
ಯಮಕನಮರಡಿ(ಜು.16): ಸಮೀಪದ ಹಂಚಿನಾಳ ಗ್ರಾಮದ ಬಿಜೆಪಿ ಹಿರಿಯ ಮುಖಂಡರು, ನೂರಾರು ಕಾರ್ಯಕರ್ತರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಶಾಸಕರು ಹೂವಿನ ಹಾರ ಹಾಕುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು, 2023ರ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದರು.
ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿ..?
ಕಾಂಗ್ರೆಸ್ ಮುಖಂಡರಾದ ಶೇಖರ ಮುಗಳಿ, ಥಳಪ್ಪ ಜಕ್ಕಪ್ಪಗೋಳ, ಶಾಮಗೌಡಾ ಪಾಟೀಲ, ಕಿರಣಸಿಂಗ್ ರಜಪೂತ, ಉಪಸ್ಥಿತರಿದ್ದರು. ಬಿಜೆಪಿ ಕಾರ್ಯಕರ್ತರಾದ ರಾಹುಲ್ ಬಡಕುಂದ್ರಿ, ಯಾಸಿನ್ ಮುಲ್ಲಾ, ಮಲ್ಲಪ್ಪಾ ಬಡಕುಂದ್ರಿ, ಲಕ್ಕಮ್ಮಗೌಡಾ ಪಾಟೀಲ, ಗಣೇಶ್ ಕೆಂಚಗಾರಟ್ಟಿ, ಗಜು ಚೌಗಲಾ, ಮಲ್ಲಪ್ಪ ಚೌಗಲಾ, ರವಿ ಪಾಟೀಲ, ರಾಜು ಚೌಗಲಾ, ಬಸವಂತ ಬಡಕುಂದ್ರಿ, ಸಂಜು ರೇವಣ್ಣವರ, ಶಿವಾನಂದ ಗುಂಡಿ ಅನೇಕರಿದ್ದರು.