ಪಿಎಂ ಹಾಗೂ ಶಾಸಕ ಬಗ್ಗೆ ಕಾಶಪ್ಪನವರ ಹೇಳಿಕೆಗೆ ಬಿಜೆಪಿ ಖಂಡನೆ| ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಕಾರ್ಯ ವೈಖರಿಗೆ ಇಡಿ ಜಗತ್ತೇ ಕೊಂಡಾಡಿರುವಾಗ ಕಾಶಪ್ಪನವರ ಹೇಳಿಕೆ ಸಣ್ಣತನ: ಮಹಾಂತಗೌಡ| ವಿಜಯಾನಂದ ಕಾಶಪ್ಪನವರ ಶಾಸಕರಾಗಿ 5 ವರ್ಷ ಕಾರ್ಯಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡಬಾರದು|
ಇಳಕಲ್ಲ(ಮೇ.21): ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ನಮ್ಮ ದೇಶದ ಪ್ರಧಾನಮಂತ್ರಿಗಳ ಹಾಗೂ ನಮ್ಮ ಶಾಸಕರ ಬಗ್ಗೆ ಕೊಟ್ಟ ಹೇಳಿಕೆಯನ್ನ ನಾವು ಖಂಡಿಸುತ್ತೇವೆ ಎಂದು ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಮಹಾಂತಗೌಡ ಪಾಟೀಲ ತಿಳಿಸಿದ್ದಾರೆ.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಓರ್ವ ಶಾಸಕರಾಗಿ ಕಾರ್ಯ ಮಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನಮ್ಮ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಟೀಕಿಸಿರುವುದು ನೋಡಿದರೆ ಅವರಿಗೆ ಜನತೆ ಅಭಿಪ್ರಾಯ ಗೊತ್ತಲ್ಲ ಎಂದು ತಿಳಿಯುತ್ತದೆ. ಕೊರೋನಾ ರೋಗ ನಿಯಂತ್ರಣಕ್ಕೆ ನರೇಂದ್ರ ಮೋದಿಯವರು ಮಾಡಿದ ಕಾರ್ಯ ವೈಖರಿಗೆ ಇಡಿ ಜಗತ್ತೇ ಕೊಂಡಾಡಿರುವಾಗ ಇವರ ಹೇಳಿಕೆ ಸಣ್ಣತನ ತೊರಿಸುತ್ತದೆ ಎಂದರು.
'ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣ'
ಇನ್ನೂ ನಮ್ಮ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲರು ಕೊರೋನಾ ರೋಗ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಕೈಜೋಡಿಸಿ ಕಾರ್ಯ ಮಾಡಿದೆ. 16 ಸಾವಿರಕ್ಕೂ ಹೆಚ್ಚು ಅಹಾರ ಧಾನ್ಯಗಳ ಕಿಟ್‌ನ್ನು ಇಡಿ ತಾಲೂಕಿನ ಬಡ ಜನರಿಗೆ ಹಂಚಿದ್ದು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡಿರುವುದು, ಸರ್ಕಾರದಿಂದ ಬರಬೇಕಾದ ಸಹಾಯ ಧನ ತಂದಿರುವುದು ಕಾಶಪ್ಪನವರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದರು.
ನಮ್ಮ ಶಾಸಕ ದೊಡ್ಡನಗೌಡ ಪಾಟೀಲರ ಸುಪುತ್ರ ರಾಜುಗೌಡರ ಬಗ್ಗೆ ಹಾಗೂ ಅವರ ಹಿಂಬಾಲಕರ ಬಗ್ಗೆ ಸುಳ್ಳು ಆರೋಪ ಮಾಡಿ ಮಾಜಿ ಶಾಸಕ ಕಾಶಪ್ಪನವರು ತಾಲೂಕಿನ ಜನತೆಗೆ ಯಾರು ಹೇಗಿದ್ದಾರೆ ಎಂಬುವುದು ತಿಳಿದೆ ಹಿಂದಿನ ಚುನಾವಣೆಯಲ್ಲಿ ಮತ ಹಾಕಿ ಉತ್ತರ ಕೊಟ್ಟಿದ್ದಾರೆ. ತಾವು ಹಾಗೂ ತಮ್ಮ ಸಹೋದರರ ಕಾರ್ಯ, ತಮ್ಮ ಹಿಂಬಾಲಕರ ಉಸಕಿನ ದಂದೆ ಸೇರಿದಂತೆ ತಮ್ಮ ಇಸ್ಪಿಟ್ ಆಟದ ಅಡ್ಡೆಗಳು ಎಲ್ಲರಿಗೂ ಗೊತ್ತಿದ್ದ ವಿಷಯ. ಇನ್ನೂ ಮೇಲಾದರು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಕೊರೋನಾ ರೋಗ ನಿಯಂತ್ರಣಕ್ಕೆ ತಾವು ಎನು ಮಾಡಿದ್ದೇವೆ ಎಂದು ಅರಿಯಲಿ. ಇನ್ನ ಮುಂದಾದರೂ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ. ದೇಶ, ರಾಜ್ಯ ಹಾಗೂ ತಾಲೂಕಿನ ಮತಕ್ಷೇತ್ರ ಅಭಿವೃದ್ಧಿಗೆ ಕೈಜೋಡಿಸಲಿ, ಮಾರ್ಗದರ್ಶನ ಮಾಡಲಿ. ಕಾಶೆಪ್ಪನವರು ಕೊಟ್ಟಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ ಮಾತನಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಶಾಸಕರಾಗಿ 5 ವರ್ಷ ಕಾರ್ಯಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಹಾಗೂ ಕೊರೋನಾ ರೋಗ ನಿಯಂತ್ರಣದಲ್ಲಿ ನಮ್ಮ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಇಡಿ ಜಗತ್ತು ಅಲ್ಲದೆ ರಾಹುಲು ಗಾಂಧಿಯವರು ಸಹ ಅಭಿನಂದಿಸಿದ್ದಾರೆ ಎಂಬುವುದನ್ನು ಅರಿಯಬೇಕು ಎಂದರು.