ಭಾರತವನ್ನ ಪಾಕಿಸ್ತಾನ ಮಾಡಲು ದೊಡ್ಡ ಪ್ಲಾನ್‌: ಬಸನಗೌಡ ಪಾಟೀಲ ಯತ್ನಾಳ

By Kannadaprabha News  |  First Published Nov 8, 2024, 11:38 AM IST

ನಮ್ಮ ನಮ್ಮಲ್ಲೇ (ಹಿಂದೂಗಳಲ್ಲಿ) ಒಡಕು ಮೂಡಿಸಿ ಹೀಗೆ ಮಾಡಿದ್ದಾರೆ. ಹಿಂದೂಗಳೆಲ್ಲ ಒಂದು ಎಂಬ ಭಾವನೆ ಬರಬೇಕು. ನಮ್ಮ ನಮ್ಮಲ್ಲಿ ಜಾತಿಗಳು ಇರಬಾರದು ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ
 


ವಿಜಯಪುರ(ನ.08):  ಕರಾಳ ಶಾಸನವಾಗಿರುವ ವಕ್ಫ್‌ನ ಷಡ್ಯಂತ್ರ ಹಾಗೂ ಇದರ ಹಿಂದಿನ ಕುತಂತ್ರ ಸಾಮಾನ್ಯವಲ್ಲ. 2047ಕ್ಕೆ ಭಾರತವನ್ನು ಪಾಕಿಸ್ತಾನ ಮಾಡಲು ದೊಡ್ಡ ಪ್ಲಾನ್ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಕ್ಫ್‌ ವಿರುದ್ಧ ನಡೆದ 4ನೇ ದಿನದ ಧರಣಿಯಲ್ಲಿ ಮಾತನಾಡಿದ ಅವರು, ನಮ್ಮ ನಮ್ಮಲ್ಲೇ (ಹಿಂದೂಗಳಲ್ಲಿ) ಒಡಕು ಮೂಡಿಸಿ ಹೀಗೆ ಮಾಡಿದ್ದಾರೆ. ಹಿಂದೂಗಳೆಲ್ಲ ಒಂದು ಎಂಬ ಭಾವನೆ ಬರಬೇಕು. ನಮ್ಮ ನಮ್ಮಲ್ಲಿ ಜಾತಿಗಳು ಇರಬಾರದು ಎಂದ ಅವರು, ಸಚಿವ ಜಮೀರ್ ಅಹಮ್ಮದ ಖಾನ್‌ ನಿಂದ ಈಗ ಅವರಲ್ಲೇ (ಕಾಂಗ್ರೆಸ್‌ನಲ್ಲಿ) ಬೆಂಕಿ ಹೊತ್ತಿಕೊಂಡಿದೆ. ಕಾಂಗ್ರೆಸ್‌ ನ 30 ಶಾಸಕರು ಜಮೀರ್‌ ವಿರುದ್ಧ ನಿಯೋಗ ಹೊರಟಿದ್ದಾರೆ ಎಂದು ತಿಳಿಸಿದರು.

Tap to resize

Latest Videos

undefined

ನಾನು ಅಶ್ವಮೇಧ ಕಟ್ಟಿ ಹಾಕಿದೆ:

ಹಿಂದೆಲ್ಲ ರಾಜರು ಯುದ್ಧ ಸಾರುವ ಮೊದಲು ತಮ್ಮ ಅಶ್ವಮೇಧ ಕುದುರೆ ಬಿಡುತ್ತಿದ್ದರು. ಅದು ಎಲ್ಲೆಡೆ ಹೋಗುತ್ತಿತ್ತು. ಹಾಗೆ ಬಂದ ಅಶ್ವಮೇಧವನ್ನು ಯಾರು ಕಟ್ಟಿಹಾಕುತ್ತಾರೋ ಅವರ ಜೊತೆ ಯುದ್ಧ ಎಂಬ ನಿಯಮವಿತ್ತು. ಹಾಗೆಯೇ ಈ ರಾಜಕೀಯದ ಕುದುರೆ (ಜಮೀರ್ ಅಹಮ್ಮದ ಖಾನ್) ಬೀದರ, ಕಲಬುರಗಿಗೆ ಹೋಗಿ ವಕ್ಫ್‌ ಆಸ್ತಿ ಕೊಳ್ಳೆ ಹೊಡೆಯಲು ಸೂಚಿಸಿತ್ತು. ಆ ಸಮಯದಲ್ಲಿ ಅಲ್ಲಿಯವರು ಅದನ್ನು ಕಟ್ಟಿ ಹಾಕಲಿಲ್ಲ. ಆದರೆ ವಿಜಯಪುರಕ್ಕೆ ಬಂದ ತಕ್ಷಣ ನಾವು ಮುಂದೆ ಬಿಡದೆ ಅದನ್ನು ಕಟ್ಟಿ ಹಾಕಿದ್ದೀವಿ ಎಂದು ತಿಳಿಸಿದರು.

ಪಾಕಿಸ್ತಾನದಲ್ಲಿ ಹಿಂದೂಗಳ ಗರ್ಭಗುಡಿಯಲ್ಲಿ ದನ ಕಡಿಯುತ್ತಾರೆ. ಹಾಗೆಯೇ ಭಾರತವೂ ಸಹ ಪಾಕಿಸ್ತಾನ ಆಗಿದೆ. ಪಾಕಿಸ್ತಾನದಂತೆ ಭಾರತದಲ್ಲಿಯೂ ಸಹ ವಕ್ಫ್‌ ಬೋರ್ಡ್ ಆಸ್ತಿ 9.5 ಲಕ್ಷ ಚದರ್ ಕಿಮೀ ಎಂದು ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ವಕ್ಫ್‌ ಬೋರ್ಡ್ ಆಸ್ತಿ 3500 ಎಕರೆ ಇತ್ತು, 2019 ರಲ್ಲಿ 5.81 ಲಕ್ಷ ಎಕರೆ ಆಯಿತು. ಇಂದು ದೇಶದಲ್ಲಿ 9.5 ಲಕ್ಷ ಎಕರೆ ಆಗಿದೆ. ಇದೆಲ್ಲ ಹೇಗೆ ಆಯಿತು? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಹೊಸ ವಕ್ಫ್ ಕಾಯ್ದೆ ಜಾರಿಗೊಳಿಸಲು ಸಿದ್ಧವಾಗಿದ್ದರಿಂದ ರಾಜ್ಯದಲ್ಲಿನ ಕಾಂಗ್ರೆಸ್ ಈ ಕುತಂತ್ರ ಮಾಡಿದೆ. ಕೇಂದ್ರ ಕಾಯ್ದೆಗೆ ತಿದ್ದುಪಡಿ ತರುವಷ್ಟರಲ್ಲಿಯೇ ಎಲ್ಲಾ ಆಸ್ತಿ ಗುಳುಂ ಮಾಡೋಣ ಎಂದು ವಕ್ಫ್‌ ಸಚಿವ ಜಮೀರ್ ಅಹಮ್ಮದ ರೈತರು, ದೇವಸ್ಥಾನಗಳು ಸೇರಿದಂತೆ ಎಲ್ಲರ ಪಹಣಿಗಳಲ್ಲಿ ವಕ್ಫ್‌ ಆಸ್ತಿ ಎಂದು ಎಂಟ್ರಿ ಮಾಡಿಸುತ್ತಿದ್ದಾರೆ ಎಂದು ದೂರಿದರು.

ಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ. ಮುಂದಿನ ಜನ್ಮ ಅಂತಿದ್ದರೆ ನಾನು ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳುತ್ತಾನೆ. ಅದಕ್ಕಾಗಿಯೇ ಇದೇ ಜನ್ಮದಲ್ಲಿ ಎಲ್ಲ ಪ್ರಾಪರ್ಟಿಗಳನ್ನು ಅವರ ಹೆಸರಿಗೆ ಹಚ್ಚುತ್ತಿದ್ದಾನೆ. ಹಿಂದೂ ದೇವರುಗಳ ಮೇಲೆ ಭಕ್ತಿ ಇಲ್ಲದ ಸಿದ್ಧರಾಮಯ್ಯ ಮೊದಲು ಕುಂಕುಮ ಹಚ್ಚಿಸಿಕೊಳ್ಳುತ್ತಿರಲಿಲ್ಲ. ಕೇಸರಿ ರುಮಾಲು ಹಾಕಲು ಹೋದರೆ ತೆಗೆದು ಒಗೆಯುತ್ತಿದ್ದ. ಆದರೆ ಈಗ ಎಲ್ಲಾ ಕಡೆ ದೇವಸ್ಥಾನಗಳಿಗೆ ಹೋಗುತ್ತಿದ್ದಾನೆ ಎಂದು ಏಕವಚನದಲ್ಲಿಯೇ ಯತ್ನಾಳ ವಾಗ್ದಾಳಿ ನಡೆಸಿದರು.

ಈ ಹಿಂದೆ ಸಿಎಂ ಸಿದ್ಧರಾಮಯ್ಯ ತಾಲೂಕಿನ ದ್ಯಾಬೇರಿಯ ವಾಗ್ದೇವಿಗೆ ಹೋಗಿ ಗರ್ಭಗುಡಿಗೆ ಹೋಗದೆ ವಾಪಸ್ಸು ಹೋಗಿದ್ದ. ಆ ದೇವತೆ ಖಡಕ್ ಆಗಿರುವುದರಿಂದ ಮುಡಾದಲ್ಲಿ ಸಿಕ್ಕಾಕಿಕೊಂಡ ಎಂದರು.

ಒಂದಲ್ಲ ಒಂದಿನ ಧರ್ಮಯುದ್ಧ ಆಗುವುದು ಖಚಿತ. ಧರ್ಮವು ಉಳಿಯಬೇಕಾದರೆ ಯುದ್ಧ ಆಗುವುದೇ. ಹಿಂದೂಗಳು ಉಳಿಯಬೇಕು, ನಮ್ಮ ಆಸ್ತಿಗಳು ಉಳಿಯಬೇಕು, ದೇಶ, ದೇಶದ ಸಂಸ್ಕ್ರತಿ ಉಳಿಯಬೇಕಾದರೆ ಧರ್ಮಯುದ್ಧ ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ತಿಳಿಸಿದ್ದಾರೆ.  

click me!