
ಶ್ರೀರಂಗಪಟ್ಟಣ (ಡಿ.02): ಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮದ (Chandravana Ashram) ಬಳಿಯ ಬಂಗಾರ ದೊಡ್ಡಿ ನಾಲೆಯಲ್ಲಿ ಭಾರೀ ಗಾತ್ರದ ಮೊಸಳೆ (Crocodile) ಕಾಣಿಸಿಕೊಂಡಿದೆ. ಇದರಿಂದ ಸುತ್ತ ಮುತ್ತಲ ರೈತರು ತೀವ್ರ ಆತಂಕ ಗೊಂಡಿದ್ದರು. ಬಂಗಾರ ದೊಡ್ಡಿಯ ಪಕ್ಕದಲ್ಲೇ ಇರುವ ಪಕ್ಷಿ ಧಾಮದಿಂದ ಈ ಮೊಸಳೆ ಬಂದಿರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ವಿರಿಜಾ ನಾಲೆ ಬಳಿ ಅರಣ್ಯ ಅಧಿಕಾರಿಗಳು ಬೃಹತ್ ಗಾತ್ರದ ಮೊಸಳೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಿದ್ದರು.
ಆದರೆ ಇದೀಗ ಮತ್ತೆ ಬಂಗಾರ ದೊಡ್ಡಿ ನಾಲೆಯಲ್ಲಿ ಮೊಸಳೆ ಕಾಣಿಸಿ ಕೊಂಡಿರುವುದರಿಂದ ಈಭಾಗದ ರೈತರನ್ನು ಆತಂಕಗೊಳ್ಳುವಂತೆ ಮಾಡಿದೆ. ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಆರ್‌ಎಫ್‌ಒ (RFO) ಸುನೀತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೊಸಳೆ ಸೆರೆ ಹಿಡಿಯಲು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ತೋಟದಲ್ಲೇ ಪತ್ತೆಯಾದ ಬೃಹತ್ ಗಾತ್ರದ ಮೊಸಳೆ :
ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಿವೃತ್ತ ಯೋಧ (Soldier) ಸದಾಶಿವ ಎಂಬವರ ರಬ್ಬರ್ ತೋಟದಲ್ಲಿ ಸುಮಾರು 8 ಅಡಿ ಉದ್ದದ ಐದರಿಂದ ಆರು ವರ್ಷದ ಪ್ರಾಯದ ಮೊಸಳೆ (crocodile) ಕಂಡು ಬಂದಿತ್ತು, ಅರಣ್ಯ ಇಲಾಖೆ (Forest Department) ಮೊಸಳೆಯನ್ನು ರಕ್ಷಿಸಿತ್ತು
ಇಲ್ಲಿನ ಸಂತೋಷ್ ಎಂಬವರು ರಬ್ಬರ್ ತೋಟದಲ್ಲಿ ಕೆಲಸ ನಿರ್ವಹಿಸುವ ವೇಳೆ ಮೊಸಳೆ ಪತ್ತೆಯಾಗಿದೆ. ಈ ವಿಚಾರವನ್ನು ಕಡಿರು ದ್ಯಾವರ ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಅಶೋಕ್ ಕುಮಾರ್ ಅವರಿಗೆ ತಿಳಿಸಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿಗಳು ತಕ್ಷಣ ಆಗಮಿಸಿ ಸ್ಥಳಿಯರ ಸಹಕಾರದಲ್ಲಿ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ರಕ್ಷಣಾ ಕಾರ್ಯಾಚರಣೆ: ಅರಣ್ಯ ಇಲಾಖೆಯ ಬೆಳ್ತಂಗಡಿ (Belthangadi) ಕಚೇರಿಯಿಂದ ಬಲೆ, ಗೂಡು, ಇತರ ಅಗತ್ಯ ಸಲಕರಣೆ ಹಾಗೂ ಮೊಸಳೆಗೆ ಬೇಕಾದ ಆಹಾರವನ್ನು ತರಿಸಿ, ವೈ ಆಕಾರದ ಮರದ ಬಡಿಗೆಗಳಿಂದ ಮೊಸಳೆಯ ಬಾಯಿ, ಬಾಲ ಹಾಗೂ ಶರೀರದ ಭಾಗವನ್ನು ಒತ್ತಿ ಹಿಡಿದು, ಉಸಿರಾಟಕ್ಕೆ ತೊಂದರೆಯಾಗದಂತೆ ಬಾಯಿಯನ್ನು ಬಿಗಿದು ಮೊಸಳೆಯನ್ನು ಬಲೆಯಲ್ಲಿ ಬಂಧಿಸಲಾಗಿತು. ಪಶುವೈದ್ಯಾಧಿಕಾರಿಗಳಿಂದ ಮೊಸಳೆಯ ಆರೋಗ್ಯ ತಪಾಸಣೆ ನಡೆಸಿ, ರಕ್ಷಿತಾರಣ್ಯದ ಜನವಸತಿಯಿಲ್ಲದ ನೀರು ಹಾಗೂ ದಟ್ಟಅರಣ್ಯ (Forest) ಇರುವ ಭಾಗದಲ್ಲಿ ಬಿಡಲಾಯಿತು. ಜಿಲ್ಲಾ ಅರಣ್ಯಾಧಿಕಾರಿ ಡಾ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದೊಂದಿಗೆ, ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನ ನೀಡಿದ್ರು.
ತಾಲೂಕಿನ ನಾನಾ ಶಾಖೆಗಳ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಅಂಕಲಗಿ, ಹರಿಪ್ರಸಾದ್, ಭವಾನಿ ಶಂಕರ ಬಿ.ಜಿ., ಅರಣ್ಯ ರಕ್ಷಕರಾದ ಪಾಂಡುರಂಗ ರಾಘವೇಂದ್ರ ಪ್ರಸಾದ್, ಗಫರ್, ವಾಸು ಇವರ ತಂಡ ಸ್ಥಳೀಯರಾದ ರಮೇಶ,ಬಾಬು, ವಿನಾಯಕ, ನಾರಾಯಣ, ಗುರುರಾಜ, ಜಗದೀಶ್ ಮುಂಡಾಜೆ ಸೇರಿದಂತೆ ಅನೇಕರ ಸಹಕಾರದಲ್ಲಿ ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿತ್ತು.
ಮೊಸಳೆ ಹೊಟ್ಟೆಯಲ್ಲಿ ಹಳೆ ಖಜಾನೆ :
ಅಮೆರಿಕದ ಬೇಟೆಗಾರ 13 ಅಡಿ ಉದ್ದದ ಮೊಸಳೆಯನ್ನು ಬೇಟೆಯಾಡಿದ್ದಾರೆ. ಆದರೆ ನೀರಿನಲ್ಲಿರುವ ಈ ಅತ್ಯಂತ ಅಪಾಯಕಾರಿ ಪ್ರಾಣಿಯ ಹೊಟ್ಟೆಯನ್ನು ಸೀಳಿದಾಗ ಒಳಗಿರುವುದನ್ನು ಕಂಡು ಒಂದು ಕ್ಷಣ ದಿಗ್ಭ್ರಾಂತನಾಗಿದ್ದಾನೆ. ಇವರ ಸಹ ಬೇಟೆಗಾರ ಜಾನ್ ಹ್ಯಾಮಿಲ್ಟನ್ ದೈತ್ಯ ಮೊಸಳೆಯ ಹೊಟ್ಟೆ ಸೀಳಲು ಅಮೆರಿಕನ್ ಬೇಟೆಗಾರ ಶೇನ್ ಸ್ಮಿತ್ ಅವರ ಬಳಿ ತಂದಿದ್ದಾರೆ. ಇಬ್ಬರು ಮೊಸಳೆಯನ್ನು ಕತ್ತರಿಸಿದಾಗ, ಹೊಟ್ಟೆಯೊಳಗೆ ಅತ್ಯಂತ ಪುರಾತನ ಬಾಣ ಹಾಗೂ Plummet ಪತ್ತೆಯಾಗಿತ್ತು..