ಸಿದ್ದು ಭಂಡತನನ ಯಾರೂ ಒಪ್ಪಲ್ಲ : ಮಾಂಸಹಾರದ ಹೇಳಿಕೆಗೆ ಬಿ.ವೈ. ವಿಜಯೇಂದ್ರ

By Suvarna News  |  First Published Aug 22, 2022, 2:04 PM IST

ಯಾರು ಏನ್ ಬೇಕಾದ್ರೂ ತಿನ್ನಬಹುದು, ಸ್ವಾತಂತ್ರ್ಯ ಇದೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ. ಇಂತಹ ಹೇಳಿಕೆಯನ್ನ ಯಾರೂ ಒಪ್ಪಲ್ಲ ಅಂತಾ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ರು. 


ಗದಗ : ಯಾರು ಏನ್ ಬೇಕಾದ್ರೂ ತಿನ್ನಬಹುದು, ಸ್ವಾತಂತ್ರ್ಯ ಇದೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ. ಇಂತಹ ಹೇಳಿಕೆಯನ್ನ ಯಾರೂ ಒಪ್ಪಲ್ಲ ಅಂತಾ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ರು. 

ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರ 71 ನೇ ಜನ್ಮದಿನೋತ್ಸವಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ, ಲಕ್ಷ್ಮೇಶ್ವರದ ಮುಕ್ತಿಮಂದಿರಕ್ಕೆ ಭೇಟಿ ಕೊಟ್ರು ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಿದ್ದರಾಮಯ್ಯ ನಡೆಯ ಬಗ್ಗೆ ಮಾತ್ನಾಡಿ, ಈ ರಾಜ್ಯದಲ್ಲಿ ಸಂಸ್ಕೃತಿ, ಪರಂಪರೆ ಇದೆ. ಧಾರ್ಮಿಕ ಶ್ರದ್ಧೆ ಇದೆ. ದೈವವನ್ನ ನಂಬಿ ಜೀವನ ನಡೆಸುವ ಅಪಾರ ಜನ ಸಂಖ್ಯೆ ಇದೆ. ಉನ್ನತ ಸ್ಥಾನದಲ್ಲಿರುವವರು ರಾಜಕಾರಣದಲ್ಲಿ ಇರುವವರು ಬಹಿರಂಗವಾಗಿ ಹೇಳಿಕೆ ನೀಡ್ತಿದ್ದಾರೆ. ರಾಜಕಾರಣಿಗಳ ಹೇಳಿಕೆ ಇತರರಿಗೆ ಘಾಸಿ ಆಗಬಾರದು ಅಂತಾ ಸಿದ್ದರಾಮಯ್ಯ ಅವರಿಗೆ ಚಾಟಿ ಬೀಸಿದ್ರು‌.

Latest Videos

undefined

ಚುನಾವಣಾ ಅಖಾಡಕ್ಕಿಳಿದ ಬಿವೈ ವಿಜಯೇಂದ್ರ; ಶಿಕಾರಿಪುರದಲ್ಲಿ ಕಾರ್ಯಕರ್ತರ ಜೊತೆ ಸರಣಿ ಸಭೆ

ಅಧಿಕಾರಕ್ಕೆ ಬಂದೇ ಬಿಟ್ವಿ ಅನ್ನೋ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಆದರೆ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್‌ಗೆ ಆಘಾತ ಆಗಿದೆ. ಇನ್ನು ಧರ್ಮ ಒಡೆಯುವ ಉದ್ದೇಶವಿರಲ್ಲಿಲ್ಲ ಎಂಬ ಸಿದ್ದರಾಮಯ್ಯ ಅವರ ಪಶ್ಚಾತ್ತಾಪದ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್‌ ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಆಗ್ತೇರೆ ಅನ್ನೋ ಆತಂಕ ಸಿದ್ದರಾಮಯ್ಯ ಅವರಿಗೆ ಆಗಿದೆ. ಯಡಿಯೂರಪ್ಪ ಅವರು ಎಲ್ಲ ಜಾತಿ ಜನಾಂಗ ಒಗ್ಗೂಡಿಸುವ ಕೆಲಸ ಮಾಡಿದ್ರು. ಆದ್ರೆ ಈಗ ಕೆಲ ನಾಯಕರು ಜಾತಿ ಜಾತಿಯ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ತಾವು ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಾದಾಗ ಜಾತಿ ಮಧ್ಯೆ ವಿಷ ಬೀಜ ಬಿತ್ತಿದರು. ಈಗ ವೀರ ಸಾವರ್ಕರ್ ಎಂಬ ಕ್ರಾಂತಿಕಾರಿಯನ್ನ ರಸ್ತೆಗೆ ತಂದು ಅವಮಾನ ಮಾಡ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುವುದು ಸರಿ ಅಲ್ಲ ಅಂದರು. 

ಬಿಜೆಪಿ ನಾಯಕರು ತಲೆಯೆತ್ತಿ ನಡೆಯಲಾಗುತ್ತಿಲ್ಲ: ಬಿವೈ ವಿಜಯೇಂದ್ರ ಅಸಮಾಧಾನ

click me!