ಕೊಡಗಿನ 11500 ಹೆಕ್ಟೇರ್‌ ಭೂಮಿ ಅರಣ್ಯ ಇಲಾಖೆಯದ್ದೆಂದು ಆದೇಶ : ಹಲವರಿಗೆ ಸಂಕಷ್ಟ

By Kannadaprabha News  |  First Published Oct 24, 2021, 5:57 PM IST
  • ಕೊಡಗು ಜಿಲ್ಲೆಯಲ್ಲಿನ 11500 ಹೆಕ್ಟೇರ್‌ ಸಿ, ಡಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿ ರಾಜ್ಯ ಉಚ್ಚ ನ್ಯಾಯಾಲಯ ಆದೇಶ 
  •  ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಬಹಳಷ್ಟು ಜನರು ಸಮಸ್ಯೆಗೆ 

 ಮಡಿಕೇರಿ (ಅ.24):  ಕೊಡಗು(Kodagu)ಜಿಲ್ಲೆಯಲ್ಲಿನ 11500 ಹೆಕ್ಟೇರ್‌ ಸಿ, ಡಿ ಜಮೀನು (land) ಅರಣ್ಯ ಇಲಾಖೆಗೆ (Forest Department) ಸೇರಿದ್ದಾಗಿ ರಾಜ್ಯ ಉಚ್ಚ ನ್ಯಾಯಾಲಯ (High Court) ಆದೇಶ ನೀಡಿದ್ದು, ಸರ್ಕಾರ ರೈತರ (Farmers) ಪರ ಪೂರಕ ವಾದವನ್ನು ಮಂಡಿಸದೆ ಇದ್ದುದ್ದರಿಂದ ಒತ್ತುವರಿ ಜಮೀನಿನಲ್ಲಿ ಕೃಷಿ (Agriculture) ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಬಹಳಷ್ಟು ಜನರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಎಐಸಿಸಿ (AICC) ಕಾನೂನು ಘಟಕದ ಅಧ್ಯಕ್ಷ ಎ.ಎಸ್‌. ಪೊನ್ನಣ್ಣ (AS ponnanna) ಆರೋಪಿಸಿದ್ದಾರೆ.

ಮಡಿಕೇರಿಯಲ್ಲಿ (Madikeri) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 11500 ಹೆಕ್ಟೇರ್‌ ಸಿ, ಡಿ ಜಮೀನು (CD Land) ಅರಣ್ಯ ಇಲಾಖೆಗೆ ಸೇರಿದರೆ ಇಲ್ಲಿನ ರೈತರು, ಬೆಳೆಗಾರರು ಸಂಕಷ್ಟಕ್ಕೀಡಾಗುತ್ತಾರೆ. ಸಮಸ್ಯೆಯಲ್ಲಿರುವವರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಬಹಳಷ್ಟು ವಿಚಾರಗಳನ್ನು ಕೋರ್ಟ್‌ (Court) ಗಮನಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಮರುಪರಿಶೀಲನೆಗೆ ಕ್ರಮ ವಹಿಸಬೇಕು. ಆ ಜಾಗ ಕಂದಾಯ ಇಲಾಖೆ ಅಧೀನದಲ್ಲಿಯೇ ಉಳಿಯಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಕೊಡಗು ಪ್ರವಾಸೋದ್ಯಮಕ್ಕೆ ದಸರಾ ‘ಆರ್ಥಿಕ ಚೇತರಿಕೆ’

ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಕಾನೂನು ವಿಫಲವಾಗಿದೆ. ಹಲವು ವರ್ಷಗಳಿಂದ ಒತ್ತುವರಿ ಜಮೀನಿನಲ್ಲಿ ರೈತರು ಕೃಷಿ ಮಾಡಿಕೊಂಡು ಬಂದಿದ್ದು, ಅವರೆಲ್ಲ ಸಕ್ರಮ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ ಇಂತಹ ಪ್ರಕರಣಗಳಲ್ಲಿ ಭೂ ಕಬಳಿಕೆ ಕಾಯ್ದೆಯಡಿ ರೈತರನ್ನು ಭೂಗಳ್ಳರೆಂದು ಸರ್ಕಾರ ಪರಿಗಣಿಸಿದ್ದು, ಸುಮಾರು 250 ಬೆಳೆಗಾರರಿಗೆ ಸಮನ್ಸ್ (summons) ಜಾರಿಯಾಗಿದೆ. ಒತ್ತುವರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಸಣ್ಣ ಪುಟ್ಟಬೆಳೆಗಾರರ ಮೇಲೆ ಸರ್ಕಾರದ ಪ್ರಹಾರ ಸರಿಯಲ್ಲ. ವಿರಾಜಪೇಟೆ ಭಾಗದಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತಮ್ಮಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಕಾನೂನು ಬಾಹಿರವಾಗಿ (Illegal) ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹವಾಮಾನ ವೈಪರೀತ್ಯದಿಂದ ಅವಧಿಗೆ ಮುನ್ನ ಹಣ್ಣಾದ ಕಾಫಿ : ರೈತ ಕಂಗಾಲು

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌, ಜಿ.ಪಂ. ಮಾಜಿ ಸದಸ್ಯ ಪ್ರಥ್ಯು, ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರೀಧರನ್‌ ನಾಯರ್‌, ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್‌ ಹಾಜರಿದ್ದರು.

click me!