'ನಡು ನೀರಲ್ಲಿ ಹಳ್ಳಿ ಹಕ್ಕಿಯ ಕೈಬಿಟ್ಟ ಬಿಜೆಪಿ'..!

By Kannadaprabha NewsFirst Published Jun 21, 2020, 9:36 AM IST
Highlights

ಬಿಜೆಪಿಯವರು ಅಧಿಕಾರದ ದಾಹಕ್ಕಾಗಿ ಕರ್ನಾಟಕದಲ್ಲಿ ಆಪರೇಷನ್‌ ಕಮಲ ಮಾಡಿ ಇವತ್ತು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರನ್ನು ಕೈ ಬಿಟ್ಟಿದ್ದಾರೆ. ಬಿಜೆಪಿಯವರ ನಿಜ ಬಣ್ಣ ಏನೂ ಅನ್ನೋದನ್ನ ಎಲ್ಲಾ ಶಾಸಕರು ಅರ್ಥ ಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕೋಲಾರ(ಜೂ.21): ಬಿಜೆಪಿಯವರು ಅಧಿಕಾರದ ದಾಹಕ್ಕಾಗಿ ಕರ್ನಾಟಕದಲ್ಲಿ ಆಪರೇಷನ್‌ ಕಮಲ ಮಾಡಿ ಇವತ್ತು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರನ್ನು ಕೈ ಬಿಟ್ಟಿದ್ದಾರೆ. ಬಿಜೆಪಿಯವರ ನಿಜ ಬಣ್ಣ ಏನೂ ಅನ್ನೋದನ್ನ ಎಲ್ಲಾ ಶಾಸಕರು ಅರ್ಥ ಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಎಚ್‌. ವಿಶ್ವನಾಥ್‌ ಅವರು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿ, ಶಾಸಕರಾಗಿದ್ದವರು, ಅಧಿಕಾರದ ಆಸೆಗಾಗಿ ಎರಡೂ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆ ಯಾಗಿದ್ದರು. ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಿಕ್ಕೆ ನಾನೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದರು.

ಬಿಜೆಪಿಯ ಅಧಿಕಾರ ದಾಹ

ಆಪರೇಷನ್‌ ಕಮಲಕ್ಕೆ ಒಳಗಾದ ಸಂದರ್ಭದಲ್ಲಿ ಎಚ್‌. ವಿಶ್ವನಾಥ್‌ ಅವರಿಗೆ ಬಿಜೆಪಿ ಪಕ್ಷದ ಮುಖಂಡರು ಏನೋನೂ ಭರವಸೆಗಳನ್ನ ಕೊಟ್ಟು ನಂಬಿಸಿ ಇವತ್ತು ವಿಶ್ವನಾಥ್‌ ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ಇದು ಬಿಜೆಪಿಯವರ ಅಧಿಕಾರದ ದಾಹಕ್ಕೆ ಇದು ಉದಾಹರಣೆ ಎಂದು ಹೇಳಿದರು.

ಬಳ್ಳಾರಿ: 50 ಸಾವಿರ ಕೋಟಿ ದಾಟಿದ ಕರ್ನಾ​ಟಕ ಗ್ರಾಮೀಣ ಬ್ಯಾಂಕಿನ ವಹಿವಾಟು!

ಬಿಜೆಪಿಯವರು ಸಮಯ ಬಂದಾಗ ಯಾರನ್ನ ಬೇಕಾದರೂ ಬಳಸಿಕೊಂಡು ಅವರ ಕೆಲಸವನ್ನ ಸಾಧನೆ ಮಾಡಿಕೊಳ್ಳುತ್ತಾರೆ. ಅವರ ಕೆಲಸ ಆದ್ಮೇಲೆ ಏನು ಮಾಡುತ್ತಾರೆ ಅನ್ನೋದಿಕ್ಕೆ ವಿಶ್ವನಾಥ್‌ ಅವರಿಗೆ ಎಂಎಲ್‌ಸಿ ಟಿಕೆಟ್‌ ಕೊಡದೆ ಮೋಸ ಮಾಡಿದ್ದಾರೆ ಎಂದರು.

ಟಿಕೆಟ್‌ ವಂಚಿತ ರೋಷನ್‌ ಬೇಗ್‌

ಅಧಿಕಾರದ ದಾಹಕ್ಕಾಗಿ ಆಪರೇಷನ್‌ ಕಮಲಕ್ಕೆ ಒಳಗಾಗುವ ಶಾಸಕರು ಕೂಡ ಇವತ್ತು ಬಿಜೆಪಿಯವರು ವರ್ತನೆಯನ್ನ ನೋಡಿ ಕಲಿಯಬೇಕು. ಆದರೂ ಅಧಿಕಾರದ ಆಸೆಗಾಗಿ ಒಳಗಾಗುವ ಮಂದಿಗೆ ಹೆಚ್‌ ವಿಶ್ವನಾಥ್‌ ಅವ್ರ ಪ್ರಕರಣ ಒಂದು ಪಾಠವಾಗಬೇಕೆಂದರು. ಕಾಂಗ್ರೆಸ್‌ ಶಾಸಕರಾಗಿ ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಮತ್ತೊಬ್ಬ ಹಿರಿಯ ಮುಖಂಡ ರೋಷನ್‌ ಬೇಗ್‌ ಅವರಿಗೂ ಟಿಕೆಟ್‌ ಕೊಟ್ಟಿಲ್ಲ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್‌ ಕೇಸ್‌

ರೋಷನ್‌ ಬೇಗ್‌ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರ್ತಾರೆ ಅನ್ನೋ ಸುದ್ದಿಯನ್ನ ಮಾಜಿ ಸಚಿವ ಕೃಷ್ಣಬೈರೇಗೌಡ ತಳ್ಳಿಹಾಕಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ನಾನೇನು ಹೇಳೋದಿಲ್ಲ, ಮುಂದಿನ ದಿನಗಳಲ್ಲಿ ಅದೇ ಪಕ್ಷದಲ್ಲಿ ಏನೇನೂ ಬೆಳವಣಿಗೆಗೆಳು ಆಗುತ್ತದೆ ಅನ್ನೋದನ್ನ ಕಾದು ನೋಡ್ಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಸೀತಿ ಹೊಸೂರು ಮುರಳಿಗೌಡ ಮತ್ತಿತರರು ಉಪಸ್ಥಿತರಿದ್ದರು.

click me!