ಠೇವಣಿ ಇಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯನ್ನ ಬ್ಯಾಂಕಲ್ಲೇ ಕೂಡಿ ಹಾಕೋದಾ?

By Kannadaprabha News  |  First Published Oct 25, 2021, 7:58 AM IST

*  ಚಿತ್ರದುರ್ಗ ಪೊಲೀಸರ ಮಧ್ಯಪ್ರವೇಶ ಬಳಿಕ ಬಿಡುಗಡೆ
*  ಅರ್ಧಗಂಟೆಗೂ ಹೆಚ್ಚು ಕಾಲ ಬ್ಯಾಂಕ್‌ನಲ್ಲಿ ಬಂಧಿಯಾಗಿದ್ದ ವಿಕಾಸ್‌
*  ಚಿತ್ರದುರ್ಗ ನಗರದ ಸಹರಾ ಬ್ಯಾಂಕ್‌ನಲ್ಲಿ ನಡೆದ ಘಟನೆ
 


ಚಿತ್ರದುರ್ಗ(ಅ.25):  ಠೇವಣಿ(Deposit) ಇಟ್ಟಿದ್ದ ಹಣವನ್ನು ವಾಪಸ್‌ ನೀಡುವಂತೆ ಪೀಡಿಸಿದ ಯುವಕನನ್ನು ಬ್ಯಾಂಕ್‌ ಅಧಿಕಾರಿ ಶಾಖೆಯಲ್ಲೇ ಕೂಡಿ ಹಾಕಿದ ವಿಲಕ್ಷಣ ಘಟನೆ ಚಿತ್ರದುರ್ಗದ ಸಹರಾ ಬ್ಯಾಂಕ್‌ನಲ್ಲಿ ಶನಿವಾರ ನಡೆದಿದೆ.

ತಾಯಿಯನ್ನು ಕಳೆದುಕೊಂಡಿದ್ದ ವಿಕಾಸ್‌ ಎಂಬುವರ ವಿದ್ಯಾಭ್ಯಾಸಕ್ಕೆ(Study) ಅವರ ಅಜ್ಜಿ ಸಹರಾ ಬ್ಯಾಂಕ್‌ನಲ್ಲಿ(Sahara Bank) ಎರಡು ದಶಕಗಳ ಹಿಂದೆ 2 ಸಾವಿರ ರು. ಠೇವಣಿ ಇಟ್ಟಿದ್ದರು. ಆ ಹಣ ಮೆಚ್ಯುರಿಟಿ ಆಗಿದ್ದು, ಈಗ 24 ಸಾವಿರ ರು. ಆಗಿದೆ. ಅದನ್ನು ಪಡೆಯಲು ವಿಕಾಸ್‌ ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ(Bank)  ಹೋಗಿದ್ದಾರೆ. ಈ ಸಂದರ್ಭ ಬ್ಯಾಂಕಿನ ವ್ಯವಸ್ಥಾಪಕ(Bank Manager)ತಿರುಪತಿ ಎಂಬುವವರು, ಬ್ಯಾಂಕಿನ ವಹಿವಾಟು ಕುರಿತು ಕೋರ್ಟ್‌ನಲ್ಲಿ(Court)ವಿಚಾರಣೆ ನಡೆಯುತ್ತಿದೆ. ಪ್ರಕರಣ ಇತ್ಯರ್ಥವಾದ ಬಳಿಕ ಹಣ(Money) ನೀಡುತ್ತೇವೆ ಎಂದು ತಿಳಿಸಿದ್ದಾರೆ.

Latest Videos

undefined

ಆದರೂ ವಿಕಾಸ್‌ ಅವರು ಹಣಕ್ಕಾಗಿ ಪಟ್ಟು ಹಿಡಿದಿದ್ದಾರೆ. ಆ ಸಂದರ್ಭ ತಿರುಪತಿ ಅವರು ವಿಕಾಸ್‌ರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ವಿಚಾರ ತಿಳಿದ ವಿಕಾಸ್‌ ಅವರ ಮಾವ ಪ್ರಕಾಶ್‌ ಅವರು ವ್ಯವಸ್ಥಾಪಕರ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು(Police) ಸ್ಥಳಕ್ಕೆ ಧಾವಿಸಿ ವಿಕಾಸ್‌ ಅವರನ್ನು ಬಂಧನದಿಂದ ಮುಕ್ತಿಗೊಳಿಸಿದ್ದಾರೆ.

ಚಿತ್ರದುರ್ಗ: ಫ್ಯಾಶನ್‌ಶೋದಲ್ಲಿ ಮಿಂಚಿದ ಶ್ವಾನಗಳು..!

ಯುವಕ ಹಣ ಬೇಕೆಂದು ಹಟ ಹಿಡಿದ ಹಿನ್ನೆಲೆಯಲ್ಲಿ ಬ್ಯಾಂಕಿನ ಸುರಕ್ಷತೆ ದೃಷ್ಟಿಯಿಂದ ಕೊಠಡಿಗೆ ಬೀಗ ಹಾಕಿಕೊಂಡು ಏಜೆಂಟ್‌ ಕರೆದುಕೊಂಡು ಬರಲು ಹೋಗಿದ್ದೆ ಎಂದು ವ್ಯವಸ್ಥಾಪಕ ತಿರುಪತಿ ಸ್ಪಷ್ಟನೆ ನೀಡಿದ್ದಾರೆ. ಮೆಚ್ಯುರಿಟಿ ಹಣ ಕೇಳಲು ಹೋದ ಯುವಕ ಸಹರಾ ಬ್ಯಾಂಕ್‌ನಲ್ಲಿ ಬಂಧಿಯಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ತಾಯಿ ಕಳೆದು ಕೊಂಡಿದ್ದ ವಿಕಾಸ್‌ನ ವಿದ್ಯಾಭ್ಯಾಸಕ್ಕೆ ಆತನ ಅಜ್ಜಿ ಬಸಮ್ಮ ಸಹರಾ ಬ್ಯಾಂಕ್‌ನಲ್ಲಿ ಎರಡು ಸಾವಿರ ರು. ಠೇವಣಿ ಇಟ್ಟಿದ್ದರು. ಮೆಚ್ಯೂರಿಟಿ ಆದ 24 ಸಾವಿರ ರು. ಅನ್ನು ಬಿಡಿಸಿಕೊಳ್ಳಲು ವಿಕಾಸ್‌ ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ ಹೋಗಿದ್ದಾರೆ.

ಈ ವೇಳೆ ತಿರುಪತಿ ಬ್ಯಾಂಕಿನ ವಹಿವಾಟು ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣ ಇತ್ಯರ್ಥವಾದ ಬಳಿಕ ಹಣ ನೀಡುತ್ತೇವೆ ಎಂದು ತಿಳಿಸಿದೆ. ಆದರೂ ಹಣ ನೀಡಬೇಕೆಂದು ಯುವಕ ಹಠಕ್ಕೆ ಕುಳಿತಾಗ ಏಜೆಂಟ್‌ ಅನ್ನು ಕರೆದುಕೊಂಡು ಬರುತ್ತೇನೆ ಎಂದು ಬ್ಯಾಂಕ್‌ನ ಸುರಕ್ಷತೆ ದೃಷ್ಟಿಯಿಂದ ಬೀಗ ಹಾಕಿಕೊಂಡು ಹೋಗಿದ್ದೆ ಎಂದು ಮ್ಯಾನೇಜರ್‌ ಸ್ಪಷ್ಟನೆ ನೀಡಿದ್ದಾರೆ.

ಈ ವೇಳೆ ವಿಕಾಸ್‌ ಅರ್ಧಗಂಟೆಗೂ ಹೆಚ್ಚು ಕಾಲ ಬ್ಯಾಂಕ್‌ನಲ್ಲಿ ಬಂಧಿಯಾಗಿದ್ದಾನೆ. ವಿಚಾರ ತಿಳಿದ ವಿಕಾಸ್‌ ಮಾವ ಪ್ರಕಾಶ್‌ ಮ್ಯಾನೇಜರ್‌ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಕಾಸ್‌ನನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
 

click me!