* ಜೂ.21ರ ಯೋಗ ದಿನಕ್ಕೆ ಮೈಸೂರಿಗೆ ಮೋದಿ ಭೇಟಿ
* ಒಂದು ತಾಸು ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ
* ಸಿದ್ಧತೆ ಮಾಡಿಕೊಳ್ಳಲು ರಾಜ್ಯಕ್ಕೆ ಕೇಂದ್ರದಿಂದ ಪತ್ರ
ಮೈಸೂರು(ಮೇ.22): ಮೈಸೂರಿನಲ್ಲಿ ಜೂ.21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವುದು ಖಚಿತವಾಗಿದೆ. ಅಂದು ಬೆಳಗ್ಗೆ 7ರಿಂದ 8ರವರೆಗೆ ಸುಮಾರು ಒಂದು ಗಂಟೆ ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಕೇಂದ್ರ ಆಯುಷ್ ಇಲಾಖೆ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದನ್ನು ಖಚಿತಪಡಿಸಿದ್ದು, ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
undefined
ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಿವೆ: ಸಂಸದ ಪ್ರತಾಪ್ ಸಿಂಹ ಟೀಕೆ!
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆರಂಭವಾದ ವರ್ಷದಿಂದಲೂ ಮೈಸೂರಿಗೆ ಪ್ರಧಾನಿಯವರನ್ನು ಕರೆತರುವ ಪ್ರಯತ್ನ ನಡೆಯುತ್ತಲೇ ಇತ್ತು. ಆದರೆ ಅದು ಫಲ ನೀಡಿರಲಿಲ್ಲ. ಈ ಬಾರಿ ಏ.5ರಂದು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಜತೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಅಂದು ಪ್ರಧಾನಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರ ಏ.29 ರಂದು ಕೇಂದ್ರ ಆಯುಷ್ ಇಲಾಖೆಯ ಹಿರಿಯ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ, ಅರಮನೆ, ವಸ್ತು ಪ್ರದರ್ಶನ ಹಾಗೂ ರೇಸ್‌ಕೋರ್ಸ್ ಆವರಣಗಳನ್ನು ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಮಾಹಿತಿ ಪಡೆದುಕೊಂಡು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು. ಇದೀಗ ಮೋದಿ ಭಾಗವಹಿಸುವಿಕೆ ಖಚಿತಪಟ್ಟಿದೆ.
ಈ ಬಾರಿ ಯೋಗದಿನದಲ್ಲಿ ಮೋದಿ ಪಾಲ್ಗೊಳ್ಳಬಹುದು ಎಂಬ ನಿರೀಕ್ಷೆ ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲಾ ಯೋಗ ಸಂಘ, ಸಂಸ್ಥೆಗಳು ಒಕ್ಕೂಟ ರಚಿಸಿಕೊಂಡು, ಈಗಾಗಲೇ ತಾಲೀಮಿನಲ್ಲಿ ತೊಡಗಿಸಿಕೊಂಡಿವೆ. ಅರಮನೆ ಆವರಣ, ಯೋಗನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ತಾಲೀಮು ನಡೆದಿದ್ದು, ಮೇ 22 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ತಾಲೀಮು ನಡೆಯಲಿದೆ.
ಸಿದ್ದರಾಮಯ್ಯ ದಲಿತ ಸಾಲ ಮನ್ನಾ ಹೇಳಿಕೆಗೆ ಬಿಜೆಪಿ ಕಿಡಿ!
ರೇಸ್‌ಕೋರ್ಸ್‌ನಲ್ಲಿ ಕಾರ್ಯಕ್ರಮ: ಅರಮನೆ, ವಸ್ತು ಪ್ರದರ್ಶನ ಹಾಗೂ ರೇಸ್‌ಕೋರ್ಸ್ ಜಾಗಗಳನ್ನು ಕೇಂದ್ರ ಆಯುಷ್ ತಂಡ ಪರಿಶೀಲಿಸಿದ್ದರೂ ಅಂತಿಮವಾಗಿ ಎಸ್‌ಪಿಜಿಯವರು ಭೇಟಿ ನೀಡಿದ ನಂತರ ಸ್ಥಳ ಅಂತಿಮವಾಗಲಿದೆ. ಅರಮನೆ ಆವರಣದಲ್ಲಿ ಹೆಚ್ಚು ಜನ ಸೇರಲಾಗದು, ವಸ್ತು ಪ್ರದರ್ಶನ ಆವರಣ ಪ್ರಧಾನಿ ಭೇಟಿಗೆ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಹೆಚ್ಚು ಜನ ಭಾಗವಹಿಸಲು ಅನುಕೂಲವಾಗುವಂತೆ ರೇಸ್‌ಕೋರ್ಸ್ ಆವರಣವನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ.
1.50 ಲಕ್ಷ ಜನರು ಭಾಗಿ
ಮೈಸೂರಿನಲ್ಲಿ 2015ರಿಂದಲೂ ಯೋಗ ದಿನವನ್ನು ವಿಶೇಷ ಮತ್ತು ವಿಭಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 2017ರಲ್ಲಿ ರೇಸ್‌ಕೋರ್ಸ್ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ 55,506 ಮಂದಿ ಭಾಗವಹಿಸಿ, ದಾಖಲೆ ನಿರ್ಮಿಸಿದ್ದರು. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಯೋಗ ದಿನ ಆಚರಣೆ ಸಾಧ್ಯವಾಗಿರಲಿಲ್ಲ. ಈ ಬಾರಿ ಮಾತ್ರ ಮೋದಿ ಅವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ 1.50 ಲಕ್ಷ ಜನರನ್ನು ಸೇರಿಸುವ ಗುರಿ ಇದೆ.