತ್ತಿಗೆ ಯೋಗವನ್ನು ಪರಿಚಯಿಸಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಯೋಗ ಇಂದು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
 

click me!