ಮಹಿಳಾ ಅಧಿಕಾರಿಗೆ 'ಕಾಂಗ್ರೆಸ್‌ನ ನಾಯಿ' ಎಂದು ನಿಂದಿಸಿದ BJP ಮುಖಂಡ

Published : Jun 08, 2021, 11:27 AM ISTUpdated : Jun 08, 2021, 02:40 PM IST
ಮಹಿಳಾ ಅಧಿಕಾರಿಗೆ 'ಕಾಂಗ್ರೆಸ್‌ನ ನಾಯಿ' ಎಂದು ನಿಂದಿಸಿದ BJP ಮುಖಂಡ

ಸಾರಾಂಶ

ಮಹಿಳಾ ಅಧಿಕಾರಿಗೆ ಕೆಟ್ಟದಾಗಿ ಬೈಯ್ದ ಬಿಜೆಪಿ ಮುಖಂಡ ಅವಾಚ್ಯ ಪದಗಳನ್ನು ಬಳಸಿ ಮಹಿಳಾ ಅಧಿಕಾರಿಗೆ ನಿಂದನೆ

ಮಂಗಳೂರು(ಜೂ.08) : ಮಹಿಳಾ ಅಧಿಕಾರಿಯೊಬ್ಬರನ್ನು 'ಕಾಂಗ್ರೆಸ್‌ನ ನಾಯಿ' ಎಂದು ನಿಂದಿಸಿದ BJP ಮುಖಂಡ ಈಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇದೀಗ ಘಟನೆ ಸಂಬಂಧ ಟೀಕೆಯೂ ವ್ಯಕ್ತವಾಗಿದೆ.

ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ಘಟನೆ ನಡೆದಿದ್ದು, ಕರ್ನಾಟಕ ಜಲಮಂಡಳಿ ಇಂಜಿನಿಯರ್‌ಗೆ ಬಿಜೆಪಿ ಮುಖಂಡ ಅವಾಚ್ಯ ಶಬ್ದಗಳಿಂದ ಬೈದಿರುವ ಘಟನೆ ನಡೆದಿದೆ.

ಸ್ಥಳೀಯ ಬಿಜೆಪಿ ಮುಖಂಡ, ನ್ಯಾಯವಾದಿ ಅಸ್ಗರ್ ಮುಡಿಪು ಎಂಬಾತನಿಂದ ನಿಂದನೆ ನಡೆದಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ತಡೆದು ಅಧಿಕಾರಿಗೆ ನಿಂದಿಸಿದ್ದಾರೆ.

ಔಷಧ ಕೊಳ್ಳಲು ಬಂದವ ಮೆಡಿಕಲ್‌ಗೆ ನುಗ್ಗಿ ಯುವತಿ ನೋಡಿ ಅತ್ಯಾಚಾರಕ್ಕೆ ಯತ್ನಿಸಿದ

ಕಾಮಗಾರಿ ಆರ್ಡರ್ ಕಾಪಿ ಕೊಟ್ಟು ಕೆಲಸ ಮಾಡಿ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕಾಂಗ್ರೆಸ್ ನ ನೂರು ಮಂದಿಗೆ ಬಿಜೆಪಿಯ ಒಬ್ಬ ಸಾಕು ಅಂತ ಆವಾಜ್ ಹಾಕಿದ್ದಾರೆ.

ನೀವು ಕಾಂಗ್ರೆಸ್‌ನ ನಾಯಿ, ಎಂಜಲು ತಿಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತಂದವರು. ಕಾಂಗ್ರೆಸ್ ನ ಒಬ್ಬ ನಾಯಿ ಇಲ್ಲಿ ಗುಂಡಿ ತೆಗೆದು ವಂಚನೆ ಮಾಡಿದ್ದಾನೆ ಎಂದು ಬೈಯ್ದಿದ್ದಾರೆ.

ನಾನು ಕೋರ್ಟ್‌ಗೆ ಹೋಗುತ್ತೇನೆ. ನೀವು ಕೇಸ್ ಕೊಡಿ ಏನಾದರೂ ಮಾಡಿ ಎಂದು ಆವಾಜ್ ಹಾಕಿದ್ದಾರೆ. ಅವಾಚ್ಯ ಶಬ್ದಗಳ ನಿಂದನೆ ಹಿನ್ನೆಲೆ ಕೊಣಾಜೆ ಠಾಣೆಯಲ್ಲಿ ಮಹಿಳಾ ಅಧಿಕಾರಿ ಪ್ರಕರಣ ದಾಖಲಿಸಿದ್ದಾರೆ. ಬೈಗುಳದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರು ಶಾಸಕ ಯು.ಟಿ.ಖಾದರ್ ಅನುದಾನದ ಕಾಮಗಾರಿ ಸಂಬಂಧ ಈ ಘಟನೆ ನಡೆದಿದೆ.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!