ಹೆಚ್ಚಿದ್ದವರನ್ನು ಬಿಟ್ಟು ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ. ಅನೇಕ ವರ್ಷಗಳಿಂದ ಬಿಜೆಪಿ ಬೆಂಬಲಿಸುತ್ತಾ ಬಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲ್ಲ ಎನ್ನುವ ಭರವಸೆ ಇದೆ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಹೇಳಿದ್ದಾರೆ.
ಚಿತ್ರದುರ್ಗ [ಜ.04]: ಬಿಜೆಪಿಗೆ ಸದಾ ಬೋವಿ ಸಮುದಾಯ ಬೆಂಬಲ ನೀಡುತ್ತಿದೆ. 2008 ರ ಚುನಾವಣೆಯಿಂದಲೂ ಸತತ ಬೆಂಬಲ ನೀಡುತ್ತಾ ಬಂದಿದೆ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ, ರಾಜ್ಯದಲ್ಲಿ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ನಮ್ಮ ಸಮುದಾಯಕ್ಕೆ ಆದ್ಯತೆ ನಿಡುವರೆಂಬ ನಂಬಿಕೆ ಇದೆ. ನಮ್ಮನ್ನು ಕಡೆಗಣಿಸುವುದಿಲ್ಲ ಎನ್ನುವ ಭರವಸೆಯೂ ಇದೆ ಎಂದರು.
undefined
ಬೋವಿ ಸಮುದಾಯದಲ್ಲಿ ಯಾರಿಗೆ ಆದ್ಯತೆ ಕೊಟ್ಟರೂ ಸಂತೋಷ. ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ನನ್ನ ಮಾತು ಕೇಳಿ ಬಿಹೆಪಿ ಬೆಂಬಲಿಸಿದ್ದರು. ಬಿಜೆಪಿ ಸರ್ಕಾರ ಬರಲು ನೆರವು ನೀಡಿದ್ದ ನಮ್ಮ ಸಮುದಾಯಕ್ಕೆ ಅನ್ಯಾಐ ಮಾಡಲ್ಲ ಎಂದು ಚಂದ್ರಪ್ಪ ಹೇಳಿದರು.
ಕೊಟ್ಟ ಮಾತಿಗೆ ಬೆನ್ನು ತಿರುಗಿಸಲ್ಲ ಬೂಕನಕೆರೆ ಭೂಪ: ಸಂ'ಕ್ರಾಂತಿ'ಗೆ ಸಂಪುಟ..?...
ಇನ್ನು ರಾಜ್ಯದಲ್ಲಿ ಬಿಜೆಪಿ ಬೆಂಬಲಿಸಿದ್ದ ಅನರ್ಹ ಶಾಸಕರು ಸೋತಿದ್ದರು ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರು ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಎಲ್ಲಾ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಾಗಿ ಇರುವವರಿಗೆ ಹಾಗೂ ಅನರ್ಹರಾಗಿರುವವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಚಂದ್ರಪ್ಪ ಹೇಳಿದರು.
ರಾಜೀನಾಮೆ ಕೊಟ್ಟು ಬಂದವರಿಗೆ ಸ್ಥಾನ ಮಾನ ನೀಡಲು ಕಂಡೀಷನ್ !...
ಇನ್ನು ಇದೇ ವೇಳೆ ಮಾಜಿ ಸಚಿವ ಆಂಜನೇಯ ವಿರುದ್ದ ವಾಗ್ದಾಳಿ ನಡೆಸಿದ ಚಂದ್ರಪ್ಪ, ಅರಳು ಮರುಳಾಗಿದೆ. ಐದು ವರ್ಷ ಅಧಿಕಾರ ಅನುಭವಿಸಿದ್ದರು. ಈಗ ಅಧಿಕಾರ ಕಳೆದುಕೊಂಡು ಹೀಗಾಗಿದ್ದಾರೆ ಎಂದರು.