ವಿನಯ್ ಕುಲಕರ್ಣಿ ಗೆ ಬಿಗ್ ರಿಲೀಫ್​, ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ನೀಡಿದ ಹೈಕೋರ್ಟ್

Published : Jul 31, 2026, 10:53 AM ISTUpdated : Jul 31, 2026, 11:02 AM IST
vinay kulkarni

ಸಾರಾಂಶ

ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿಗೆ ಬಿಗ್ ರಿಲಫ್ ಸಿಕ್ಕಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕನಿಗೆ ಸೆಷನ್ ಕೋರ್ಟ್ ಜಾಮೀನು ನೀರಾಕರಿಸಿತ್ತು. ಇದೀಗ ಹೈಕೋರ್ಟ್ ಜಾಮೀನು ನೀಡಿದೆ.

ಬೆಂಗಳೂರು (ಜು.31) ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಸತತ ಕಾನೂನು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಶಾಸಕ, ಮಾಜಿ ಮಂತ್ರಿ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಯನ್ ಕುಲಕರ್ಣಿಗೆ ಷರತ್ತುಬದ್ದ ಜಾಮೀನು ನೀಡಿದೆ. 5 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಪಡೆದು ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಧಾರವಾಡಕ್ಕೆ ಪ್ರವೇಶಕ್ಕೆ ನಿರ್ಭಂಧ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಸೆಷನ್ ಕೋರ್ಟ್ ನೀಡಿದ್ದ ಶಿಕ್ಷೆ ಅಮಾನತು ಮಾಡಿದ ಹೈಕೋರ್ಟ್

ಬಿಜಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸೆಷನ್ ಕೋರ್ಟ್ ವಿನಯ್ ಕುಲಕರ್ಣಿಗೆ ಶಿಕ್ಷೆ ವಿಧಿಸಿತ್ತು. ಜೀವಾವಧಿ ಶಿಕ್ಷಎ ವಿಧಿಸಿದ್ದ ಕಾರಣ ವಿನಯ್ ಕುಲಕರ್ಣಿ 106 ದಿನಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ವಿನಯ್ ಕುಲಕರ್ಣಿ ಸತತವಾಗಿ ಕಾನೂನು ಹೋರಾಟ ಮಾಡಿದ್ದರು. ಇಂದು ವಿನಯ್ ಕುಲಕರ್ಣಿ ರಾಜಕೀಯ ಜೀವನದ ಅತ್ಯಂತ ಪ್ರಮುಖ ದಿನವಾಗಿತ್ತು. ಇಂದು ಹೈಕೋರ್ಟ್ ಸೆಷನ್ ಕೋರ್ಟ್ ಶಿಕ್ಷೆ ಎತ್ತಿಹಿಡಿದರೆ ವಿಯನ್ ಕುಲಕರ್ಣಿ ಶಾಸಕ ಸ್ಥಾನವೂ ರದ್ದಾಗುವು ಭೀತಿಯಲ್ಲಿತ್ತು. ಆದರೆ ಹೈಕೋರ್ಟ್ ಜಾಮೀನು ನೀಡಿದ ಕಾರಣ ಇದೀಗ ವಿನಯ್ ಕುಲಕರ್ಣಿ ಮತ್ತೆ ರಾಜಕೀಯವಾಗಿ ಸಕ್ರೀಯವಾಗಲಿದ್ದಾರೆ.

ಹೈಕೋರ್ಟ್‌ನಲ್ಲಿ ನ್ಯಾ. ಮೊಹಮ್ಮದ್ ನವಾಜ್ ಮತ್ತು ನ್ಯಾ. ಜಿ. ಬಸವರಾಜ ಅವರ ಪೀಠ ಮಹತ್ವದ ಆದೇಶ ನೀಡಿದೆ. ವಿನಯ್​​ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್​​ ಹಾಜರಾದರೆ, ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್​​ ಎಎಸ್‌ಜಿ ಎಸ್.ವಿ.ರಾಜು ವಾದ ಮಂಡಿಸಿದ್ದರು. ಸಿಬಿಐ ವಕೀಲರು ವಿನಯ್​ ಕುಲಕರ್ಣಿಗೆ ಶಿಕ್ಷೆ ಅಮಾನತು ಮಾಡದಂತೆ, ಜಾಮೀನು ನೀಡದಂತೆ ವಾದ ಮಂಡಿಸಿದ್ದರು. ವಿನಯ್​ ಕುಲಕರ್ಣಿ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳು ಕೋರ್ಟ್‌ನಲ್ಲಿ ಖುಲಾಸೆ ಆಗಿದೆ. ಆದರೆ ಅವುಗಳ ಗಂಭೀರತೆಯನ್ನು ಪರಿಗಣಿಸಬೇಕು ಎಂದು ಸಿಬಿಐ ವಕೀಲರು ವಾದ ಮಂಡಿಸಿದ್ದರು. ವಿನಯ್​ ಕುಲಕರ್ಣಿ ವಿರುದ್ಧ ಸಾಕ್ಷ್ಯ ನಾಶ ಹಾಗೂ ಸಾಕ್ಷಿಗಳ ಮೇಲೆ ಪ್ರಬಾವದ ಆರೋಪಗಳಿವೆ. ಶಾಸಕನಾಗಿರುವ ವಿನಯ್ ಕುಲಕರ್ಣಿ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಸಾಕ್ಷಿಗಳ ಮೇಲೆ ಬೆದರಿಕೆ ಆರೋಪವಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದ ಪ್ರಕರಣಗಳನ್ನ ಅರ್ಜಿಯಲ್ಲಿ ಮರೆಮಾಚಲಾಗಿದೆ ಎಂದು ವಾದ ಮಂಡಿಸಲಾಗಿತ್ತು.

 

 

PREV
Read more Articles on
click me!

Recommended Stories

ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ಸಿಕ್ಕ 3 ಅಸ್ಥಿಪಂಜದ ಡಿಎನ್‌ಎ ದೃಢ; ನಾಪತ್ತೆಯಾದವರ ಗುರುತು ಪತ್ತೆ!
ಕಮಲಾಕರ್‌ ಭಟ್‌ಗೆ ಮತ್ತೆ ಬಿಗ್‌ ಶಾಕ್..‌ ವಸಂತ್‌ ನಾಯ್ಕ್-ಸುಚಿತ್ರ ಕೇಸ್‌ನಲ್ಲಿ ಬಿಗ್‌ ಅಪ್‌ಡೇಟ್ಸ್‌..!