Bengaluru: ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?

Published : Sep 13, 2026, 05:41 PM IST
Bittu tabahi aka surendra singh

ಸಾರಾಂಶ

ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿ ಖ್ಯಾತರಾದ ಪರಿಸರ ಕಾರ್ಯಕರ್ತ ಬಿಟ್ಟು ತಬಾಹಿ, ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ವೇಳೆ, ಪ್ಲಾಸ್ಟಿಕ್ ತ್ಯಾಜ್ಯದ ಜೊತೆಗೆ ವೈದ್ಯಕೀಯ ತ್ಯಾಜ್ಯ ಮತ್ತು ಪ್ರಾಣಿಯ ಮೃತದೇಹವನ್ನು ಕಂಡು ಅವರು ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದರು.

ಏಕಾಂಕಿಯಾಗಿ ನದಿಯನ್ನು ಸ್ವಚ್ಛಗೊಳಿಸಿ ವಿಶ್ವಖ್ಯಾತಿ ಪಡೆದುಕೊಂಡಿದ್ದ ಮಧ್ಯಪ್ರದೇಶ ಮೂಲದ ಪರಿಸತ ಕಾರ್ಯಕರ್ತ ಬಿಟ್ಟು ತಬಾಹಿ ಎಂದೇ ಖ್ಯಾತಿ ಪಡೆದಿರುವ ಸುರೇಂದ್ರ ಸಿಂಗ್ ಚೌಧರಿ, ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ಕ್ಲೀನ್ ಅಪ್ ತುರಹಳ್ಳಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ, ಬಿಟ್ಟು ತಬಾಹಿಗೆ ಬಿಗ್ ಶಾಕ್ ಎದುರಾಗಿತ್ತು. ಅಸಲಿಗೆ ಏನಾಯ್ತು ಅಂತ ನೋಡುವುದಾದರೆ..

ಮಧ್ಯಪ್ರದೇಶದ ಬಳಿಕ ಮುಂದಿನ ಸ್ವಚ್ಛತಾ ಅಭಿಯಾನಕ್ಕೆ ಯಾವ ರಾಜ್ಯಕ್ಕೆ ಮೊದಲು ಭೇಟಿ ನೀಡಬೇಕು ಎಂದು ಬಿಟ್ಟು ತಬಾಹಿ ಕೆಲ ದಿನಗಳ ಹಿಂದೆ ತಮ್ಮ ಫಾಲೋವಾರ್ಸ್ಗೆ ಕೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿಟ್ಟು, ಬೆಂಗಳೂರಿಗೆ ಆಗಮಿಸಿ ಬನಶಂಕರಿ 6ನೇ ಹಂತದ ತುರಹಳ್ಳಿ ಅರಣ್ಯ ಹೊರವಲಯದಲ್ಲಿ ನಡೆದ ಅಭಿಯಾನದಲ್ಲಿ ಭಾಗಿಯಾಗಿದ್ದರು.

ತುರಹಳ್ಳಿ ಅರಣ್ಯದಲ್ಲಿ ಬಿಟ್ಟು ತಬಾಹಿಗೆ ಕಾದಿದ್ದೇನು?

ಪ್ರಸಿದ್ಧ ಪರಿಸರವಾಗಿ ಎಎನ್ ಯಲ್ಲಪ್ಪ ರೆಡ್ಡಿ ಮತ್ತು ಇಂಡಿಯಾ ಪ್ಲಾಗ್ ರನ್ ರಾಮಕೃಷ್ಣ ಗಣೇಶನ್ ಅವರೊಂದಿಗೆ ಇಂಡಸ್ ಹರ್ಬ್ಸ್ ಸಹಯೋಗದೊಂದಿಗೆ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನ ನಡೆಸಲಾಗಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೆರವಿನೊಂದಿಗೆ ನಡೆದ ಈ ಅಭಿಯಾನದಲ್ಲಿ ದಿ ಇಂಡಿಯನ್ ಗ್ಯಾರೇಜ್ ಕಂಪನಿ ಇದನ್ನು ಆಯೋಜಿಸಿತ್ತು.

ಅಭಿಯಾನದಲ್ಲಿ ಭಾಗಿಯಾಗಿದ್ದ ಬಿಟ್ಟು ತಬಾಹಿ, ಮೀಸಲು ಅರಣ್ಯದಲ್ಲಿ ಕಂಡ ವಸ್ತುಗಳನ್ನು ಕಂಡು ಶಾಕ್‌ಗೆ ಒಳಗಾಗಿದ್ದರಂತೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಟ್ಟು, ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಿಂಟಾಲ್ ಗಟ್ಟಲೆ ಕೋಳಿ ತ್ಯಾಜ್ಯ, ಮನೆಯ ತ್ಯಾಜ್ಯ, ಡಫಲ್ ಚೀಲದಲ್ಲಿ ತುಂಬಿದ್ದ ನಾಯಿ ಮೃತದೇಹ, ಮೆಡಿಕಲ್ ವೇಸ್ಟ್, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ನಾನು ದಿಗ್ಭ್ರಮೆಗೊಂಡೆ. ನೀವು ಎಲ್ಲಿಯೇ ಹೋದರು ನಮಗೆ ನಾಗರಿಕ ಪ್ರಜ್ಞೆ ಇಲ್ಲ. ಸಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಎಂಬ ಕನಿಷ್ಠ ಆದ್ಯತೆ ಇಲ್ಲ. ಅಭಿಯಾನದಲ್ಲಿ ಮೊದಲು ಭಾಗಿಯಾಗಿದ್ದ ಸಂದರ್ಭದಲ್ಲಿ ಕೇವಲ ಪ್ಲಾಸ್ಟಿಕ್ ತ್ಯಾಜ್ಯ ಇರಬಹುದು ಎಂದುಕೊಂಡಿದ್ದೆ, ಆದರೆ ಆ ಪ್ಲಾಸ್ಟಿಕ್ ರಾಶಿಗಳ ನಡುವೆ ಮೃತದೇಹ ಹಾಗೂ ವೈದ್ಯಕೀಯ ತ್ಯಾಜ್ಯಗಳು ಕಂಡು ಶಾಕ್ ಎಂದು ಹೇಳಿದ್ದಾರೆ.

ಇನ್ನು, ಕ್ಲೀನ್ ಅಪ್ ತುರಹಳ್ಳಿ ಅಭಿಯಾನದ ಭಾಗವಾಗಿ ಬೆಳಗ್ಗೆ 08 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು ಎರಡು ಟನ್ಗೂ ಹೆಚ್ಚು ತ್ಯಾಜ್ಯ ತೆರವು ಮಾಡಲಾಗಿದೆ. ಸಂಜೆ ನಾಲ್ಕು ಗಂಟೆ ವರೆಗೂ ಈ ಕಾರ್ಯ ನಡೆಸಲಾಗಿದೆ. 21 ವರ್ಷದ ವಿದ್ಯಾರ್ಥಿ ಬಿಟ್ಟು, ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯೋರಾದಲ್ಲಿ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಏಕಾಂಗಿಯಾಗಿ ಮಾಡಿದ್ದರು. ಇದರ ಪ್ರಯತ್ನ ಇಡೀ ವಿಶ್ವದ ಗಮನ ಸೆಳೆಯಿತು. ಇದಕ್ಕಾಗಿ ತಮ್ಮ ಸ್ವತಃ ದುಡಿಕೆಯ 30 ಸಾವಿರ ರೂಪಾಯಿ ಹಣವನ್ನು ಖರ್ಚು ಮಾಡಿದ್ದರು. ನದಿಯಲ್ಲಿ ಈಜಲು ಕೂಡ ಬಾರದ ಬಿಟ್ಟು, ಸುಮಾರು ಮೂರು ಪ್ರಮುಖ ಘಾಟ್ ಗಳನ್ನು ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗಿದ್ದರು.

ಕ್ಲೀನ್ ಅಪ್ ತುರಹಳ್ಳಿ ಅಭಿಯಾನದ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಿದ ಬಿಟ್ಟು, ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿಯಾಗಿದೆ. ಇಲ್ಲಿನ ಹಸಿರು ಸ್ಥಳಗಳು ಕಸ ಮುಕ್ತವಾಗಿರುತ್ತದೆ ಎಂಬ ಭಾವನೆ ನನಗೆ ಇತ್ತು. ಆದರೆ ಇಲ್ಲಿ ರಸ್ತೆ ಉದ್ದಕ್ಕೂ ತ್ಯಾಜ್ಯವನ್ನು ಸುರಿಯಲಾಗಿದೆ. ನಮ್ಮ ಕೈಗಳಿಂದ ಅಷ್ಟು ತ್ಯಾಜ್ಯ ತೆರವು ಮಾಡಲು ಆಗಲಿಲ್ಲ. ಮರಗಳು ಮತ್ತು ಕಾಡುಗಳಿಗೆ ಮಾತ್ರ ವೈ ಪೈ ಸಾಮರ್ಥ್ಯ ಹೋಂದಿದ್ದರೆ, ಜನರು ಆಗ ಪರಿಸರವನ್ನು ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲವೇನೋ ಎಂದು ಬೇಸರ ಹೊರ ಹಾಕಿದ್ದಾರೆ.

PREV
Read more Articles on
click me!

Recommended Stories

ಈ ಜಿಲ್ಲೆಯ ಗಣೇಶ ವಿಗ್ರಹಗಳಿಗೆ ಆಂಧ್ರ, ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ: ಇಲ್ಲಿದೆ ಕಾರಣ!
Mysuru: ಯಾವ ಬೀದಿಯೂ ನಿಷೇಧಿತವಲ್ಲ, ಯಾವನ್ ಏನ್ ಮಾಡ್ಕೊಳ್ತಾನೋ ನೋಡ್ತೀವಿ; ಖಾಕಿ ವರ್ಸಸ್ ಖಾದಿ ಸಮರಕ್ಕೆ ಸಿ.ಟಿ. ರವಿ ಎಂಟ್ರಿ!