BIG 3 Hero: ಅಕ್ಕ-ತಮ್ಮನ ಸಸ್ಯ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ

Published : Sep 17, 2022, 03:37 PM ISTUpdated : Sep 17, 2022, 03:39 PM IST
BIG 3 Hero: ಅಕ್ಕ-ತಮ್ಮನ ಸಸ್ಯ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ

ಸಾರಾಂಶ

BIG 3 Hero Vijayapura Brother-Sister Story: ಸಸ್ಯಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಸಣ್ಣ ವಯಸ್ಸಿನಲ್ಲೆ ವಿಶ್ವ ದಾಖಲೆಗೆ ಭಾಜನರಾಗಿರೋ ಮೊದಲಿಗರು ಎಂಬ ಕೀರ್ತಿ ಇಬ್ಬರಿಗೂ ಸಲ್ಲುತ್ತಿದೆ. 

ವಿಜಯಪುರ (ಸೆ. 17): ಈ ಚಿನ್ನಾರಿಮುತ್ತುಗಳು ಚಿಕ್ಕ ವಯಸ್ಸಿನಲ್ಲೇ ಮಾಡಿರುವ ಸಾಧನೆ ಕೇಳಿದ್ರೆ ವಾಹ್‌ ಅಂತೀರ. ಇವರು ಮಾಡ್ತಿರೋ ಕೆಲಸ ನೋಡಿದ್ರೆ ಎಂಥವರು ಹುಬ್ಬೇರಿಸಲೇ ಬೇಕು. ಈ ಪುಟಾಣಿಗಳು ಮಾಡಿರುವ ಅಪರೂಪದ ಸಾಧನೆಯೇ ಬಲು ಇಂಟರೆಸ್ಟಿಂಗ್. ಇವರು ಮಾಡಿರೋ ರೆಕಾರ್ಡ್‌ಗಳನ್ನ (Records) ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಇವರಿಗಿರೋ ಟ್ಯಾಲೆಂಟ್, ಇವರ ಸಾಧನೆಗಳಿಗೆ ಇವ್ರೆ ಸಾಟಿ. ಅಷ್ಟಕ್ಕೂ ಯಾರು ಗೊತ್ತಾ ಈ ಹೀರೋಗಳು?  ಮನೆ ತುಂಬಾ ಪ್ರಶಸ್ತಿ, ಪದಕಗಳು. ಕೊರಳಲ್ಲಿ ಹೆಮ್ಮೆಯಿಂದ ಪದಕಗಳನ್ನು ಹಾಕಿಕೊಂಡಿರೋ ಬಾಲಕ. ಸಸ್ಯ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ ಬಗ್ಗೆ ಹೇಳುತ್ತಿರುವ ಬಾಲಕಿ. ಈ ಮಕ್ಕಳ ಸಾಧನೆ ನೋಡಿ ಹೆಮ್ಮೆಪಡುತ್ತಿರುವ ಪೋಷಕರು.

ವಿಜಯಪುರದ ಐಶ್ವರ್ಯ ನಗರದ ನಿವಾಸಿ, ಶಿಕ್ಷಕ ಶ್ರೀಮಂತ ಹಾಗೂ ಬಂಗಾರಮ್ಮ ದಂಪತಿಯ ಇಬ್ಬರ ಮಕ್ಕಳೇ 7ನೇ ತರಗತಿಯಲ್ಲಿ ಓದುತ್ತಿರೋ ಅಕ್ಕ ಭಾಗ್ಯಶ್ರೀ, 6ನೇ ತರಗತಿಯಲ್ಲಿ ಓದುತ್ತಿರೋ ತಮ್ಮ ರೇವಣ್ಣ.  ಅಷ್ಟಕ್ಕೂ, ಇವರ ಸಾಧೆನ ಏನು ಅನ್ಕೊಂಡ್ರ, ಭಾಗ್ಯಶ್ರೀ ಲ್ಯಾಂಟೆನಾ ಕ್ಯಾಮರಾ (Lantana camara) ಸಸ್ಯದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಭಾಜನರಾಗಿದ್ರೆ, 6ನೇ ತರಗತಿಯಲ್ಲಿ ಓದುತ್ತಿರೋ ತಮ್ಮ ರೇವಣ್ಣ ಸಸಾಲ್ಪಿನಿಯ ಬೊಂಡುಸಲ್ಲಾ (Caesalpinia bonducella) ಸಸ್ಯದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಡೈಮಂಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದು ಹೆಮ್ಮೆಯ ಮಕ್ಕಳಾಗಿದ್ದಾರೆ.   

ಸಸ್ಯಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ: ಈ ಎರಡು ಸಸ್ಯಗಳು ಇದೀಗ ಅಳಿವಿನಂಚಿನಲ್ಲಿವೆ. ಈ ಎರಡು ಸಸ್ಯಗಳು ಔಷಧಿ ಗುಣಗಳನ್ನು ಹೊಂದಿದ್ದು, ರೋಗ ಉಪಶಮನ ಮಾಡುತ್ತವೆ. ಈ ಸಸ್ಯಗಳ ಉಳಿಸುವ ಅಗತ್ಯತೆಯಿಂದ ಜನರಲ್ಲೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡ್ತಿದ್ದಾರೆ. ಇವುಗಳ ಔಷಧಿ ಉಪಯೋಗದ ಬಗ್ಗೆಯು ಜನರಲ್ಲಿ ಜಾಗೃತಿ ಮೂಡಿಸಿ, ಅಪರೂಪದ ಸಸ್ಯ ಸಂಕುಲ ರಕ್ಷಣೆಗು ಇಬ್ಬರೂ ಪುಟಾಣಿಗಳು ಟೊಂಕ ಕಟ್ಟಿ ನಿಂತಿರೋದು ನಿಜಕ್ಕು ಅಚ್ಚರಿಯೇ ಸರಿ. ಇನ್ನು ಈ ಎರಡು ಸಸ್ಯಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಸಣ್ಣ ವಯಸ್ಸಿನಲ್ಲೆ ವಿಶ್ವ ದಾಖಲೆಗೆ ಭಾಜನರಾಗಿರೋ ಮೊದಲಿಗರು ಅನ್ನೋ  ಕೀರ್ತಿ ಇಬ್ಬರಿಗೂ ಸಲ್ಲುತ್ತಿದೆ. 

BIG 3 Hero: ಮಂಗಳೂರಿನ ಯುವತೇಜಸ್ಸು ಯುವಕರ ತಂಡದ ಕಾಲು ಸಂಕ ಮುಕ್ತ ಅಭಿಯಾನ

ಇನ್ನು ಇವ್ರಿಬ್ರು ಹಿಡಿದ ಹಠ ಸಾಧಿಸದೇ ಬಿಡೋವವರಲ್ಲ. ಚಿಕ್ಕ ವಯಸ್ಸಿನಲ್ಲೇ ಸಂಶೋಧನಾತ್ಮಕ ಅಧ್ಯಯನ ಮಾಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸತತ 9 ತಿಂಗಳ ಕಾಲ ವಿಜಯಪುರ ಸೇರಿದಂತೆ ಸುತ್ತಲಿನ ಹಳ್ಳಿಗಳಿಗೆ ತೆರಳಿ  ಸಸ್ಯಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ, ಆನ್ಲೈನ್ ಮೂಲಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. 

ಐಎಎಸ್ ಆಗುವ ಗುರಿ: ಇದೀಗ ಅಕ್ಕ ತಮ್ಮನಿಗೆ ಪ್ರಶಸ್ತಿ ಪ್ರಮಾಣ ಪತ್ರ, ಪದಕಗಳು ಬಂದಿವೆ. ಇನ್ನು ವಿದ್ಯಾರ್ಥಿ ರೇವಣ್ಣ, ಭಾಗ್ಯಶ್ರೀಗೆ ಪ್ರಶಸ್ತಿ ಪದಕಗಳು ಬಂದಿರುವ ಲೆಕ್ಕಗಳೇ ಇಲ್ಲ. ಸಂಗೀತ, ನೃತ್ಯ, ಅಧ್ಯಾಯದಲ್ಲೂ ಮೇಲುಗೈ ಸಾಧಿಸ್ತಿರೋ ಅಕ್ಕ ತಮ್ಮ ಐಎಎಸ್ ಆಗುವ ಗುರಿ ಹೊಂದಿದ್ದಾರೆ. ತಮ್ಮ ಸಾಧನೆ ಜೊತೆಗೆ ಬಡಮಕ್ಕಳಿಗೂ ಯೋಗ, ಚಿತ್ರಕಲೆ ಬಗ್ಗೆ ಉಚಿತ ತರಬೇತಿ ನೀಡಲು ಸರ್ಕಾರಿ ಶಾಲೆಗೆ ಹೋಗ್ತಾರೆ. ರೇವಣ್ಣ ಚಿತ್ರಕಲೆಯಲ್ಲಿ ಹಲವಾರು  ಬುಕ್ ಆಫ್ ರೆಕಾರ್ಡ್‌ಗಳಲ್ಲಿ ದಾಖಲೆ ಬರೆದಿದ್ದಾನೆ. 

ಚಿತ್ರಕಲೆಯಲ್ಲೂ ಸೈ: ಗಾಂಧೀಜಿಯ ಭಾವಚಿತ್ರವನ್ನು ಕೇವಲ 26 ಸೆಕೆಂಡಿನಲ್ಲಿ ಬಿಡಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದು ವಿಶೇಷವಾಗಿದೆ. ಅತಿ ವೇಗದ ಚಿತ್ರಕಲೆಯಲ್ಲಿ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಚಾಂಪಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಬ್ರಾವೊ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿ 18ಕ್ಕೂ ಅಧಿಕ ಬುಕ್ಆಫ ರೆಕಾರ್ಡ್ನಲ್ಲಿ ಈತನ ಸಾಧನೆ ದಾಖಲಾಗಿರೋದು ಎಲ್ಲರನ್ನು ಅಚ್ಚರಿಗೊಳಿಸುತ್ತಿದೆ. 

Big 3 Hero: ಅಕ್ಷಯ್‌ ಕೋಟ್ಯಾನ್:‌ ಎಲೆ ಮೇಲೆ ನೂರಾರು ಕಲಾಕೃತಿ ರಚಿಸುವ ಕಲಾವಿದ

ಒಟ್ಟಿನಲ್ಲಿ, ಇಂದಿನ ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ಆದ್ರೆ ಇವ್ರಿಬ್ಬರೂ ಮೊಬೈಲ್ ಮೂಲಕವೇ ಸಾಧನೆಗೆ ಏಣಿ ಮಾಡಿಕೊಂಡಿದ್ದಾರೆ. ಇವ್ರ ಸಾಧನೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ. ಯಂಗ್ ಜಿನಿಯಸ್ ಆಗಿರೋ ಇವರೇ ನಮ್ಮ ಇವತ್ತಿನ ಬಿಗ್3 ಹೀರೋ.

PREV
Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!