* ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದು ಅದು ಪ್ರಧಾನ ಮಂತ್ರಿಗಳ ವಿವೇಚನಾಧಿಕಾರ
* ನಮ್ಮ ತಂದೆ ತೀರಿಕೊಂಡು ಇಪ್ಪತ್ತು ದಿನ ಆಗಿದೆ. ನಾನು ಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ
* ನನ್ನ ಪಾಡಿಗೆ ನಾನು ಸಂಸದನಾಗಿ ಕೆಲಸ ಮಾಡ್ತಿದ್ದೇನೆ: ಉದಾಸಿ
ಹಾವೇರಿ(ಜು.01): ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತೆ ಎಂದು ಸಂಸದ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟದಲ್ಲಿ ನೀಡುವುದು ಅದು ಪ್ರಧಾನ ಮಂತ್ರಿಗಳ ವಿವೇಚನಾಧಿಕಾರ. ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಶಿವಕುಮಾರ ಉದಾಸಿ ಕೈ ಮುಗಿದರು.
ಬೆಳೆವಿಮೆ ಕಂತು ಕಟ್ಟಿ ಯೊಜನೆಯಲ್ಲಿ ಪಾಲ್ಗೊಳ್ಳುವಂತೆ ಉದಾಸಿ ಮನವಿ
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉದಾಸಿ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಂದೆ ತೀರಿಕೊಂಡು ಇಪ್ಪತ್ತು ದಿನ ಆಗಿದೆ. ನಾನು ಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನು ಸಂಸದನಾಗಿ ಕೆಲಸ ಮಾಡ್ತಿದ್ದೇನೆ ಎಂದರು.