Hindu Nation: ಹಿಂದುತ್ವ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ತಿದೆ: ಮುತಾಲಿಕ್‌

By Kannadaprabha NewsFirst Published Nov 29, 2021, 12:45 PM IST
Highlights

*  ಶ್ರೀ ಕೃಷ್ಣ ದೇವಸ್ಥಾನದಲ್ಲಿ ಇಫ್ತಿಯಾರ್‌ ಆಯೋಜಿಸಿದ್ದ ವೇಳೆಯೇ ವಿರೋಧಿಸಿದ್ದ ಸೇನೆ
*  ದೇಶದಲ್ಲಿ ಹಿಂದೂಗಳು ಒಗ್ಗಟ್ಟಾಗಬೇಕಿದೆ
*  ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಪ್ರತಿಯೊಬ್ಬರು ಸೈನಿಕರಂತೆ ಹೋರಾಡಬೇಕು 
 

ಹುಬ್ಬಳ್ಳಿ(ನ.29):  ಹಿಂದುತ್ವ(Hindutva), ಹಿಂದೂ ರಾಷ್ಟ್ರ(Hindu Nation) ನಿರ್ಮಾಣ, ಗೋವು ರಕ್ಷಣೆ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ, ಶ್ರೀರಾಮಸೇನೆ ಕಿಂಚಿತ್ತು ಹೊಂದಾಣಿಕೆ ಮಾಡಿಕೊಳ್ಳದೆ ಮುಂದುವರಿಯುತ್ತದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದರು.

ಭಾನುವಾರ ಇಲ್ಲಿನ ನೇಕಾರ ನಗರದ ವೈ.ಎಸ್‌.ಬಮ್ಮಾಪುರ ಸಭಾಭವನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಗೆ ಅಭ್ಯಾಸ ವರ್ಗ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀರಾಮ ಸೇನೆಯ(Sri Ram Sena) ಹಿಂದೂ ರಾಷ್ಟ್ರ ರಕ್ಷಣೆ ಕಾರ್ಯಕ್ಕೆ ಬಿಜೆಪಿ(BJP), ಪರಿವಾರ, ಕಾಂಗ್ರೆಸ್‌(Congress) ಬೆಂಬಲಿಸುವ ಬದಲು ಕುಗ್ಗಿಸುವ ಕೆಲಸ ಮಾಡುತ್ತಿವೆ. ಹಿಂದೂ ರಕ್ಷಣೆ ವಿಚಾರಕ್ಕಾಗಿ ಹೋರಾಡುವವರ ಮೇಲೆ ರೌಡಿ ಶೀಟರ್‌(Rowdysheeter), ಗೂಂಡಾ ಕಾಯ್ದೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನನ್ನ ವಿರುದ್ಧ 107 ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಸರ್ಕಾರ ಹೋರಾಟಕ್ಕೆ ಅಡ್ಡಿಯಾಗಿವೆ. 17 ವರ್ಷಗಳಿಂದ ಶ್ರೀರಾಮಸೇನೆ ಹೋರಾಟ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್‌ನ ಕುಗ್ಗಿಸುವ ಕಾರ್ಯಕ್ಕೆ ಬಗ್ಗದೆ ಸಂಘಟನೆ ಹಾಗೂ ಶಿಸ್ತಿನಿಂದ ಸೇನೆಯ ಹೋರಾಟ ನಿರಂತರವಾಗಿ ಸಾಗಲಿದೆ ಎಂದರು.

Religious Conversion: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒಪ್ಪಿಗೆ ನೀಡಲಿ: ಮುತಾಲಿಕ್‌

ಹಿಂದುತ್ವದ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಕೆಲ ವಿಚಾರದಲ್ಲಿ ಹೋರಾಟ ಮಾಡದೆ ಸುಮ್ಮನಾಗುತ್ತದೆ. ಆದರೆ, ಶ್ರೀರಾಮಸೇನೆ ಕಿಂಚಿತ್ತು ಹೊಂದಾಣಿಕೆ ಮಾಡಿಕೊಳ್ಳದೆ ಮುಂದುವರಿಯುತ್ತದೆ. ಶ್ರೀ ಕೃಷ್ಣ ದೇವಸ್ಥಾನದಲ್ಲಿ(Shri Krishna Temple) ಇಫ್ತಿಯಾರ್‌(Iftar) ಆಯೋಜಿಸಿದಾಗ ಸೇನೆ ವಿರೋಧಿಸಿತು. ಹಲವು ಮಠಾಧೀಶರು ನಮ್ಮನ್ನು ವಿರೋಧಿಸಿದರು ಎಂದರು. ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸಿಲ್ಲ. ರಾಷ್ಟ್ರ ರಕ್ಷಣೆಗೆ ಸೈನಿಕರಂತೆ ಕೆಲಸ ಮಾಡಬೇಕಿದೆ. ಅವರಂತೆ ಧರ್ಮ ಉಳಿವಿಗಾಗಿ ಹೋರಾಡಬೇಕು ಎಂದರು.

ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಕೋವಿಡ್‌(Covid19) ಲಾಕ್‌ಡೌನ್‌(Lockdown) ಸಮಯದಲ್ಲಿ ರಾಷ್ಟ್ರದಲ್ಲಿ ಮತಾಂತರ ವ್ಯಾಪಕವಾಗಿದೆ. ಅದನ್ನು ತಡೆದು ಹಿಂದೂ ಧರ್ಮದ ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ಶ್ರೀ ರಾಮಸೇನೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಹೋರಾಟಕ್ಕೆ ಇಳಿಯಲಿದೆ. ತ್ರಿಪುರದಲ್ಲಿ ನಡೆದ ಹಿಂಸಾಚಾರ, ಸವಣೂರ ಪಟ್ಟಣದಲ್ಲಿ ನಡೆದ ಬೃಹತ್‌ ಪ್ರತಿಭಟನೆ ಹಿಂದೂ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯದ ಪ್ರಮಾಣ ತೋರಿಸುತ್ತಿದೆ ಎಂದರು.

ಶ್ರೀ ಪರಮಾತ್ಮ ಮಹಾರಾಜ ಮಾತನಾಡಿ, ದೇಶದಲ್ಲಿ ಹಿಂದೂಗಳು(Hindu) ಒಗ್ಗಟ್ಟಾಗಬೇಕಿದೆ. ಪ್ರತಿಯೊಬ್ಬರು ಕೈ ಜೋಡಿಸಿದಾಗ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ. ಯಾವುದೇ ಆಸೆ ಆಮೀಷೆಗೆ ಬಲಿಯಾಗಿ ಮತಾಂತರ ನಡೆಯಬಾರದು. ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಪ್ರತಿಯೊಬ್ಬರು ಸೈನಿಕರಂತೆ ಹೋರಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯಪ್ರಭುದೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘಟನೆಯ ಪ್ರಮುಖರಾದ ಮಂಜುನಾಥ ಅಮಾಸಿ, ಸುರೇಶ ಅಂಗಡಿ, ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ರಾಜು ಗಾಡಗೋಳಿ, ದುರ್ಗಾ ಸೇನಾ ಪ್ರಮುಖರಾದ ಆರತಿ ಕಲಾಲ ಇನ್ನಿತರರಿದ್ದರು.

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಪ್ರಮೋದ್ ಮುತಾಲಿಕ್

ಬ್ಲ್ಯಾಕ್‌ ಮ್ಯಾಜಿಕ್‌ ಮೂಲಕ ಮತಾಂತರ

ಇತ್ತೀಚೆಗೆ ಯಾದಗಿರಿಯಲ್ಲಿ ಮಾತನಾಡಿದ್ದ ಪ್ರಮೋದ್‌ ಮುತಾಲಿಕ್‌ ಅವರು, ಬ್ಯ್ಲಾಕ್‌ ಮ್ಯಾಜಿಕ್‌(Black Magic)  ಮೂಲಕ ಮುಗ್ಧರ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಿ ಮತಾಂತರ ಮಾಡಲಾಗುತ್ತಿದೆ ಎಂದು ಕ್ರಿಶ್ಚಿಯನ್‌ ಧರ್ಮದ(Christianity) ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. 

ಡಿಸೆಂಬರ್‌ ಅಧಿವೇಶನದಲ್ಲಿ(Session) ಸರ್ಕಾರ ಮತಾಂತರ ನಿಷೇದ ಕಾಯ್ದೆ(Conversion Prohibition Act) ಜಾರಿಗೆ ಮಾಡಲೇಬೇಕು, ಮತಾಂತರಕ್ಕೆ ತಡೆಯೊಡ್ಡಬೇಕಾಗಿದೆ, ಕಾಂಗ್ರೆಸ್‌ನವರ(Congress) ಕುಮ್ಮಕ್ಕಿನಿಂದ ಮತಾಂತರ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಓಟ್‌ ಬ್ಯಾಂಕ್‌ಗೋಸ್ಕರ್‌(Vote Bank) ಕಾಂಗ್ರೆಸ್‌ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ ಅವರು, ಇಲ್ಲಿಯವರೆಗೆ ಬಡವರಿಗೆ ಮಾತ್ರ ಸೀಮಿತವಾಗಿದಂತಿದ್ದ ಮತಾಂತರ ಈಗ ಎಲ್ಲಾ ವರ್ಗಕ್ಕೂ ಆವರಿಸುತ್ತಿದೆ, ದಾವಣಗೆರೆಯಲ್ಲಿ(Davangere) ವೀರಶೈವ ಜನಾಗದವರನ್ನೂ ಸಹ ಮತಾಂತರ ಮಾಡಲಾಗಿದೆ, ಬೆಳಗಾವಿ ಅ​ಧಿವೇಶದಲ್ಲಿ(Belagavi Session) ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದ ಅವರು, ಮತಾಂತರ ನಿಷೇಧ ಕಾಯಿದೆ ಜಾರಿಗೆ ಬರದಿದ್ದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದರು. 
 

click me!