'ಕಾಂಗ್ರೆಸ್‌ನಿಂದ ಬೆಂಕಿ ಹಚ್ಚುವ ಕೆಲಸ'

Kannadaprabha News   | Asianet News
Published : Dec 14, 2020, 07:58 AM IST
'ಕಾಂಗ್ರೆಸ್‌ನಿಂದ ಬೆಂಕಿ ಹಚ್ಚುವ ಕೆಲಸ'

ಸಾರಾಂಶ

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಪ್ರತಿಭಟನೆ ಹಿಂಪಡೆಯಬೇಕು| ಪ್ರತಿಭಟನೆಯಿಂದ ಜನರಿಗೆ ಅನಾನುಕೂಲ ಆಗಬಾರದು| ಕೊರೋನಾ ಸಂಕಷ್ಟದಲ್ಲಿ ಈ ರೀತಿಯ ಪ್ರತಿಭಟನೆ ಬೇಡ ಎಂದು ಮನವಿ ಮಾಡಿದ ಎಸ್‌.ಆರ್‌.ವಿಶ್ವನಾಥ್‌| 

ಬೆಂಗಳೂರು(ಡಿ.14): ಕಾಂಗ್ರೆಸ್‌ ಪ್ರತಿಯೊಂದಕ್ಕೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಯಾರ ಮಾತನ್ನು ನಂಬದೆ ಬಸ್‌ಗಳನ್ನು ಓಡಿಸಲು ಮುಂದಾಗಬೇಕು ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಕರೆ ನೀಡಿದ್ದಾರೆ. 

ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಯಲಹಂಕದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಮಾತನಾಡಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಪ್ರತಿಭಟನೆ ಹಿಂಪಡೆಯಬೇಕು. ಪ್ರತಿಭಟನೆಯಿಂದ ಜನರಿಗೆ ಅನಾನುಕೂಲ ಆಗಬಾರದು. ಕೊರೋನಾ ಸಂಕಷ್ಟದಲ್ಲಿ ಈ ರೀತಿಯ ಪ್ರತಿಭಟನೆ ಬೇಡ ಎಂದು ಮನವಿ ಮಾಡಿದರು.

ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ

ರೈತ ಹೋರಾಟದಲ್ಲಿ ತೊಡಗಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ದಿಢೀರ್‌ ಅಂತ ಕೆಎಸ್‌ಆರ್‌.ಟಿಸಿ ಮತ್ತು ಬಿಎಂಟಿಸಿ ನೌಕರರ ಹೇಗೆ ಗೌರವಾಧ್ಯಕ್ಷರಾದರು? ಕಾಂಗ್ರೇಸ್‌, ಸಿಪಿಐ, ಸಿಪಿಎಂ, ಎಡಪಕ್ಷಗಳಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಆರು ವರ್ಷದ ಹಿಂದೆ ಬೇಡಿಕೆ ಈಡೇರಿಸುವ ಕೆಲಸ ಕಾಂಗ್ರೆಸ್‌ನವರು ಮಾಡಬೇಕಿತ್ತು. ಪ್ರತಿಯೊಂದಕ್ಕೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ನಂಬಿಕೊಂಡಿರುವ ಮಧ್ಯಮ ವರ್ಗ, ಬಡವರಿಗೆ ತೊಂದರೆಯಾಗಿದೆ ಎಂದರು.
 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!