ಡಿಸೆಂಬರ್ 9ರಂದು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ತುಮಕೂರಿನ ಜೆಡಿಎಸ್ ಶಾಸಕ ಬಿಜೆಪಿ ಸರ್ಕಾರ ಉಳಿಯಬಹುದು ಎಂದು ಭವಿಷ್ಯ ನಡುದಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಉಳಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು(ಡಿ.07): ಬಿಜೆಪಿ ಸರ್ಕಾರ ಉಳಿಬಹುದು ಎಂದು ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ತುಮಕೂರಿನಲ್ಲಿ ಭವಿಷ್ಯ ನುಡಿದಿದ್ದಾರೆ. ತುಮಕೂರಿನ ಗುಬ್ಬಿಯಲ್ಲಿ ಮಾತನಾಡಿದ ಅವರು, ಸಮಿಶ್ರ ಸರ್ಕಾರ ಬರುತ್ತಾ ಇಲ್ವಾ ಎಂದು ಶಾಸ್ತ್ರ ಹೇಳೋಕೆ ಆಗೊಲ್ಲ. ಬಿಜೆಪಿ ಉಳಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಯಾವುದು ಇದ್ದರೂ ಉಪಚುನಾವಣೆಯಲ್ಲಿ ಅದಕ್ಕೆ ಓಟ್ ಹಾಕೋದು ಸರ್ವೆ ಸಾಮಾನ್ಯ. ಹಾಗಾಗಿ ಸರ್ಕಾರ ಉಳಿಯಬಹುದು ಅಷ್ಟು ಮಾತ್ರ ಹೇಳಬಹುದು. ಜೆಡಿಎಸ್ ಮುಂದಿನ ನಡೆ ಬಗ್ಗೆ ಕುಳಿತು ಮಾತನಾಡಬೇಕು ಎಂದು ಹೇಳಿದ್ದಾರೆ.
ಎನ್‌ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಾಟ, ರೋಡ್ ರೋಮಿಯೋಗೆ ಧರ್ಮದೇಟು
ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಅನರ್ಹ ಶಾಸಕರಿಗೆ ಜನ ಮತ ಹಾಕಿ ಗೆಲ್ಲಿಸುತ್ತಾರಾ..? ಅಥವಾ ಸೋಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಮದುವೆ ಗಿಫ್ಟ್‌ವರೆಗೂ ಬಂತು ಈರುಳ್ಳಿ: ವಿಡಿಯೋ ವೈರಲ್!