ಇದೆ ಮೊದಲ ಬಾರಿಗೆ ಚ.ಕಿತ್ತೂರು ತಾಲೂಕಿಗೂ ಲಗ್ಗೆ ಇಟ್ಟ ಕೊರೋನಾ| ಬಾಲಕ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ| ಸೋಂಕಿತ ಬಾಲಕ ಇದೆ ಕಲಬಾಂವಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿದ್ದ. ಮುಂಬರಲಿರುವ ಪರೀಕ್ಷೆ ಕೂಡ ಈತ ಬರೆಯಬೇಕಿತ್ತು|
ಚನ್ನಮ್ಮನ ಕಿತ್ತೂರು(ಜೂ.21): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ 16 ವರ್ಷದ ಬಾಲಕನಿಗೆ (ಪಿ 8299) ಕೊರೋನಾ ಸೋಂಕು ತಗುಲಿರುವ ಘಟನೆ ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಕಲಬಾಂವಿಯಲ್ಲಿ ನಡೆದಿದೆ.
ಇದೆ ಮೊದಲ ಬಾರಿಗೆ ಚ.ಕಿತ್ತೂರು ತಾಲೂಕಿಗೂ ಕೊರೋನಾ ಲಗ್ಗೆ ಇಟ್ಟಿದೆ. ಈತ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಇದೆ ಕಲಬಾಂವಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿದ್ದ. ಮುಂಬರಲಿರುವ ಪರೀಕ್ಷೆ ಕೂಡ ಈತ ಬರೆಯಬೇಕಿತ್ತು. ಆದರೆ, ಈಗ ಆತನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷೆ ಎದುರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.
ಬೆಳಗಾವಿ: SSLC ವಿದ್ಯಾರ್ಥಿ ನೇಣಿಗೆ ಶರಣು
ಬಾಲಕ ಈ ಹಿಂದೆ ಚೆನ್ನೈನಲ್ಲಿರುವ ಆತನ ಅಕ್ಕನ ಮನೆಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಜೂ.1ರಂದು ಈತ ಕಲಭಾಂವಿ ಗ್ರಾಮಕ್ಕೆ ಆಗಮಿಸಿದ್ದ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಈ ವಿಚಾರ ತಾಲೂಕಾಡಳಿತಕ್ಕೂ ತಿಳಿದಿದ್ದರಿಂದ, ಅಧಿಕಾರಿಗಳು ವಿಚಾರಣೆ ನಡೆಸಿ ಬಾಲಕನನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಿದ್ದರು. ನಂತರ ಅಧಿಕಾರಿಗಳು ಜೂ.16ಕ್ಕೆ ಈ ಯುವಕನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಈಗ ಕೊರೋನಾ ಸೋಂಕು ದೃಢವಾಗಿದೆ. ಹೀಗಾಗಿ ಅಧಿಕಾರಿಗಳು ಕಲಭಾಂವಿ ಗ್ರಾಮದ ಬಾಲಕನನ್ನು ತುರ್ತು ಚಿಕಿತ್ಸಾ ವಾಹನದಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಜೊತೆಗೆ ಮನೆಯ ಸುತ್ತಲೂ 100 ಮೀ. ಪ್ರದೇಶವನ್ನೂ ಸೀಲ್‌ಡೌನ್ ಮಾಡಿದ್ದಾರೆ. ಅಲ್ಲದೆ ಪ್ರಾಥಮಿಕ ಸಂಪರ್ಕದಲ್ಲಿ ಒಟ್ಟು 5 ಜನರಿದ್ದು ಅವರ ಮೇಲೆಯೂ ಹಾಗೂ ದ್ವಿತೀಯ ಸಂಪರ್ಕದ್ದ 10 ಜನರ ಮೇಲೆಯೂ ತಾಲೂಕಾಡಳಿತ ನಿಗಾ ವಹಿಸಿದೆ.