* ಶಿಗ್ಗಾಂವಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಭಿಪ್ರಾಯ
* ಜನಮೆಚ್ಚಿದ ಜಗಮೆಚ್ಚಿದ ನಾಯಕ ಎಂಬುದನ್ನು ತೋರಿಸಿಕೊಟ್ಟ ಬೊಮ್ಮಾಯಿ
* ಬಿಜೆಪಿ ಸರಕಾರ ಇದೆ ಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ ಸಿಎಂ
ಶಿಗ್ಗಾಂವಿ(ಆ.04): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಆಡಳಿತದಲ್ಲಿ ಬಿಜೆಪಿಗೆ ಹೆಚ್ಚು ಬಲ ಮತ್ತು ಬೆಲೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಮನ ನಾಡಿಮಿಡಿತವನ್ನು ಅರಿತವರು ಪಕ್ಷದ ತತ್ವ ಸಿದ್ಧಾಂತಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಪಕ್ಷಕ್ಕೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ಷೇತ್ರವೆನಿಸಿಕೊಂಡ ಕ್ಷೇತ್ರಗಳಲ್ಲಿ ಉಸ್ತುವಾರಿಗಳಾಗಿ ನೇಮಕಗೊಂಡು ಅವರ ಮುಖಂಡತ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಜನಮೆಚ್ಚಿದ ಜಗಮೆಚ್ಚಿದ ನಾಯಕ ಬಸವರಾಜ ಬೊಮ್ಮಾಯಿ ಎಂಬುದನ್ನು ತೋರಿಸಿಕೊಟ್ಟ ಪರಿಣಾಮ ಇಂದು ಸರ್ವಾನುಮತದಿಂದ ಕನ್ನಡನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನಮ್ಮ ಕ್ಷೇತ್ರದ ಹೆಸರನ್ನು ರಾಜ್ಯ ಭೂಪಟದಲ್ಲಿ ಬರೆದಿದ್ದಾರೆ ಎಂದರು.
ಯಾರು ಊಹಿಸಲು ಅಸಾಧ್ಯ: ಮಂತ್ರಿ ಸ್ಥಾನಕ್ಕೆ ಅಂತ ಶಾಸಕರ ಹೆಸರು ಪ್ರಸ್ತಾಪಿಸಿದ ಹೈಕಮಾಂಡ್
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ದಿನದಂದೇ ರೈತರ ಹಿತ ಕಾಪಾಡುವಲ್ಲಿ ರೈತರ ಮಕ್ಕಳಿಗೆ ಶಿಶ್ಯವೇತನ ಮಂಜೂರು ಮಾಡುವ ಮುಖಾಂತರ ಮಾದರಿಯಾಗಿದ್ದಾರೆ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಪ್ರತಿ ತಿಂಗಳಿಗೆ ಎರಡು ನೂರು ರೂಪಾಯಿಗಳನ್ನು ಹೆಚ್ಚಿಸುವ ಮುಖಾಂತರ ಇವರೆಲ್ಲರಿಗೂ ಸಾಮಾಜಿಕ ಭದ್ರತೆ ನೀಡಿ ನಿಮ್ಮೊಂದಿಗೆ ನಮ್ಮ ಬಿಜೆಪಿ ಸರಕಾರ ಇದೆ ಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದರು.