Bison Attacks: ಕಾಫಿನಾಡಲ್ಲಿ ಕಾಡುಕೋಣ ಹಾವಳಿ: 15 ದಿನದಲ್ಲಿ ಮೂರನೇ ದಾಳಿ!

By Ravi JanekalFirst Published Jan 6, 2023, 12:25 PM IST
Highlights

ಕಾಫಿನಾಡ(Coffe nadu)ಲ್ಲಿ ಇತ್ತೀಚೆಗೆ ಕಾಡಾನೆ(Wild elephants)ಗಳ ಹಾವಳಿ ಹೆಚ್ಚಿತ್ತು. ಈಗ ಕಾಡಾನೆ ಜೊತೆ ಕಾಡುಕೋಣಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ, ಸ್ಥಳೀಯರು ಅಧಿಕಾರಿಗಳೂ ಕಾಡುಕೋಣಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ರೀತಿಯ ಪ್ರಕರಣ ಇನ್ನೊಂದು ನಡೆದರೆ ಅರಣ್ಯ ಇಲಾಖೆ(forest depertment)ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರು (ಜ.6):  ತೋಟದಲ್ಲಿ ಕೆಲಸ ಮುಗಿಸಿ ಸಂಜೆ ಮನೆಯತ್ತ ಹೊರಟಿದ್ದ ಯುವಕನ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ನಡೆದಿದೆ.  ಗಾಯಾಳು ಮನೋಜ್‍ನ(Manoj)ನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ(Chikkamagaluru hospital )ದಾಖಲಿಸಲಾಗಿದೆ. ಯುವಕ ಮನೋಜ್ ಪಕ್ಕೆಗೆ ಕಾಡುಕೋಣ(Bison) ಬಲವಾಗಿ ತಿವಿದ ಪರಿಣಾಮ ಪಕ್ಕೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

15 ದಿನದಲ್ಲಿ ಮೂರನೇ ದಾಳಿ!

ಕಳೆದ 15 ದಿನದಲ್ಲಿ ಜಿಲ್ಲೆಯಲ್ಲಿ ಇದು 3ನೇ ಕಾಡುಕೋಣ ದಾಳಿ(Bison attack) ಪ್ರಕರಣ. ಇತ್ತೀಚೆಗಷ್ಟೆ ಬೆಟ್ಟದಮರಡಿ ಗ್ರಾಮ(Bettadamaradi village)ದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ದಿನೇಶ್ ಎಂಬ ಪೇದೆ ಮೇಲೂ ಕಾಡುಕೋಣ ದಾಳಿ ಮಾಡಿತ್ತು. ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. 

ಚಿಕ್ಕಮಗಳೂರು: ಮಲೆನಾಡಲ್ಲಿ ಮನೆ ಸಮೀಪವೇ ಬರುತ್ತಿರುವ ಕಾಡಾನೆಗಳು, ಆತಂಕದಲ್ಲಿ ಜನತೆ..!

ಇಂದು ಮತ್ತೊಂದು ಕಾಡುಕೋಣ ದಾಳಿಯಾಗಿ ಆತ ಕೂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿ ಆಸ್ಪತ್ರೆ ಸೇರಿದ್ದಾನೆ. ಕಳೆದ ಎಂಟತ್ತು ದಿನಗಳ ಹಿಂದಷ್ಟೆ ಕಳಸ ತಾಲೂಕಿನ ತೋಟದೂರು(Totaduru) ಸಮೀಪದ ಕುಳಿಹಿತ್ಲು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬುವರ ಮೇಲೂ ಕಾಡುಕೋಣ ದಾಳಿ ಮಾಡಿತ್ತು. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

 ಕಾಫಿನಾಡ(Coffe nadu)ಲ್ಲಿ ಇತ್ತೀಚೆಗೆ ಕಾಡಾನೆ(Wild elephants)ಗಳ ಹಾವಳಿ ಹೆಚ್ಚಿತ್ತು. ಈಗ ಕಾಡಾನೆ ಜೊತೆ ಕಾಡುಕೋಣಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ, ಸ್ಥಳೀಯರು ಅಧಿಕಾರಿಗಳೂ ಕಾಡುಕೋಣಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ರೀತಿಯ ಪ್ರಕರಣ ಇನ್ನೊಂದು ನಡೆದರೆ ಅರಣ್ಯ ಇಲಾಖೆ(forest depertment)ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. 

 ಅರಣ್ಯ ಅಧಿಕಾರಿಗಳ ಹರಸಾಹಸ: ಕಾಡು ಸೇರಿದ ಕಾಡಾನೆ

click me!