ಚಿಕ್ಕಬಳ್ಳಾಪುರ (ಜು.24): ಸಿಎಂ ಬದಲಾವಣೆ ಕುರಿತು ನಾವು ಬರೆದ ಪರೀಕ್ಷೆಗೆ ರಿಸಲ್ಟ್ ಬಂತಲ್ಲಾ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಮಾತನಾಡಿದ ಅವರು ಪರೀಕ್ಷೆ ಬರೆದಿದ್ದೆವು,ಈಗ ಫಲಿತಾಂಶ ಬಂದಿದೆ ಎಂದರು.
ಕೆಲ ದಿನಗಳ ಹಿಂದೆ ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದು ಯೋಗೇಶ್ವರ್ ನೀಡಿದ ಹೇಳಿಕೆ ಸಂಚಲನ ಮೂಡಿಸಿತ್ತು. ಈ ಬಗ್ಗೆ ಇತರ ಬಿಜೆಪಿ ನಾಯಕರು ನಾವು ಯಾವ ಪರೀಕ್ಷೆ ಬರೆದಿಲ್ಲ. ಬರೆದವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದ್ದರು.
ಯಡಿಯೂರಪ್ಪ ಕಂಡ ಕೂಡಲೇ ಬೇರೆ ದಾರಿ ಹಿಡಿದ ಯೋಗೇಶ್ವರ್
ಮುಖ್ಯಮಂತ್ರಿಗಳು ಹಿರಿಯರಯ. ಅವರ ಹೇಳೀಕೆಗಳ ಆಧಾರದಂತೆ ತೀರ್ಮಾನ ಕೈಗೊಳ್ಳುತ್ತಾರೆ. ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಆದರೆ ಮುಖ್ಯಮಂತ್ರಿಗಳೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಾ ಹೋಗುತ್ತಿದ್ದಾರೆ. ಕೆಲ ದಿನದಿಂದ ಸಿಎಂ ನಿಡುತ್ತಿರುವ ಹೇಳಿಕೆ ನಾನು ಗಮನಿಸಿದ್ದೇನೆ. ಅವರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.
ವಲಸೆ ಬಂದವರಿಗೆ ಮಂತ್ರಿ ಸ್ಥಾನದ ಆತಂಕವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾವು ಶಾಶ್ವತವಾಗಿ ಮಂತ್ರಿಗಳಾಗಿರಲ್ಲ. ಜನರ ಸೇವೆ ಅವಕಾಶ ಸಿಕ್ಕಾಗ ಮಾಡುತ್ತೇವೆ. ಊಹಾಪೋಹಗಳಿಗೆಲ್ಲಾ ಉತ್ತರಿಸಬೇಕಿಲ್ಲ. ಎಂದರು. ಮುಂದಿನ ಸಿಎಂ ಅಭ್ಯರ್ಥಿಗೆ ಯಾರು ಸೂಕ್ತ ಎಂಬ ಪ್ರಶ್ನೆಗೆ ನಮಗೆ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು.