ಗ್ರಾಮಸ್ಥರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಬಸ್ ಚಾಲನೆ ಮಾಡಿಕೊಂಡು ಬಂದ ರೇಣುಕಾಚಾರ್ಯ

By Suvarna News  |  First Published May 22, 2022, 5:03 PM IST

* ಗ್ರಾಮಸ್ಥರು ವಿದ್ಯಾರ್ಥಿಗಳಿಗೆ  ಕೊಟ್ಟ ಮಾತು ಉಳಿಸಿಕೊಂಡ  ರೇಣುಕಾಚಾರ್ಯ
* ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ
* ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ  ವಿದ್ಯಾರ್ಥಿಗಳು


ದಾವಣಗೆರೆ, (ಮೇ.22):  ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ  ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.  

ಹೊನ್ನಾಳಿ ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳ ಮನವಿ ಮಾಡಿಕೊಂಡಿದ್ದರು. 

Tap to resize

Latest Videos

 ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ  ಶಾಸಕ ರೇಣುಕಾಚಾರ್ಯ ಅವರು ಕೊಟ್ಟ ಮಾತಿನಂತೆ  ಬೈರನಹಳ್ಳಿ ಗ್ರಾಮಕ್ಕೆ ಇಂದು(ಭಾನುವಾರ) ಬಸ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಸ್ವತಃ ರೇಣುಕಾಚಾರ್ಯ ಅವವರೇ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಉದ್ಘಾಟನೆ ನೆಪದಲ್ಲಿ ಮತ್ತೆ ಐದಾರು ಕಿ.ಮೀ. ಬಸ್ ಚಲಾಯಿಸಿದ ರೇಣುಕಾಚಾರ್ಯ

‌ಖುದ್ದು ಬಸ್ ಚಾಲನೆ ಮಾಡಿದ ರೇಣುಕಾಚಾರ್ಯ, ಬಳಿಕ ಮೊದಲು ಟಿಕೆಟ್ ಖರೀದಿಸಿ ಬೈರನಹಳ್ಳಿ ಗ್ರಾಮಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡಿದರು. ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಿಸಿದರು. ನಂತರ ಗ್ರಾಮಸ್ಥರು ಸೇರಿ ರೇಣುಕಾಚಾರ್ಯ ಅವರಿಗೆ ಹಾರ, ಶಾಲು ಹಾಕಿ ಸನ್ಮಾನಿಸಿದರು.

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ, ಬೈರನಹಳ್ಳಿ  ಗ್ರಾಮದ ವಿದ್ಯಾರ್ಥಿಗಳ ಶಾಲೆ, ಕಾಲೇಜಿಗೆ ತೆರಳಲು ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ತೊಂದರೆಯಾಗುತ್ತಿದ್ದು ಈ ಭಾಗಕ್ಕೆ ಬಸ್ಸು ನೀಡುವಂತೆ ಮನವಿ ಮಾಡಿದ್ದರು. ಈ ಭಾಗಕ್ಕೆ ಬಸ್ಸು ಬಿಡಿಸುಹುದಾಗಿ ಮಾತು ಕೊಟ್ಟಿದು ಅದ್ರಂತೆ ಇಂದು ಗ್ರಾಮಕ್ಕೆ ಬಸ್ಸು ಬಂದಿದ್ದು, ಬಸ್ಸು ಓಡಿಸುವ ಮೂಲಕ ಚಾಲನೆ ನೀಡಿದೆನು ಬರೆದುಕೊಂಡಿದ್ದಾರೆ.

ತಾಳಿಗೆ ಕರಿಮಣಿ ಪೋಣಿಸಿರುವುದನ್ನ ಸಮರ್ಧನೆ
ಮದುವೆ ಮನೆಯಲ್ಲಿ ತಾಳಿಗೆ ಕರಿಮಣಿ ಪೋಣಿಸಿದ ವಿಚಾರವನ್ನು ಶಾಸಕ ರೇಣುಕಾಚಾರ್ಯ ಸಮರ್ಥಿಸಿಕೊಂಡರು.  ಮೊನ್ನೆ ಮಳೆ ಅನಾಹುತ ಆದ 25 ಹಳ್ಳಿಗೆ ವಿಸಿಟ್ ಮಾಡಿದ್ದೇ ಆದಾದ ನಂತರ ಐದು ಮದುವೆ ಮನೆಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಆ ಮನೆಯ ಮಹಿಳೆಯರು ತಾಳಿಗೆ ಕರಿಮಣಿ ಪೋಣಿಸುತ್ತಿದ್ದರು ನಿಮ್ಮ ಆರ್ಶಿವಾದ ಬೇಕು ಅಂದ್ರು.  ಆ ಮಹಿಳೆಯರ ಆಪೇಕ್ಷೆಯಂತೆ ಕರಿಮಣಿ ಜೋಡಿಸಿದೆ. ನನ್ನ ಕ್ಷೇತ್ರದ ಜನ ಏನು ಬಯಸೋತ್ತಾರೋ ಆ ಕೆಲಸವನ್ನು  ನಾನು ಮಾಡುತ್ತೇನೆ ಎಂದು ಸಮರ್ಥಿಸಿಕೊಂಡರು.

ಬಸ್‌ ಓಡಿಸಿ ವಿವಾದಕ್ಕೆ ಕಾರಣವಾಗಿದ್ದ ರೇಣುಕಾಚಾರ್ಯ
ಹೌದು..2020 ಜನವರಿಯಲ್ಲಿ ಹೊನ್ನಾಳಿಯಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆಹಳ್ಳಿ ಗ್ರಾಮದವರೆಗೆ ಕೆಎಸ್‌ಆರ್‌ಟಿಸಿ ಬಸ್‌ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಬಸ್‌ ಚಾಲಕರ ಸಮವಸ್ತ್ರ ಧರಿಸಿ ತಾವೇ ಖುದ್ದಾಗಿ ಚಾಲನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದರು.

ಒದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೇ ನಿಯಮ ಉಲ್ಲಂಘಿಸಿ ಬಸ್ ಚಲಾಯಿಸಿದ ಶಾಸಕನ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. ಇಷ್ಟೆಲ್ಲಾ ಆಗಿದ್ದರೂ ರೇಣುಕಾಚಾರ್ಯ ಅವರು ಮತ್ತೆ ಲೈಸನ್ಸ್ ಇಲ್ಲದೇ ಬಸ್ ಚಲಾಯಿಸಿದ್ದಾರೆ.

 

click me!