ಎಸ್‌ಡಿಪಿಐ ಕಾಂಗ್ರೆಸ್‌ ಪಕ್ಷದ ಪಾಪದ ಕೂಸು: ಬಿ.ವೈ. ವಿಜಯೇಂದ್ರ ಕಿಡಿ

Suvarna News   | Asianet News
Published : Aug 18, 2020, 09:01 AM IST
ಎಸ್‌ಡಿಪಿಐ ಕಾಂಗ್ರೆಸ್‌ ಪಕ್ಷದ ಪಾಪದ ಕೂಸು: ಬಿ.ವೈ. ವಿಜಯೇಂದ್ರ ಕಿಡಿ

ಸಾರಾಂಶ

ಎಸ್‌ಡಿಪಿ ಕಾಂಗ್ರೆಸ್ ಪಕ್ಷದಪಾಪದ ಕೂಸು. ಅವರೇ ಬಿತ್ತಿದ ಬೀಜ ಎಂದು ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ ಕಿಡಿ ಕಾರಿದ್ದಾರೆ.

ಮೈಸೂರು (ಆ.18): ಎಸ್‌ಡಿಪಿಐ ಕಾಂಗ್ರೆಸ್‌ ಪಕ್ಷದ ಪಾಪದ ಕೂಸು. ಅವರೇ ಬಿತ್ತಿದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್‌ನ ಪಿತೂರಿ ಇದೆ. ಗಲಭೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ತನ್ನ ಶಾಸಕನ ಪರ ನಿಲ್ಲಬೇಕೋ ಅಥವಾ ಎಸ್‌ಡಿಪಿಐ ಪರ ನಿಲ್ಲಬೇಕೋ ಎಂಬ ಗೊಂದಲದಲ್ಲಿದೆ ಎಂದು ಆರೋಪಿಸಿದರು. 

ತಾವೇ ಪೋಷಿಸಿದವರ ಬಗ್ಗೆ ನಾಯಕರೇಕೆ ಸೊಲ್ಲೆತ್ತುತ್ತಿಲ್ಲ : ವಿಜಯೇಂದ್ರ ಕಿಡಿ...

ಎಸ್‌ಡಿಪಿಐ ಅನ್ನು ಕಾಂಗ್ರೆಸ್‌ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಪೊಲೀಸರ ದಾಳಿಯ ವೇಳೆ ಎಸ್‌ಡಿಪಿಐ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಗಲಭೆ ನಡೆಸುವ ಉದ್ದೇಶದಿಂದ ಸಭೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿಕಾರಿಪುರದ ವಿಜಯ ಕೇಸರಿಗೆ ಬಿಜೆಪಿ ಪ್ರಮೋಶನ್; ಹಿಂದಿದೆ ಈ ರೀಸನ್.!..

ಮುಂದಿನ ದಿನಗಳಲ್ಲಿ ತನಿಖೆ ಆಗಬೇಕಿದೆ. ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದ ಗಲಭೆ ಸಂಭವಿಸಿದೆ. ಕಾಂಗ್ರೆಸ್‌ ನಾವಿಕನಿಲ್ಲದ ದೋಣಿಯಂತಾಗಿದ್ದು, ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಹೇಳಿದರು.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌