' ಜನರ ಸಾವನ್ನೂ ಸಂಭ್ರಮಿಸುವ ಏಕೈಕ ಪಕ್ಷ ಬಿಜೆಪಿ : ಹರಿಪ್ರಸಾದ್‌'

By Kannadaprabha NewsFirst Published Oct 25, 2021, 6:20 AM IST
Highlights
  • ಜನರ ಸಾವು, ನೋವನ್ನೂ ಸಂಭ್ರಮಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ.
  • ಅವರಷ್ಟುವಿಕೃತ ಮನಸ್ಸಿನವರು ಇನ್ನೊಬ್ಬರಿಲ್ಲ ಎಂದು ಶಾಸಕ ಬಿ.ಕೆ. ಹರಿಪ್ರಸಾದ್‌ ಆಕ್ರೋಶ 

 ಹಾನಗಲ್‌ (ಅ.25): ಜನರ ಸಾವು, ನೋವನ್ನೂ ಸಂಭ್ರಮಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ (BJP) ಮಾತ್ರ. 

ಅವರಷ್ಟುವಿಕೃತ ಮನಸ್ಸಿನವರು ಇನ್ನೊಬ್ಬರಿಲ್ಲ ಎಂದು ಶಾಸಕ ಬಿ.ಕೆ. ಹರಿಪ್ರಸಾದ್‌ (BK Hariprasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

100 ಕೋಟಿ ಲಸಿಕೆ: ಸಂಭ್ರಮಿಸೋದು ಬಿಟ್ಟು ದೇಶದ ಜನರ ಕ್ಷಮೆ ಕೇಳಿ, ಹರಿಪ್ರಸಾದ್‌

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ (Corona) ಒಂದು ರಾಷ್ಟ್ರೀಯ ದುರಂತ. ಇಂಥ ಸಂದರ್ಭವನ್ನು ಸಂಭ್ರಮಿಸಿದವರು ಬಿಜೆಪಿಗರು (BJP). ಅವರು ವಿಕೃತ ಮನೋಭಾವದವರು. ಪ್ರಧಾನಿ ಮೋದಿ (PM Narendra Modi) ಆ ಸಂದರ್ಭದಲ್ಲಿ ನವಿಲಿಗೆ ಕಾಳು ನೀಡುತ್ತಾ ಕಾಲ ಕಳೆದರು. ವಿದೇಶದ ಫೋಟೋಗ್ರಾಫರ್‌ಗಳಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಅವರಿಗೆ ಮಾತ್ರ ಕೊರೋನಾ (Corona) ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದರು. 

ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ತಂದ ಆಹಾರ ಭದ್ರತಾ ಕಾಯ್ದೆ ಪರಿಣಾಮ ಕೊರೋನಾ ಸಂಕಷ್ಟದಲ್ಲಿ ಜನತೆಗೆ ಪಡಿತರ ಸಿಕ್ಕಿದೆ. ಇದರ ಕ್ರೆಡಿಟ್‌ ಅನ್ನು ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುಪ್ರೀಂ ಕೋರ್ಟ್‌ (Supreme Court) ಕಪಾಳಮೋಕ್ಷವಾದ ಬಳಿಕ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕಾಕರಣಕೆ ಮುಂದಾಯಿತು. ಆದರೆ, ಚೀನಾದಲ್ಲಿ ಎಲ್ಲರಿಗೂ 3ನೇ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಸಂಗ್ರಹಿಸಿದ ಪಿಎಂ ಕೇರ್‌ ಫಂಡ್‌ ಮೂಲಕ . 20 ಸಾವಿರ ಕೋಟಿ ಏನಾಗಿದೆ? ಎಂಬುದು ಯಾರಿಗೂ ಗೊತ್ತಿಲ್ಲ.

ಕಿಂಚಿತ್ತೂ ಬಡವರ ಕಾಳಜಿ ಇಲ್ಲ

ಚುನಾವಣೆ ಬಂದಾಗ ಪೆಟ್ರೋಲ್‌ (Petrol) ಬೆಲೆ ಕಡಿಮೆ ಮಾಡುವ ಕೇಂದ್ರ ಸರ್ಕಾರ, ಕೊರೋನಾ ಸಂಕಷ್ಟದ ಈ ವೇಳೆ ಬೆಲೆಯನ್ನು ಏರಿಕೆ ಮಾಡಿರುವುದು ಖಂಡನೀಯ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಖಂಡಿಸಿದ್ದಾರೆ. 

ವಿದ್ಯಾನಗರ ಹಾಗೂ ಉಣಕಲ್‌ ಬ್ಲಾಕ್‌ ಕಾಂಗ್ರೆಸ್‌ (congress) ಸಮಿತಿ ನಗರದ ಕೇಶ್ವಾಪುರದ ಪೆಟ್ರೋಲ್‌ ಬಂಕ್‌ ಎದುರು ಹಮ್ಮಿಕೊಂಡ 100- ನಾಟೌಟ್‌ ಪ್ರತಿಭಟನೆಯಲ್ಲಿ ಮಾತನಾಡಿದರು.

ಪಶ್ಚಿಮ ಬಂಗಾಳ ಚುನಾವಣೆಯ (Election) ಬಳಿಕ ಕೇಂದ್ರ ಸರ್ಕಾರ ಒಂಬತ್ತು ಬಾರಿ ಪೆಟ್ರೋಲ್‌ ಬೆಲೆಯನ್ನು ಹೆಚ್ಚಿಸಿದೆ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಪೆಟ್ರೋಲ್‌ ಬೆಲೆ 100 ದಾಟಿದೆ. ವಿಶ್ವದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ನಾವು ಹೆಚ್ಚಿನ ಹಣ ತೆರಬೇಕಾಗಿದೆ. ಅಚ್ಚೇ ದಿನ ಬಗ್ಗೆ ಭಾಷಣ ಮಾಡಿದ ಮೋದಿಯವರು ಕಳೆದ ಏಳು ವರ್ಷದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೆ ಇದೆ. ಬಡವರ ಬಗ್ಗೆ ಯಾವುದೆ ಕಾಳಜಿ ಇಲ್ಲದಂತೆ ಕೇಂದ್ರ ವರ್ತಿಸುತ್ತಿದ್ದು, ಅವರ ಬೆನ್ನು ಮುರಿಯಲಾಗುತ್ತಿದೆ. ಇಲ್ಲದಿದ್ದರೆ ಕೊರೋನಾ ಸಂಕ್ರಮಣದ ಈ ವೇಳೆ ದಿನಬಳಕೆ ಸಾಮಗ್ರಿಗಳ ಬೆಲೆ ಏರುತ್ತಿರಲಿಲ್ಲ ಎಂದರು.

click me!