ಭೋವಿ ನಿಗಮದ ಹಗರಣ: ಸಿಐಡಿ ದಾಳಿ, ನನ್ನ ಮನೆಯಲ್ಲಿ ಬದನೇಕಾಯಿಯೂ ಸಿಗಲ್ಲ, ಸುನೀಲ್ ವಲ್ಯಾಪುರೆ

Published : Oct 19, 2024, 04:29 PM IST
ಭೋವಿ ನಿಗಮದ ಹಗರಣ: ಸಿಐಡಿ ದಾಳಿ, ನನ್ನ ಮನೆಯಲ್ಲಿ ಬದನೇಕಾಯಿಯೂ ಸಿಗಲ್ಲ, ಸುನೀಲ್ ವಲ್ಯಾಪುರೆ

ಸಾರಾಂಶ

ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ ನೀಡುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ‌: ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ 

ಕಲಬುರಗಿ(ಅ.19):  ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ನಾನೇ ಧ್ವನಿ ಎತ್ತಿದ್ದೆ. ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದ್ದೆ. ಈ ಹಗರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅವರೇ ನನ್ನ ಮೇಲೆ ಗೂಬೆ ಕುರಿಸಲು ಈ ರೀತಿ ಮಾಡ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಹೇಳಿದ್ದಾರೆ. 

ಭೋವಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದ ತಮ್ಮ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡಿದ MLC ಸುನೀಲ್ ವಲ್ಯಾಪುರೆ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ ನೀಡುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ‌ ಎಂದು ತಿಳಿಸಿದ್ದಾರೆ. 

ಬೋವಿ ನಿಗಮದ ಹಗರಣ: ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ದಾಳಿ

ಅವ್ಯವಹಾರ ಆಗಿದೆ ಅಂತ ನಾನೇ ಪ್ರಶ್ನೆ ಮಾಡಿದ್ದೇ ನನ್ನ ಮನೆಯಲ್ಲೇ ಸರ್ಚ್ ಮಾಡ್ತಿದ್ದಾರೆ ಈ ಬಗ್ಗೆ ಸದ್ಯಕ್ಕೆ ನಾನೇನೂ ಮಾತಾಡಲ್ಲ. ಸಮಯ ಬಂದಾಯ ಮಾತಾಡುವೆ ಎಂದು ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಹೇಳಿದ್ದಾರೆ. 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ