ಮಡಿಕೇರಿಯ ನಾಪೋಕ್ಲು ಮೀನು ಮಾರುಕಟ್ಟೆಯಲ್ಲಿ ಮೀನು ಕೊಳ್ಳುವವರಿಗಿಂತ ನೋಡುಗರ ಸಂಖ್ಯೆ ಹೆಚ್ಚಾಗಿತ್ತು. ಕಾರಣ ಏನಂತೀರಾ..? ಬೃಹದಾಕಾರದ ಮೀನೊಂದು ನಾಪೋಕ್ಲು ಫಿಶ್ ಮಾರ್ಕೆಟ್‌ಗೆ ತಲುಪಿತ್ತು. ಬೃಹದಾಕಾರದ ಮೀನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಮಡಿಕೇರಿ(ನ.22): ಮಡಿಕೇರಿಯ ನಾಪೋಕ್ಲು ಮೀನು ಮಾರುಕಟ್ಟೆಯಲ್ಲಿ ಮೀನು ಕೊಳ್ಳುವವರಿಗಿಂತ ನೋಡುಗರ ಸಂಖ್ಯೆ ಹೆಚ್ಚಾಗಿತ್ತು. ಕಾರಣ ಏನಂತೀರಾ..? ಬೃಹದಾಕಾರದ ಮೀನೊಂದು ನಾಪೋಕ್ಲು ಫಿಶ್ ಮಾರ್ಕೆಟ್‌ಗೆ ತಲುಪಿತ್ತು. ಬೃಹದಾಕಾರದ ಮೀನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಸ್ಥಳೀಯ ಮೀನು ಮಾರುಕಟ್ಟೆಗೆ ತರಲಾಗಿದ್ದ ಭಾರಿ ಗಾತ್ರದ ಓಲೆ ಮೀನು ಮೀನುಪ್ರಿಯರ ಗಮನ ಸೆಳೆಯಿತು. ಗುರುವಾರ ಮಂಗಳೂರಿನಿಂದ ಮಾರಾಟಕ್ಕೆಂದು ನಾಪೋಕ್ಲು ಮೀನು ಮಾರುಕಟ್ಟೆಗೆ ತರಲಾಗಿದ್ದ ಮೀನುಗಳ ಪೈಕಿ ಸುಮಾರು 47 ಕೆ.ಜಿ. ತೂಕದ ಹಾಗೂ ಏಳು ಅಡಿ ಉದ್ದವಿದ್ದ ಭಾರಿ ಗಾತ್ರದ ಓಲೆ ಮೀನು ನಾಗರಿಕರನ್ನು ಆಕರ್ಷಿಸಿತು.
ಗಣಪತಿ ಆತ್ಮಹತ್ಯೆ: ವರದಿ ನೋಡಿ ಮುಂದಿನ ನಿರ್ಧಾರ
ಈ ಮೀನನ್ನು ಕೆಲವರು ಕುತೂಹಲದಿಂದ ವೀಕ್ಷಿಸಿದರೆ ಮತ್ತೆ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದರು. ಈ ಓಲೆ ಮೀನನ್ನು ಕೆ.ಜಿ.ಗೆ 400 ರಿಂದ 450 ರು.ಗೆ ಮಾರಾಟ ಮಾಡಲಾಗುವುದೆಂದು ಮೀನು ಮಾರುಕಟ್ಟೆಯ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.
MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!