ಭಾರತದ ಪ್ರಖ್ಯಾತ ಶಾಕ್ತ ಆರಾಧನಾ ಕೇಂದ್ರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಮೀಪದ ಮೂಕಾಸುರನ ಬೆಟ್ಟದ ಬುಡದಲ್ಲಿ, ಬೃಹತ್ ಶಿಲಾಯುಗ ಕಾಲದ ನಿಲ್ಸ$್ಕಲ್ ಸ್ಮಾರಕ ಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದು ಮಾಡಿರುವ ಬಾವಿ ಮತ್ತು ಮಡಕೆಯ ಅವಶೇಷಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಪತ್ತೆಯಾಗಿವೆ
ಕುಂದಾಪುರ(ಜು.24): ಭಾರತದ ಪ್ರಖ್ಯಾತ ಶಾಕ್ತ ಆರಾಧನಾ ಕೇಂದ್ರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಮೀಪದ ಮೂಕಾಸುರನ ಬೆಟ್ಟದ ಬುಡದಲ್ಲಿ, ಬೃಹತ್ ಶಿಲಾಯುಗ ಕಾಲದ ನಿಲ್ಸ$್ಕಲ್ ಸ್ಮಾರಕ ಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದು ಮಾಡಿರುವ ಬಾವಿ ಮತ್ತು ಮಡಕೆಯ ಅವಶೇಷಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಪತ್ತೆಯಾಗಿವೆ ಎಂದು ಮೂಲ್ಕಿ ಸುಂದರರಾಮ್ ಶೆಟ್ಟಿಕಾಲೇಜಿನ ಸಹಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಹೇಳಿದ್ದಾರೆ.
ಕೊಲ್ಲೂರಿನ ಬೃಹತ್ ಶಿಲಾಯುಗ ನಿವೇಶನದ ಶೋಧವು ಕೊಲ್ಲೂರು ಮತ್ತು ಮೂಕಾಂಬಿಕೆಯ ಪ್ರಾಚೀನತೆಯನ್ನು ಸುಮಾರು ಕ್ರಿ.ಪೂ. 1000 ವರ್ಷಗಳಷ್ಟುಪ್ರಾಚೀನ ಪರಂಪರೆ ಎಂಬುದನ್ನು ಧೃಡೀಕರಿಸಲಿದೆ. ದೇವಿ ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ಹತ್ಯೆ ಮಾಡಿದ್ದರಿಂದ, ಮೂಕಾಂಬಿಕೆ ಎಂಬ ಅಭಿದಾನವನ್ನು ಪಡೆದುಕೊಂಡು ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಬಹುಶಃ, ಮೂಕಾಸುರನ ಸಮಾಧಿಯ ಸ್ಮಾರಕವಾಗಿ ಈ ನಿಲ್ಸ$್ಕಲ್ ಶಿಲೆ ಇಲ್ಲಿ ಸ್ಥಾಪನೆಯಾಗಿರಬೇಕು ಎಂದು ಪ್ರೊ. ಮುರುಗೇಶಿ ಅಂದಾಜಿಸಿದ್ದಾರೆ.
ಕೊಲ್ಲೂರಿಗೆ ಸಮೀಪದ ಹೊಸನಗರ ತಾಲೂಕಿನಲ್ಲಿ ಈಗಾಗಲೇ 40 ನಿಲ್ಸ$್ಕಲ್ ಗಳನ್ನು ವಿದ್ವಾಂಸರು ಪತ್ತೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ತಾವು ಪತ್ತೆ ಮಾಡಿದ 7 ನೇ ನಿಲ್ಸ$್ಕಲ್ ಇದಾಗಿದೆ.
ಬೃಹತ್ ಶಿಲಾಯುಗದಲ್ಲಿ ಮೃತರ ನೆನಪಿಗೆ ನೆಟ್ಟಶಿಲೆ (ನಿಲ್ಲಿಸಿದ ಕಲ್ಲು)ಗಳೇ ಈ ನಿಲ್ಸ$್ಕಲ್‌ಗಳಾಗಿವೆ. ಈ ಸಂಶೋಧನೆಗೆ ಕೊಲ್ಲೂರಿನ ಮುರುಳೀಧರ ಹೆಗ್ಡೆ, ರಮೇಶ್ ಅನಗಳ್ಳಿ, ಗದ್ದೆಮನೆ ಚಂದ್ರ ಯು.ಬಿ., ರಾಘವೇಂದ್ರ ಐತಾಳ್, ಜನಾರ್ದನ ಆಚಾರಿ ಮತ್ತು ನುಕ್ಸಾಲ್ ಭಾಸ್ಕರ್ ಸಹಕರಿಸಿದ್ದರು.