Koppal: ವಿಚಿತ್ರ ಖಯಾಲಿ, ಬಳ್ಳಾರಿ ಮೂಲದ ಬೈಕ್ ಕಳ್ಳ ಕೊಪ್ಪಳದಲ್ಲಿ ಅರೆಸ್ಟ್! ಕದ್ದಿದ್ದೆಷ್ಟು ಗೊತ್ತಾ?

Published : Sep 04, 2026, 02:45 PM IST
koppal bike theft case

ಸಾರಾಂಶ

ಬೈಕ್ ರೈಡ್ ಮಾಡುವ ಖಯಾಲಿಗಾಗಿ ಬರೋಬ್ಬರಿ 16 ಬೈಕ್‌ಗಳನ್ನು ಕದ್ದಿದ್ದ ಬಳ್ಳಾರಿ ಮೂಲದ ಮೊಹಮ್ಮದ್ ಇರ್ಫಾನ್ ಎಂಬಾತನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲಾ ಆಸ್ಪತ್ರೆ ಬಳಿ ಬೈಕ್ ಕದಿಯುವಾಗ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೊಪ್ಪಳ (ಸೆ.4): ರೈಡ್ ಮಾಡುವ ಖಯಾಲಿಗೆ ಬರೋಬ್ಬರಿ 16 ಬೈಕ್‌ಗಳನ್ನ ಕದ್ದಿದ್ದ ಬಳ್ಳಾರಿ ಮೂಲದ ಖತರ್ನಾಕ್ ಕಳ್ಳನನ್ನ ಕೊಪ್ಪಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಮೂಲತಃ ಬಳ್ಳಾರಿಯವನಾಗಿದ್ದ ಸುತ್ತಮುತ್ತಲಿನ ಪಟ್ಟಣಗಳಲ್ಲಿ ವಿವಿಧ ಬೈಕ್‌ಗಳನ್ನ ರೈಡ್ ಮಾಡುವ ಖಯಾಲಿಗೆ ಕದಿಯುತ್ತಿದ್ದ. ಕೆಲ ದಿನಗಳು ಬಳಸಿ ಕೊನೆಗೆ ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ ಕದೀಮ.

ಸಿಕ್ಕಿಬಿದ್ದಿದ್ದು ಹೇಗೆ?

ಮೊಹಮ್ಮದ್ ಇರ್ಫಾನ್ ಬೈಕ್ ಕದಿಯುವಲ್ಲಿ ಎತ್ತಿದ ಕೈ. ಯಾರಿಗೂ ಅನುಮಾನ ಬಾರದಂತೆ,ಪೊಲೀಸರ ಕಣ್ಣಿಗೂ ಬೀಳದಂತೆ ಬೈಕ್ ಕದ್ದು ರೈಡ್ ಖಯಾಲಿ ತಿರಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಅದೇ ರೀತಿ ಒಟ್ಟು ಹದಿನಾರಕ್ಕೂ ಹೆಚ್ಚು ಬೈಕ್‌ ಕದ್ದಿದ್ದ ಇರ್ಫಾನ್. ಇತ್ತೀಚೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಬೈಕ್ ಒಂದನ್ನು ಕಳ್ಳತನ ಮಾಡಿದ್ದ. ಈ ಬಾರಿ ಕದೀಮ ಇರ್ಫಾನ್ ಗ್ರಹಚಾರ ಕೆಟ್ಟಿತ್ತೇನೋ, ಬೈಕ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ್ತ್ತು.

ಕೊಪ್ಪಳ ಜಿಲ್ಲಾಸ್ಪತ್ರೆ ಮುಂಭಾಗದ ಬೈಕ್ ಕಳ್ಳತನ

ಇತ್ತ ಬೈಕ್‌ ಕಳ್ಳತನ ಪ್ರಕರಣ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಕೊಪ್ಪಳ ಪೊಲೀಸರು ಮೊದಲಿಗೆ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿನ ಸಿಸಿಟಿವಿಗನ್ನ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕದೀಮನ ಕೈಚಳಕದ ದೃಶ್ಯ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಗನ್ನಾಧರಿಸಿ ಮೊಹಮ್ಮದ್ ಇರ್ಫಾನ್‌ ಪತ್ತೆ ಹಚ್ಚಿ ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆ ವೇಳೆ ಬೈಕ್ ರೈಡ್ ಚಟಕ್ಕಾಗಿ ಕದಿಯುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಇರ್ಫಾನ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.

ತನಿಖೆಯಲ್ಲಿ ರೈಡ್ ಗಾಗಿ ಬೈಕ್ ಕಳ್ಳತನ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಮೊಹಮ್ಮದ್ ಇರ್ಫಾನ್

PREV
Read more Articles on
click me!

Recommended Stories

ಬೆಂಗಳೂರು ಮಹಿಳೆಯರಿಗೆ ಸಿನಿಮಾ ಚಾನ್ಸ್ ಆಫರ್; ಹೋಟೆಲ್‌ಗೆ ಕರೆಸಿ ಮಾಡಿದ್ದೇನು ಈ ಕಿರಾತಕರು!
ರಾಜಕೀಯ ಗಡಿ ದಾಟಿ ಅದಾನಿ ಗ್ರೂಪ್ ವಿಸ್ತರಣೆ: ಬಿಜೆಪಿಯೇತರ ರಾಜ್ಯಗಳಲ್ಲೂ ₹5 ಲಕ್ಷ ಕೋಟಿಗೂ ಅಧಿಕ ಹೂಡಿಕೆ!