ಎಸ್‌ಸಿ, ಎಸ್‌ಟಿ ಸಮುದಾಯ ಒಡೆಯಲು ಬಿಜೆಪಿ ಕುತಂತ್ರ: ಎಚ್‌.ಬಿ.ಮಂಜಪ್ಪ

Published : Jan 06, 2023, 11:35 AM IST
ಎಸ್‌ಸಿ, ಎಸ್‌ಟಿ ಸಮುದಾಯ ಒಡೆಯಲು ಬಿಜೆಪಿ ಕುತಂತ್ರ: ಎಚ್‌.ಬಿ.ಮಂಜಪ್ಪ

ಸಾರಾಂಶ

ಪರಿಶಿಷ್ಟಜಾತಿ-ಪರಿಶಿಷ್ಟಪಂಗಡಗಳ ಜನಾಂಗಗಳ ಒಗ್ಗಟ್ಟನ್ನು ಒಡೆಯಲು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದವರು ಹವಣಿಸುತ್ತಿದ್ದು, ಬಿಜೆಪಿ ಸರ್ಕಾರಗಳ ಒಡೆದಾಳುವ ನೀತಿಯನ್ನು ತಿಳಿಸುವ ಜನವರಿ 8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಐಕ್ಯತಾ ಸಮಾವೇಶ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಹೇಳಿದರು.

ಚನ್ನಗಿರಿ (ಜ.6) : ಪರಿಶಿಷ್ಟಜಾತಿ-ಪರಿಶಿಷ್ಟಪಂಗಡಗಳ ಜನಾಂಗಗಳ ಒಗ್ಗಟ್ಟನ್ನು ಒಡೆಯಲು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದವರು ಹವಣಿಸುತ್ತಿದ್ದು, ಬಿಜೆಪಿ ಸರ್ಕಾರಗಳ ಒಡೆದಾಳುವ ನೀತಿಯನ್ನು ತಿಳಿಸುವ ಜನವರಿ 8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಐಕ್ಯತಾ ಸಮಾವೇಶ ಮಾಡುತ್ತಿದ್ದು, ಈ ಸಮಾವೇಶಕ್ಕೆ ಚನ್ನಗಿರಿ ತಾಲೂಕಿನಿಂದ 10ಸಾವಿರ ಜನ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಹೇಳಿದರು.

ಅವರು ಗುರುವಾರ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಜನಾಂಗಗಳಿಗೆ ಇರುವ ಮೀಸಲಾತಿಯನ್ನು ತೆಗೆದು ಹಾಕುವ ಪ್ರಯತ್ನ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ನಡೆಸಿದ್ದು, ಇಂತಹ ಕುತಂತ್ರ ರಾಜಕಾರಣ ಮಾಡುತ್ತಿರುವ ಬಿಜೆಪಿ ಬಗ್ಗೆ ಜಾಗ್ರತರಾಗಿರಬೇಕು ಎಂದು ಹೇಳಿದರು.

BJP Govt: ಬಡವರ ಜೀವನಮಟ್ಟಸುಧಾರಣೆಗೆ ಬಿಜೆಪಿ ಸರ್ಕಾರ ಬದ್ಧ: ಬೈರತಿ ಬಸವರಾಜ

ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ಬಡ ಜನರಿಗೆ, ಸಾಮಾಜಿಕ ನ್ಯಾಯ ಕೊಡುವ ಸರ್ಕಾರ ಎಂದರೆ ಅದು ಕಾಂಗ್ರೆಸ್‌ ಪಕ್ಷ ಮಾತ್ರ ಎಂದು ಹೇಳಿದರು. ಬಿಜೆಪಿ ಪಕ್ಷದ ಆಡಳಿತದಿಂದ ಜಿಲ್ಲೆಯ ಜನ ಬೇಸತ್ತಿದ್ದಾರೆ. ದಾವಣಗೆರೆ ಜಿಲ್ಲೆಯ 7ವಿಧಾನಸಭಾ ಕ್ಷೇತ್ರಗಳಲ್ಲಿಯೋ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳೇ ಜಯಗಳಿಸುವರು ಎಂದು ಭವಿಷ್ಯ ನುಡಿದರು.

ರಸಗೊಬ್ಬರದ ಮೇಲಿನ ಸಬ್ಸಿಡಿ ರದ್ದು ಮಾಡಿರುವ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತೀವೆ ಎಂದು ಹೇಳುತ್ತಾ ಅದರಲ್ಲಿಯೂ ಕಡಿತ ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್‌ಶೀಪ್‌ ರದ್ದು ಮಾಡಿ ಬಡವರನ್ನು ಹಿಂಸಿಸುತ್ತಿದೆ ಎಂದು ಸರ್ಕಾರದ ಮೇಲೆ ಕಿಡಿಕಾರಿದರು.

ಬಿಜೆಪಿ ದಲಿತರನ್ನು ಹೇಗೆ ತುಳಿಯುತ್ತಿದೆ ಎಂದು ತಿಳಿಸಲು ಎಸ್ಸಿ ಎಸ್ಟಿ ಸಮಾವೇಶ: ಡಾ.ಜಿ.ಪರಮೇಶ್ವರ

ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಚ್‌.ಶ್ರೀನಿವಾಸ್‌, ಕೆಪಿಸಿಸಿ ಸದಸ್ಯ ವಡ್ನಾಳ್‌ ಜಗದೀಶ್‌, ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ನಾಗರಾಜ್‌, ಅಮಾನುಲ್ಲಾ, ಮುಖಂಡರಾದ ಹೊದಿಗೆರೆ ರಮೇಶ್‌, ನಿವೃತ್ತ ವಲಯ ಅರಣ್ಯಾಧಿಕಾರಿ ವಿರೇಶ್‌ ನಾಯ್‌್ಕ, ದೇವರಾಜ್‌, ಬಸವಲಿಂಗಪ್ಪ, ಚಂದ್ರಾನಾಯ್‌್ಕ, ಜಬೀಉಲ್ಲಾ, ಅಶೋಕ್‌ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

PREV
Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!