ನಂಗಾದ್ರೂ ಸರಿ ಎಂದು ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಮುಖಂಡ

Kannadaprabha News   | Asianet News
Published : Nov 26, 2020, 01:59 PM ISTUpdated : Nov 26, 2020, 02:17 PM IST
ನಂಗಾದ್ರೂ ಸರಿ ಎಂದು ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಮುಖಂಡ

ಸಾರಾಂಶ

ರಾಜ್ಯದಲ್ಲಿ ಸಚಿವ ಸಂಪುಟ ವಿಚಾರದ ಚರ್ಚೆ ಜೋರಾಗಿದೆ. ದಿನದಿನಕ್ಕೂ ಸಚಿವ ಸ್ಥಾನಾಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. 

ಮೈಸೂರು (ನ.26): ಮೈಸೂರು ಭಾಗದ ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ. ಇಲ್ಲವಾದರೆ ಕೇಂದ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗಾದರೂ ಮಂತ್ರಿ ಸ್ಥಾನ ನೀಡಿ ಎಂದು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದರು.

ಹಳೆ ಮೈಸೂರಿನಲ್ಲಿ ದಲಿತ ಶಾಸಕರಿಗೆ ಸಚಿವ ಸ್ಥಾನ  ನೀಡಲಿ. ಹಳೆ ಮೈಸೂರಿನಲ್ಲಿ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಿ ಅನ್ನೋದು ನನ್ನ ಮನವಿ‌ ಎಂದು ಅವರು ಹೇಳಿದರು.

ನನ್ನನ್ನು ಕೈ ಬಿಡಲ್ಲ ಎಂದ ಸಚಿವೆ ಶಶಿಕಲಾ ಜೊಲ್ಲೆ ...

ಅದು ನನಗಾದರೂ ಸರಿ ಬೇರೆ ಯಾರಿಗಾದರೂ ಸರಿ. ರಾಜ್ಯದಲ್ಲಿ ಆಗಲಿಲ್ಲ ಎಂದರೆ ಕೇಂದ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಗೆ ಮಂತ್ರಿ ಸ್ಥಾನ ನೀಡಲಿ. ಸಮುದಾಯದ ಪರವಾಗಿ ಮನವಿ ಮಾಡೋದು ನನ್ನ ಕರ್ತವ್ಯ. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಳೆ ಮೈಸೂರಿಗೆ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡ್ತಿದ್ದೇನೆ ಎಂದರು.

ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದ್ದರೆ ಅವರಿಗೂ ನೀಡಲಿ. ಮೈಸೂರಿನಲ್ಲಿ ಶಾಸಕ ಹರ್ಷವರ್ಧನ್ ಹೇಳಿದರು.

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ