ರಾಜ್ಯ ಬಿಜೆಪಿ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಅನುಷ್ಟಾನದ ಬಗ್ಗೆ ಕಾಳಜಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಧುಗಿರಿ : ರಾಜ್ಯ ಬಿಜೆಪಿ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಅನುಷ್ಟಾನದ ಬಗ್ಗೆ ಕಾಳಜಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ತಮ್ಮ ಸ್ವಗೃಹದಲ್ಲಿ 2023ರಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಮ್ಮ ತಂದೆ ಕೆ.ಎನ್.ರಾಜಣ್ಣ ಶಾಸಕರಾದರೆ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ವೇಗ ಸಿಗಲಿದ್ದು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬಹುದು. ರೈಲ್ವೆ ಯೋಜನೆ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕಿದ್ದು ಇದುವರೆಗೂ ಒಂದಿಂಚು ಭೂಮಿ ಸ್ವಾಧೀನವಾಗಿಲ್ಲ. ಆ ನಿಟ್ಟಿನಲ್ಲಿ ರಾಜಣ್ಣ ಶಾಸಕರಾಗಿ ಆಯ್ಕೆಯಾದರೆ ಈ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು.
ಇದೇ 16ರಂದು ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಆಗಮಿಸಲಿದ್ದು ತಾಲೂಕಿನಿಂದ ಹೆಚ್ಚು ಮಹಿಳೆಯರು ಸಮಾವೇಶಕ್ಕೆ ತೆರಳುವಂತೆ ರಾಜೇಂದ್ರ ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯೆ ಶಾಂತಲರಾಜಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಸೋಲಿನ ಭೀತಿಯಿಂದ ಜಿಪಂ, ತಾಪಂ ಚುನಾವಣೆ ನಡೆಸುವುದಕ್ಕೆ ಹಿಂದೇಟು ಹಾಕುತ್ತಿದ್ದು, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಜನಪರ ಆಡಳಿತ ನಡೆಸಲು ಸಾಧ್ಯ. ಗ್ರಾಪಂ ಮಹಿಳಾ ಸದಸ್ಯರು ಒಗ್ಗಟ್ಟಾಗಿ ಈಗ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ರಾಜಣ್ಣರನ್ನು ಗೆಲ್ಲಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಬಿ.ನಾಗೇಶ್‌ಬಾಬು, ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕಷ್ಣಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣರೆಡ್ಡಿ, ತಾಪಂ ಅಧ್ಯಕ್ಷೆ ಇಂದಿರಾ, ಮುಖಂಡರಾದ ಸಿದ್ದಾಪುರ ವೀರಣ್ಣ, ಗೋವಿಂದಯ್ಯ, ಶನಿವಾರಂರೆಡ್ಡಿ, ಕಾಂತರಾಜು ಅನೇಕರು ಇದ್ದರು.
BJP ಸರ್ಕಾರಕ್ಕೆ ಹೆಸರು ತಂದ ಸುಧಾಕರ್
ಚಿಕ್ಕಬಳ್ಳಾಪುರ (ಜ.11) : ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ನನಗೆ ಕೋವಿಡ್ ಪಾಸಿಟಿವ್ ಬಂದಾಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನನ್ನನ್ನು ರಕ್ಷಿಸಿದರೆಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚಿಕ್ಕಬಳ್ಳಾಪುರ ಉತ್ಸವ(Chikkaballapur Utsav)ದಲ್ಲಿ ಮಂಗಳವಾರ ಸಂಜೆ ಪಾಲ್ಗೊಂಡು ಫಲಪುಪ್ಪ ಪ್ರದರ್ಶನ ಹಾಗೂ ಆಹಾರ ಮೇಳ, ಕೃಷಿ ವಸ್ತು ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಒಬ್ಬ ಸಚಿವರಾಗಿ ಕರ್ನಾಟಕವನ್ನು ಕೋವಿಡ್(Covid-19)(ನಿಂದ ಪಾರು ಮಾಡಿದ ಮಹಾನ್ ದೊಡ್ಡ ವ್ಯಕ್ತಿತ್ವ ಅವರದು ಎಂದರು.
ಸ್ಯಾಂಟ್ರೋ ರವಿ ಬಗ್ಗೆ ಆಳವಾದ ತನಿಖೆಗೆ ಸೂಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮಾದರಿ ಗ್ರಾಮ ಪರಿಕಲ್ಪನೆಗೆ ಶ್ಲಾಘನೆ
ಚಿಕ್ಕಬಳ್ಳಾಪುರ ಉತ್ಸವವನ್ನು ಬಹಳ ಚಿಂತನೆ, ದೂರದೃಷ್ಟಿಯಿಂದ ಆಯೋಜಿಸಿದ್ದಾರೆ. ಇದು ಬರೀ ಪ್ರದರ್ಶನವಲ್ಲ. ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಇರುವ ಜಿಲ್ಲೆಗೆ ನೀರಾವರಿ ಕಲ್ಪಿಸಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ವಸ್ತು ಪ್ರದರ್ಶನದಲ್ಲಿ ತೋರಿಸಿದ್ದಾರೆ. ಮಳಿಕೆ, ಮಾದರಿ ಗ್ರಾಮ ಪರಿಕಲ್ಪನೆ ನಿಜಕ್ಕೂ ನೋಡಿದವರಿಗೆ ಸಾಕಷ್ಟುಅರಿವು, ಪ್ರೇರಣೆ ನೀಡುತ್ತದೆಂದರು.
ಸುಧಾಕರ್(Dr K Sudhakar) ನಾಯಕತ್ವ ಈ ಜಿಲ್ಲೆಗೆ ಸಿಕ್ಕಿರುವುದು ಪುಣ್ಯ, ಅವರ ನಾಯಕತ್ವನ್ನು ಜಿಲ್ಲೆಯ ಜನತೆ ಬಳಸಿಕೊಳ್ಳಬೇಕು, ಅವರ ಅಭಿವೃದ್ದಿಯ ದೂರದೃಷ್ಠಿ ಎಲ್ಲರನ್ನು ಬೆರಗುಗೊಳಿಸುತ್ತದೆ. ಒಬ್ಬ ಶಾಸಕನಾಗಿ, ಮಂತ್ರಿಯಾಗಿ ತನ್ನ ಜಿಲ್ಲೆಗೆ ಏನು ಮಾಡಬಹುದು ಎಂಬುದನ್ನು ಸಚಿವ ಸುಧಾಕರ್ ತೋರಿಸಿಕೊಟ್ಟಿದ್ದಾರೆ. ಇದೆಲ್ಲಾ ನಮಗೆ ಮಾದರಿ. ಸುಧಾಕರ್ ರವರ ಬದ್ದತೆ, ಕಾರ್ಯದಕ್ಷತೆ, ಕಾರ್ಯಪ್ರವೃತ್ತಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮೇಳೈಸಿದೆಯೆಂದು ಸಚಿವ ಆಗರ ಜ್ಞಾನೇಂದ್ರ ಹೇಳಿದರು.
ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಳ್ಳೆ ಹೆಸರು ಇದ್ದರೆ ಅದು ಸುಧಾಕರ್ ಅವರ ಶ್ರಮದಿಂದ ಮಾತ್ರ ಸಾಧ್ಯವೆಂದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಉತ್ಸವದಲ್ಲಿ ವ್ಯವಸ್ಥಿತವಾಗಿ ಬೆಳಕು ಚೆಲ್ಲಿದ್ದಾರೆಂದರು. ಬರದ ನಾಡು ಆಗಿದ್ದ ಈ ಭಾಗವನ್ನು ಮಲೆನಾಡಾಗಿ ಪರಿವರ್ತಿಸಿದ್ದಾರೆಂದರು.
ಸ್ಯಾಂಟ್ರೋ ರವಿ ಪ್ರಕರಣ: ಕುಮಾರಸ್ವಾಮಿ ಹತಾಶೆ ಸ್ಥಿತಿಗೆ ತಲುಪಿದ್ದಾರೆ: ಆರಗ
ಸ್ಯಾಂಟ್ರೋ ರವಿಗೆ ಸೂಕ್ತ ಜಾಗ ತೋರಿಸುತ್ತೇವೆ:
ಸ್ಯಾಂಟ್ರೋ ರವಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆರಗಜ್ಞಾನೇಂದ್ರ, ನಾವು ಆತನಿಗೆ ಇಲ್ಲಿ ಜಾಗ ತೋರಿಸಬೇಕು ಅಲ್ಲಿ ಜಾಗ ತೋರಿಸುವ ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಆತನಿಗೆ ಸಹಕಾರ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಸೇವೆಯಿಂದ ಅಮಾನತ್ತುಗೊಳಿಸಿರುವುದಾಗಿ ತಿಳಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇತಂಹ ವ್ಯಕ್ತಿತ್ವ ಇರುವ ವ್ಯಕ್ತಿಗಳನ್ನು ಬೇರು ಮಟ್ಟದಿಂದ ಎಲ್ಲಿಯು ಓಡಾಡದಂತೆ ಬೇರು ಮಟ್ಟದಲ್ಲಿ ಕಿತ್ತು ಹಾಕುವ ಕೆಲಸವನ್ನು ಗೃಹ ಇಲಾಖೆ ಸಮರ್ಥವಾಗಿ ಮಾಡಲಿದೆ ಎಂದರು.