Kodagu: ಬಾಕಿ ವಿದ್ಯುತ್ ಬಿಲ್ ಕಟ್ಟದೆ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಕುತ್ತು!

By Govindaraj S  |  First Published Feb 9, 2023, 9:45 PM IST

ಮದುವೆಯಾಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆಯಾಗಲ್ಲ ಎನ್ನುವ ಮಾತಿದೆ. ಆದೇ ರೀತಿ ಇಲ್ಲಿ ಗ್ರಾಮ ಪಂಚಾಯಿತಿ ಒಂದರ ನೂತನ ಕಟ್ಟಡ ಸಿದ್ದವಾಗಿದ್ದರೂ ಹಳೇ ಕಟ್ಟಡದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ನೂತನ ಕಟ್ಟಡ ಉದ್ಘಾಟನೆಯಾಗುತ್ತಿಲ್ಲ. 


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಫೆ.09): ಮದುವೆಯಾಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆಯಾಗಲ್ಲ ಎನ್ನುವ ಮಾತಿದೆ. ಆದೇ ರೀತಿ ಇಲ್ಲಿ ಗ್ರಾಮ ಪಂಚಾಯಿತಿ ಒಂದರ ನೂತನ ಕಟ್ಟಡ ಸಿದ್ದವಾಗಿದ್ದರೂ ಹಳೇ ಕಟ್ಟಡದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ನೂತನ ಕಟ್ಟಡ ಉದ್ಘಾಟನೆಯಾಗುತ್ತಿಲ್ಲ. ಹಳೇ ಕಟ್ಟಡದಲ್ಲೂ ವಿದ್ಯುತ್ ಇಲ್ಲದೆ ಜನರೇಟರ್ ಬಳಸಿ ಪಂಚಾಯಿತಿ ಕಾರ್ಯಾಲಯ ಕೆಲಸ ಮಾಡುತ್ತಿದೆ. ಈ ಕುರಿತ ಸ್ಟೋರಿ ಇಲ್ಲಿದೆ. ಗ್ರಾಮಗಳ ಅಭಿವೃದ್ಧಿಗಾಗಿ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿ ವಿವಿಧ ತೆರಿಗೆಗಳನ್ನು ಸಂಗ್ರಹಿಸುತ್ತದೆ. 

Tap to resize

Latest Videos

undefined

ಆದರೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವಿವಿಧ ಮೀನು ಮಾಂಸದ ಅಂಗಡಿಗಳಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಸಂಗ್ರಹಿಸದೆ ತಾನೂ ಕೂಡ ಕೆಇಬಿಗೆ ಕಟ್ಟಬೇಕಾಗಿರುವ ಲಕ್ಷಾಂತರ ರೂಪಾಯಿ ವಿದ್ಯುತ್ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಪಂಚಾಯಿತಿ ಕಚೇರಿಗೆ ವಿದ್ಯುತ್ ಸಂಪರ್ಕವಿಲ್ಲದೆ ಜನರೇಟರ್ ಬಳಸಿ ಪಂಚಾಯಿತಿ ಕೆಲಸ ನಿಭಾಯಿಸುತ್ತಿದೆ. ಪಂಚಾಯಿತಿ ಸದ್ಯ ಬರೋಬ್ಬರಿ 30 ಲಕ್ಷ ರೂಪಾಯಿ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಕುರಿತು ಪ್ರಶ್ನಿಸಿದರೆ ಅದು ಹಿಂದಿನ ಆಡಳಿತ ಮಂಡಳಿಯಿಂದಲೇ 35 ಲಕ್ಷ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಳ್ಳಲಾಗಿತ್ತು. 

ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ!

ನಮ್ಮ ಆಡಳಿತ ಮಂಡಳಿ ಬಂದ ಮೇಲೆ ಅದನ್ನು ತೀರಿಸಲಾಗಿದೆ. ಆದರೆ ಪ್ರತೀ ವರ್ಷ 30 ಲಕ್ಷ ವಿದ್ಯುತ್ ಬಿಲ್ಲು ಬರುತ್ತಿದ್ದು ಅನುದಾನವಿಲ್ಲದೆ ಇರುವುದರಿಂದ ಮತ್ತೆ ಬಾಕಿ ಇದೆ. ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಬಳಿಕ ಬಂದ ಆದಾಯದಿಂದ ವಿದ್ಯುತ್ ಬಿಲ್ಲು ಕಟ್ಟಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹೇಳುತ್ತಿದ್ದಾರೆ. ಆದರೆ 47 ಲಕ್ಷ ವೆಚ್ಚದಲ್ಲಿ ಪಂಚಾಯಿತಿಯ ನೂತನ ಕಟ್ಟಡ ನಿರ್ಮಿಸಿದ್ದರು ವಿದ್ಯುತ್ ಬಿಲ್ಲು ಬಾಕಿ ಇರುವುದರಿಂದ ನೂತನ ಕಟ್ಟಡಕ್ಕೂ ವಿದ್ಯುತ್ ಸಂಪರ್ಕವಿಲ್ಲದೆ ಕಟ್ಟಡ ಕಾಮಗಾರಿ ಮುಗಿದಿದ್ದರೂ ನೂತನ ಕಟ್ಟಡಕ್ಕೆ ಕಾರ್ಯಾಲಯ ಸ್ಥಳಾಂತರಗೊಂಡಿಲ್ಲ. 

ರಾಷ್ಟ್ರೀಯ ಹೆದ್ದಾರಿ 275ಕ್ಕೆ ಹೊಂದಿಕೊಂಡಂತೆ ಸುಂಟಿಕೊಪ್ಪ ಗ್ರಾಮವಿದ್ದು, ಪಂಚಾಯಿತಿಗೆ ಮೀನು, ಮಾಂಸ ಅಂಗಡಿಗಳ ಟೆಂಡರ್‍ನಿಂದ ವರ್ಷವೊಂದಕ್ಕೆ ಕನಿಷ್ಠ 40 ಲಕ್ಷ ರೂಪಾಯಿ ಆದಾಯ ಬರುತ್ತದೆ. ಆದರೆ ಕೆಲವು ಮಳಿಗೆಗಳು ಪಂಚಾಯಿತಿಗೆ 30 ಲಕ್ಷದವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇದನ್ನು ವಸೂಲಿ ಮಾಡುವಂತೆ ಹೈಕೋರ್ಟ್ ಕೂಡ ಪಂಚಾಯಿತಿಗೆ ಸೂಚನೆ ನೀಡಿದೆ. ಆದರೂ ತೆರಿಗೆಯನ್ನು ಸಂಗ್ರಹಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಇದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುವಂತೆ ಮಾಡಿದೆ. ಜೊತೆಗೆ ಪಂಚಾಯಿತಿಯ ನೂತನ ಕಟ್ಟಡ ನಿರ್ಮಿಸಿರುವುದರಲ್ಲಿ ಸಾಕಷ್ಟು ಕಳಪೆ ಮಾಡಿರುವುದು ಕಣ್ಣಿಗೆ ರಾಚುತ್ತದೆ. 

ಪೈಂಯಿಟಿಂಗ್ ಮಾಡಿದ ಒಂದೇ ತಿಂಗಳಲ್ಲಿ ಪೈಂಯಿಟಿಂಗ್ ಉದುರಿ ಹೋಗುತ್ತಿದೆ. ಅಷ್ಟೇ ಅಲ್ಲ, ಪಂಚಾಯಿತಿ ಕಟ್ಟಡದ ಬಾಗಿಲುಗಳಿಗೆ ಹಳೆ ಕಟ್ಟಡಗಳ ಬಾಗಿಲುಗಳನ್ನು ಹಾಕಿ ಅವುಗಳಿಗೆ ಪೈಂಯಿಟಿಂಗ್ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್ ಹೇಳಿದ್ದಾರೆ. ಕಟ್ಟಡ ಕಾಮಗಾರಿ ಕಳಪೆಯಾಗಿದೆಯೋ ಇಲ್ಲವೋ ಎಂಬುದನ್ನು ಸಂಬಂಧಿಸಿದ ಇಂಜಿನಿಯರ್‍ಗಳು ಮಾತ್ರವೇ ದೃಢಪಡಿಸಬೇಕು. ಇನ್ನು ವಿದ್ಯುತ್ ಬಿಲ್ಲು ಬಾಕಿ ಇರುವುದರಿಂದ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದರ ಹಿಂದೆ ರಾಜಕೀಯ ಕೈವಾಡವಿದೆ. ಜಿಲ್ಲೆಯ ಬಹುತೇಕ ಪಂಚಾಯಿತಿಗಳು ಇದಕ್ಕಿಂತ ಹೆಚ್ಚು ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿವೆ. 

ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ

ಆದರೂ ಅವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ನಮ್ಮ ಪಂಚಾಯಿತಿಯ ವಿದ್ಯುತ್ ಕಡಿತಗೊಳಿಸಿರುವುದರ ಹಿಂದೆ ತಾರತಮ್ಯ ಮಾಡುತ್ತಿರುವುದು ಸ್ಪಷ್ಟ ಎಂದು ಪಂಚಾಯಿತಿಯ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ಲುಕಟ್ಟದೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದರೆ, ಪಂಚಾಯಿತಿಗೆ ಬರಬೇಕಾಗಿರುವ 30 ಲಕ್ಷಕ್ಕೂ ಹೆಚ್ಚು ಮಳಿಗೆಗಳ ತೆರಿಗೆಯನ್ನು ಸಂಗ್ರಹಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಮೀನಾಮೀಷ ಎಣಿಸುತ್ತಿದೆ. ವಿದ್ಯುತ್ ಬಿಲ್ಲುಕಟ್ಟದೆ ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕವಿಲ್ಲದೆ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆಯಾಗುತ್ತಿಲ್ಲ ಎನ್ನುವುದು ವಿಪರ್ಯಾಸ.

click me!