ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಅರ ಪತ್ನಿಗೆ ಹೊನ್ನಾಳಿಯಲ್ಲಿ ಕ್ಷೀರಾಭಿಷೇಕ ಮಾಡಲಾಗಿದೆ. ಹುಟ್ಟುಹಬ್ಬದ ನಿಮಿತ್ತ ಅಭಿಷೇಕವಾಗಿದೆ.
ಹೊನ್ನಾಳಿ (ಮಾ.02): ರಾಜ್ಯದಲ್ಲಿ ತಮ್ಮ ವಿಶಿಷ್ಟನಡವಳಿಕೆಗಳಿಂದ ಹೆಸರಾಗಿರುವ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಅವರ ಮಾನಸ ಪುತ್ರ, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬವನ್ನು ತಾಲೂಕಿನಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡ ಸಂದರ್ಭದಲ್ಲಿ ಅಭಿಮಾನಿಗಳು ಅವರಿಗೆ ಹಾಲಿನಿಂದ ಅಭಿಷೇಕ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು.
ನೂರಾರು ಕಾರ್ಯಕರ್ತರು ರೇಣುಕಾಚಾರ್ಯ ಅವರು ವೇದಿಕೆ ಬಳಿ ಆಗಮಿಸುತ್ತಿದ್ದಂತೆ ಹಲವಾರು ಅವರ ಅಭಿಮಾನಿಗಳು ತಂಬಿಗೆ ಕೊಡಪಾನಗಳಲ್ಲಿ ತಂದಿದ್ದ ಹಾಲನ್ನು ಅವರ ಮೇಲೆ ಸುರಿದು ಕ್ಷೀರಾಭಿಷೇಕ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ಹುಟ್ಟುಹಬ್ಬವನ್ನು ಆಚರಿಸಿದರು.
ಕೆಲ ಸಚಿವರ ದುರಹಂಕಾರ ಸಹಿಸಿಕೊಳ್ಳಲು ಆಗ್ತಿಲ್ಲ: ಮತ್ತೆ ಗುಡುಗಿದ ರೇಣುಕಾಚಾರ್ಯ ...
ಇದಕ್ಕೂ ಮುನ್ನ ಶಾಲಾಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ಭೇಟಿ ನೀಡಿದಾಗ ಅಲ್ಲಿದ್ದ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಪುಷ್ವ ಗುಚ್ಚ ನೀಡಿ, ಕೇಕ್ ಕತ್ತರಿಸಿ ಜನರಿಗೆ ಸಿಹಿ ವಿತರಿಸಿದರು.
ಜನತೆ ಅಭಿಮಾನಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ತಾನು ಒಬ್ಬ ಸಾಮಾನ್ಯ ಶಿಕ್ಷಕಕ ಮಗನಾಗಿ ಜನಿಸಿದವನು. ನನ್ನ ರಾಜಕೀಯ ಹಾದಿ ಸುಗಮವಾಗಿರದೇ ಅನೇಕ ಹೋರಾಟಗಳು, ಜೈಲುವಾಸಗಳನ್ನು ಕಂಡು ತಮ್ಮ ರಾಜಕೀಯ ಗುರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಂತೆ ರೈತರು, ಜನಸಾಮಾನ್ಯರಿಗಾಗಿ ಹೋರಾಟಗಳ ಮೂಲಕ ಜನರ ಆಶೀರ್ವಾದ ಪಡೆದು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ಎಂದಿಗೂ ನನ್ನ ಕ್ಷೇತ್ರದ ಜನರೇ ನನಗೆ ಶ್ರೀರಕ್ಷೆಯಾಗಿದ್ದಾರೆ ಎಂದು ಭಾವಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಪತ್ನಿ ಸುಮಾ ರೇಣುಕಾಚಾರ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್.ಮಹೇಶ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.