ತೇಜಸ್ವಿ ಸೂರ್ಯ ಅವರನ್ನು ಟೀಕಿಸುತ್ತ ಈ ವಿಚಾರದಲ್ಲಿ ಹಿಮ್ಮುಖರಾಗುವಂತೆ ಮಾಡುತ್ತಿದೆ. ಇದು ಸರಿಯಲ್ಲ| ವಿರೋಧ ಪಕ್ಷಗಳು ಒಳ್ಳೆಯ ಕೆಲಸ ಮಾಡಿದ ಸಂಸದನನ್ನು ಟೀಕಿಸಲು ಸಮಯ ವ್ಯರ್ಥ ಮಾಡುವ ಬದಲು. ತಮ್ಮ ಕ್ಷೇತ್ರಗಳಲ್ಲಿ ಬೆಡ್‌ಗಳ ವ್ಯವಸ್ಥೆಯನ್ನ ಮಾಡಲಿ: ಪ್ರತಾಪ್ ಸಿಂಹ|
ಮೈಸೂರು(ಮೇ.08): ಬಿಬಿಎಂಪಿಯ ಬೆಡ್ ಬ್ಲಾಕ್ ದಂಧೆಯನ್ನ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಬಹಳ ಒಳ್ಳೆಯ ಕೆಲಸವನ್ನ ಮಾಡಿದ್ದಾರೆ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಬೇರೆ ಕಡೆಗಳಲ್ಲಿ ತೇಜಸ್ವಿ ಸೂರ್ಯ ಅವರನ್ನ ಟೀಕಿಸುತ್ತಿರುವುದಕ್ಕೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಅವರನ್ನು ಟೀಕಿಸುತ್ತ ಈ ವಿಚಾರದಲ್ಲಿ ಹಿಮ್ಮುಖರಾಗುವಂತೆ ಮಾಡುತ್ತಿದೆ. ಇದು ಸರಿಯಲ್ಲ. ವಿರೋಧ ಪಕ್ಷಗಳು ಒಳ್ಳೆಯ ಕೆಲಸ ಮಾಡಿದ ಸಂಸದನನ್ನು ಟೀಕಿಸಲು ಸಮಯ ವ್ಯರ್ಥ ಮಾಡುವ ಬದಲು. ತಮ್ಮ ಕ್ಷೇತ್ರಗಳಲ್ಲಿ ಬೆಡ್‌ಗಳ ವ್ಯವಸ್ಥೆಯನ್ನ ಮಾಡಲಿ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
undefined
ಚಾಮರಾಜನಗರ, ಮಂಡ್ಯ, ಹಾಸನ ನಾವು ಸಹೋದರರಿದ್ದಂತೆ. ಆದರೆ, ಇದೀಗ ಆಕ್ಸಿಜನ್ ವಿಚಾರದಲ್ಲಿ ನಮ್ಮ ನಡುವೆ ವಿರಸ ಮೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಪರಿಸ್ಥಿತಿ ನಿಲ್ಲಬೇಕಾದರೆ ರಾಜ್ಯ ಸರ್ಕಾರ ಕೂಡಲೇ ಜಿಲ್ಲಾವಾರು ಆಕ್ಸಿಜನ್ ಕೋಟಾ ನಿಗಧಿ ಮಾಡಬೇಕು. ಕೋಟಾ ನಿಗಧಿಯಾಗದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಮಾಡಿದ್ದೇವೆ; ಪ್ರತಾಪ್ ಸಿಂಹ ಸ್ಪಷ್ಟನೆ
ಮಂಡ್ಯ, ಚಾಮರಾಜನಗರದವರು ಇಲ್ಲಿಗೆ ಬಂದಾಗ ನಮಗೆ ಆಕ್ಸಿಜನ್ ಕೊಡಲು ಸಾಧ್ಯವಾಗದಿದ್ದರೆ. ಮೈಸೂರನ್ನ ಮತ್ತೆ ಕಟಕಟೆಯಲ್ಲಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೆ ಸರ್ಕಾರ ಕೂಡ ಅವಕಾಶ ಮಾಡಿ ಕೊಡಬಾರದು. ನಾನು ಬಹಳ ಸದುದ್ದೇಶದಿಂದ ಆಕ್ಸಿಜನ್ ಕೋಟಾ ನಿಗಧಿಗೆ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ 7 ಸಾವಿರ ಬೆಡ್‌ಗಳ ಆಕ್ಸಿಜನ್ ವ್ಯವಸ್ಥೆ ಆಗುತ್ತಿದೆ. ನಮಗೂ ಆಕ್ಸಿಜನ್ ಕೊರತೆ ಉಂಟಾಗಬಹುದು. ಸರ್ಕಾರ ತುರ್ತಾಗಿ ಕೋಟಾ ನಿಗದಿ ಮಾಡಲಿ. ಸಿಎಂ ಬಿ.ಎಸ್. ಯಡಿಯೂರಪ್ಪನವರು ಇದನ್ನ ಆದಷ್ಟು ಬೇಗ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona