ಇಲ್ಲಿ ಜನತಾ ದಳಕ್ಕೆ ಬಹುಮತ ಇದೆ. ಆದರೆ ಅಧಿಕಾರ ಒಲಿದಿದ್ದು ಮಾತ್ರ ಬಿಜೆಪಿ ಪಾಳಯಕ್ಕೆ. ಮೀಸಲಾತಿ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
ತುರುವೇಕೆರೆ (ಫೆ.06): ತಾಲೂಕಿನ ಅಮ್ಮಸಂದ್ರ ಗ್ರಾಪಂನ 11 ಸದಸ್ಯರ ಪೈಕಿ 7 ಮಂದಿ ಜೆಡಿಎಸ್ ಬೆಂಬಲಿತ ಸದಸ್ಯರು ಇದ್ದರೂ ಬಿಜೆಪಿಯಲ್ಲಿದ್ದ ಸದಸ್ಯರೋರ್ವರಿಗೆ ಅಧ್ಯಕ್ಷ ಸ್ಥಾನದಕ್ಕಿದೆ.
ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಆ ಪಂಚಾಯ್ತಿಯಲ್ಲಿ ಆದಿತ್ಯ ಪಟ್ಟಣದ ಒಂದನೇ ವಾರ್ಡಿನಿಂದ ಗೆಲುವು ಸಾಧಿಸಿದ್ದ ಪದ್ಮ ರೋಹಿತ್‌ಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ಸಿಕ್ಕಿತು. ಆದರೆ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ ಆದಿತ್ಯ ಪಟ್ಟಣದ ಎರಡನೇ ವಾರ್ಡಿನ ಸದಸ್ಯ ಎನ್.ಉಮೇಶ್ ಪಾಲಾಯಿತು.
ಜೆಡಿಎಸ್-ಬಿಜೆಪಿ ಮೈತ್ರಿಗೆ ಒಲಿಯಿತು ಅಧಿಕಾರ ..
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಪದ್ಮ ರೋಹಿತ್, ಉಪಾಧ್ಯಕ್ಷರಾಗಿ ಎನ್.ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಗುರುಸಿದ್ದಪ್ಪ ಪ್ರಕಟಿಸಿದರು.
ಸದಸ್ಯರಾದ ಕೆ.ಸಿದ್ದಗಂಗಯ್ಯ, ಡಿ.ಬಿ.ಶಿವಯ್ಯ, ಹೆಚ್.ಎನ್.ಗಂಗಾಧರಯ್ಯ, ಸರೋಜಮ್ಮ, ಪವಿತ್ರ, ವರಲಕ್ಷ್ಮಿ, ಗಂಗಯ್ಯ, ಸಿ.ಪಲ್ಲವಿ, ಸಿದ್ದಗಂಗಮ್ಮ ಹಾಜರಿದ್ದರು.