ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಿವೆ. ಎರಡು ಪಕ್ಷಗಳು ಒಂದಾಗಿ ಅಧಿಕಾರ ನಡೆಸಲು ಮುಂದಾಗಿವೆ.
ಗುಬ್ಬಿ (ಫೆ.06): ತಾಲೂಕಿನ ಕೊಪ್ಪ ಗ್ರಾಪಂಗೆ ಜೆಡಿಎಸ್ ಬೆಂಬಲಿತ ಚಂದ್ರಕಲಾ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಪಾಂಡುರಂಗಯ್ಯಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪರಿಶಿಷ್ಟಪಂಗಡ ಮಹಿಳೆ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆಗೋಳೇನಹಳ್ಳಿ ಕ್ಷೇತ್ರದ ಚಂದ್ರಕಲಾ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾದರು. ಹಿಂದುಳಿದ ವರ್ಗ(ಎ) ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಕರಿಯನಹಟ್ಟಿಕ್ಷೇತ್ರದ ಪಾಂಡುರಂಗಯ್ಯ ಏಕೈಕ ಅಭ್ಯರ್ಥಿಯಾಗಿ ಅವಿರೋಧ ಆಯ್ಕೆಯಾಗುವ ಮೂಲಕ ದ್ವಿಪಕ್ಷೀಯ ಆಡಳಿತಕ್ಕೆ ಮುನ್ನುಡಿ ಬರೆದಂತಾಯಿತು.
ಸಭಾಪತಿ ಚುನಾವಣೆಗೆ ದಿನಾಂಕ ಪ್ರಕಟ..ಮತ್ತೇನಾದರೂ ಟ್ವಿಸ್ಟ್ ಇದೆಯಾ? .
ಚುನಾವಣಾ ಪ್ರಕ್ರಿಯೆಯನ್ನು ಸಿಡಿಪಿಒ ಹೊನ್ನೇಶಪ್ಪ ನಡೆಸಿಕೊಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಚಂದ್ರಕಲಾ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲ ಸವಲತ್ತಿನ ಕೆಲಸವನ್ನು ಮಾಡಲಾಗುವುದು. ಕುಡಿಯುವ ನೀರು ಒದಗಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಿ ನಂತರ ಸ್ವಚ್ಛತೆ, ಬೀದಿದೀಪ, ರಸ್ತೆ ಕೆಲಸಗಳಿಗೂ ಒತ್ತು ನೀಡಲಾಗುವುದು ಎಂದರು.
ಗ್ರಾಪಂ ಸದಸ್ಯ ರಮೇಶ್, ಮುಖಂಡರಾದ ಜಿ.ಟಿ.ರೇವಣ್ಣ, ಪಣಗಾರ್ ವೆಂಕಟೇಶ್, ಗೋವಿಂದಪ್ಪ, ವಿಶ್ವನಾಥ್, ಯರ್ರಪ್ಪ, ಜುಂಜೇಗೌಡ, ರಾಮಣ್ಣ, ನಾಗರಾಜು, ರಮೇಶ್, ಭೋಜಣ್ಣ ಇತರರು ಇದ್ದರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.