ಕೊರೋನಾ ಎಫೆಕ್ಟ್‌: 'ಅತಿಥಿ ಉಪನ್ಯಾಸಕರಿಗೆ ವೇತನ ನೀಡಿ'

By Kannadaprabha News  |  First Published Nov 26, 2020, 1:56 PM IST

ಕೋವಿಡ್‌ ಅವಧಿಯಲ್ಲಿ ವೇತನ ಪಡೆಯದೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅತಿಥಿ ಉಪನ್ಯಾಸಕರು| ಅನುದಾನರಹಿತ ಶಾಲಾ-ಕಾಲೇಜು ಸಿಬ್ಬಂದಿಗಳಿಗೂ ಕೂಡಾ ವೇತನ ನೀಡಲು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಒತ್ತಾಯಿಸಿದ ಎಸ್‌.ವಿ. ಸಂಕನೂರು| 
 


ಗದಗ(ನ.26): ಸರ್ಕಾರಿ ಪದವಿಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವೇತನ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಅವರನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ರಾಜ್ಯದಲ್ಲಿರುವ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೂಡಾ ಕೋವಿಡ್‌ ಅವಧಿಯಲ್ಲಿ ವೇತನ ಪಡೆಯದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. 

Latest Videos

undefined

ಗದಗ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿ ಹೆಸರು

ಕೋವಿಡ್‌ ಅವಧಿಯಲ್ಲಿ ಯಾವ ಪಾಲಕರಿಂದಲೂ ವಿದ್ಯಾರ್ಥಿಗಳ ಫೀ ಪಡೆದುಕೊಳ್ಳಲು ಒತ್ತಾಯ ಮಾಡಬಾರದು ಎಂಬ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಅನುದಾನರಹಿತ ಶಾಲಾ-ಕಾಲೇಜು ಸಿಬ್ಬಂದಿಗಳಿಗೂ ಕೂಡಾ ವೇತನ ನೀಡಲು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
 

click me!