* ಚಿಕ್ಕೇರೂರ ಗ್ರಾಮದ ಹೊರವಲಯದ ಬೈಪಾಸ್ ರಸ್ತೆಯಲ್ಲಿನ ಮೇಲ್ಸೆತುವೆ ಕುಸಿತ
* ಮಳೆಯಿಂದಾಗಿ ಅಪಾರ ಬೆಳೆ ಹಾನಿ
* ಅಧಿಕಾರಿಗಳು ಸಮರ್ಪಕ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಪಾಟೀಲ
ಹಿರೇಕೆರೂರ(ಆ.04): ತಾಲೂಕಿನ ಚಿಕ್ಕೇರೂರ ಗ್ರಾಮಕ್ಕೆ ಶಾಸಕ ಬಿ.ಸಿ. ಪಾಟೀಲ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ರೈತರ ಜಮೀನು ಹಾಗೂ ಮನೆಗಳನ್ನು ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಸಿ. ಪಾಟೀಲ, ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದು, ರೈತರಿಗೆ ನಷ್ಟವಾಗಿದೆ. ಅಧಿಕಾರಿಗಳು ಸಮರ್ಪಕ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಹಾವೇರಿ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆ..!
ಚಿಕ್ಕೇರೂರ ಗ್ರಾಮದ ಹೊರವಲಯದ ಬೈಪಾಸ್ ರಸ್ತೆಯಲ್ಲಿನ ಮೇಲ್ಸೆತುವೆ ಕುಸಿದಿದೆ. ಈ ರಸ್ತೆಯೂ ಪೂರ್ಣಗೊಂಡಿಲ್ಲ ಮತ್ತು ಚಿಕ್ಕೇರೂರ ಗ್ರಾಮ ದೊಡ್ಡದಾಗಿದ್ದು, ಇಲ್ಲಿಂದ ಮೂರು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ಈ ರಸ್ತೆ ಮೂಲಕ ಹಾಯ್ದು ಹೋಗಬೇಕು ಈ ರಸ್ತೆಯನ್ನು ಪೂರ್ಣಗೊಳಿಸಿಲ್ಲ ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸಬೇಕು ಜನೆತೆಗೆ ಆಗುವ ತೊಂದರೆಗಳನ್ನು ತಪ್ಪಿಸಬೇಕು ಎಂದು ದೂರವಾಣಿ ಮೂಲಕ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ರೈತ ಸಂಘಟನೆ ಮತ್ತು ಕರವೇ ಕಾರ‍್ಯಕರ್ತರಿದ್ದರು.