BIG 3 Hero: ಜ್ಞಾನದ ದಾಹ ತಣಿಸುವ ಸಂತೋಷ್ ಪಾಟೀಲ್, ಹೊಟ್ಟೆಯ ಹಸಿವು ತಣಿಸುವ ಸಾಜಿದ್ ಹೊಂಬಳ

By Manjunath Nayak  |  First Published Oct 15, 2022, 12:44 PM IST

Suvarna News Big 3 Hero: ಇವತ್ತಿನ ನಮ್ಮ ಬಿಗ್-3 ಹೀರೋಸ್‌ ನಿಸ್ವಾರ್ಥ ಸೇವೆ ಮಾಡುತ್ತಿರೋ ಗದಗದ ಸ್ನೇಹಿತರ ಬಳಗ ಹಾಗೂ ಸೂಪರ್ ಡಿಜಿಟಲ್ ಲೈಬ್ರೆರಿ ನಿರ್ಮಿಸಿರುವ ಬೀದರ್‌ನ  ಪಿಡಿಓ ಸಂತೋಷ್ ಪಾಟೀಲ್


ಬೆಂಗಳೂರು (ಅ. 15): ಹಿಂದೂಳಿದ ತಾಲೂಕಿನ ಆ ಪುಟ್ಟ ಗ್ರಾಮದಲ್ಲಿ ಹೈಟೆಕ್ ಲೈಬ್ರರಿ (Hi Tech Library) ನಿರ್ಮಾಣವಾಗಿದೆ. ಮಕ್ಕಳ ಓದಿಗೆ, ಸ್ಪರ್ಧಾತ್ಮ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನ ಕಲ್ಪಿಸಿದೆ. ಈ ಗ್ರಾಮದ ಗ್ರಂಥಾಲಯ ಜಿಲ್ಲಾ ಕೇಂದ್ರದ ಗ್ರಂಥಾಲಯವನ್ನೇ ಮಿರಿಸುವಂತಿದೆ. ಬೀದರ್ ಜಿಲ್ಲೆ (Bidar) ರಾಜ್ಯದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಔರಾದ್ (Aurad) ತಾಲೂಕು ತೀರಾ ಹಿಂದುಳಿದ ತಾಲೂಕಾಗಿದೆ. ಇದನ್ನೆಲ್ಲ ಮನಗಂಡ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮ ಪಂಚಾಯತ್ ಪಿಡಿಓ ಸಂತೋಷ್ ಪಾಟೀಲ್ (PDO Santosh Patil) ಹಾಗೂ ಗ್ರಾಮ ಪಂಚಾಯತ್ ಸದಸ್ಯರೆಲ್ಲ ಸೇರಿಕೊಂಡು ಅದ್ಭುತ ಡಿಜಿಟಲ್ ಲೈಬ್ರೆರಿ (Digital Library) ಮಾಡೋ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ. 

ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮದ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಮಕ್ಕಳ  ಅನುಕೂಲಕ್ಕಾಗಿ ಈ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಾಲ್ಕು ಕಂಪ್ಯೂಟರ್ಗಳಿದ್ದು ಅದಕ್ಕೆ ಹೈಸ್ಪೀಡ್ ಇಂಟರ್ನೆಟ್ ಕನೆಕ್ಷನ್  ಕೊಡಲಾಗಿದೆ. UPSC, KAS, SDA, FDA, PDO ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೂ ಅನೂಕುಲವಾಗುವಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನ ಇಡಲಾಗಿದೆ. ಜೊತೆಗೆ ಇಲ್ಲಿ ಸುಂದರ ಕಲಿಕಾ ವಾತಾವರಣವನ್ನೂ ಕೂಡ ನಿರ್ಮಾಣ ಮಾಡಲಾಗಿದೆ. 

Tap to resize

Latest Videos

undefined

ಇನ್ನು ಗುಡಪಳ್ಳಿ ಗ್ರಾಮ ಪಂಚಾಯತ್ ಕಟ್ಟಡ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಕೂಡಾ ಇಷ್ಟೊಂದು ಸುಂದರವಾದ ಕಟ್ಟಡ ಇಲ್ಲ. ಕಟ್ಟಡದ ಮುಂಭಾಗದಲ್ಲಿ ಉದ್ಯಾನವನವನ್ನು ಕೂಡಾ  ನಿರ್ಮಿಸಲಾಗಿದೆ. ಲೈಬ್ರರಿಯಲ್ಲಿ ಓದುತ್ತಿರುವ ಮಕ್ಕಳ ಮೇಲೆ ನಿಗಾ ಇಡುವ ಉದ್ದೇಶದಿಂದ ಇಡೀ ಲೈಬ್ರರಿಯಲ್ಲಿ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗಿದ್ದು, ಆ ಮೂಲಕ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಅನ್ನೋದನ್ನ ಪಿಡಿಓ ಕುಳಿತಲ್ಲೆ ನೋಡಬಹುದಾಗಿದೆ. ಇಲ್ಲಿ ಬರೀ ವಿದ್ಯಾರ್ಥಿಗಳು ಮಾತ್ರವಲ್ಲದೇ ಗ್ರಾಮದ ಜನರು ಕೂಡಾ ಈ ಸೌಲಭ್ಯವನ್ನ ಬಳಸಿಕೊಳ್ಳುತ್ತಿರೋದು ಮತ್ತಷ್ಟು ಸಂತಸ ಮೂಡಿಸಿದೆ. 

BIG 3 Hero: ಹಸಿದವರ ಪಾಲಿನ ಅನ್ನದಾತ ಸ್ಯಾಮ್ಸನ್: ಮಾದರಿ ಪೊಲೀಸ್ ಠಾಣೆಯ PSI ಯತೀಶ್

ಅದೇನೆ ಇರಲಿ ಸರ್ಕಾರದ ಆಡಳಿತ ವ್ಯವಸ್ಥೆಯನ್ನ ತೆಗಳುವಂತಹ ಈ ಕಾಲದಲ್ಲಿ, ಒಂದು ಪುಟ್ಟ ಗ್ರಾಮದ ಪಂಚಾಯತ್ ಕಚೇರಿಯಿಂದ ಹೀಗೂ ಮಾಡಬಹುದು ಅನ್ನೋದನ್ನ ಪಿಡಿಓ & ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯರು ತೋರಿಸಿಕೊಟ್ಟಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಠಿಯಿಂದ ಪಿಡಿಓ ಸಂತೋಷ್ ಪಾಟೀಲ್ ಮಕ್ಕಳಿಗಾಗಿ ಈ ವ್ಯವಸ್ಥೆ ಕಲ್ಪಿಸಿದ್ದು ನಿಜಕ್ಕೂ ಮೆಚ್ಚುವಂತದ್ದು.

ಹೊಟ್ಟೆಯ ಹಸಿವು ತಣಿಸುವ ಸಾಜಿದ್ ಹೊಂಬಳ: ಮನೆಯಲ್ಲಿ ನಡೆಯುವ ಶುಭಕಾರ್ಯಗಳಿಗೆ ನೆಂಟರನ್ನ ಕರೆಸಿ ಯಾವುದಕ್ಕೂ ಕಡಿಮೆ ಆಗದೆ ಇರೋ ಹಾಗೆ ಭರ್ಜರಿ ಭೋಜನಾ ಮಾಡಿಸಬೇಕು ಅಂತಾ ಅಂದುಕೊಳ್ತಿವಿ. ಬಂದವರಿಗೆ ಊಟದಲ್ಲಿ ಕಡಿಮೆಯಾಗದಿರಲಿ ಅಂತಾ ತುಸು ಹೆಚ್ಚಾಗೇ ಅಡುಗೆ ಮಾಡಿಸುತ್ತಿವಿ. ಆದ್ರೆ ಕೆಲವೊಮ್ಮೆ ನಿರೀಕ್ಷೆಗಿಂತ ಕಡಿಮೆ ಜನ ಬಂದು ಅಡುಗೆ ಉಳಿದರೆ ಏನ್ ಮಾಡ್ತಿವಿ ಹೇಳಿ? ಏನ್ ಮಾಡೊದು ಸರ್, ಉಳಿದು ಬಿಡ್ತು ಅಂತಾ ಸೀದಾ ತಿಪ್ಪೆಗೆ ಚೆಲ್ಲುತ್ತೀವಿ. ಬಟ್ ಈ ಊರಿನಲ್ಲಿ ಹಾಗೆ ಮಾಡೋ ಹಾಗಿಲ್ಲ. ಅಪ್ಪಿ-ತಪ್ಪಿ ಹಾಗೇನಾದ್ರು ಮಾಡಿದ್ರೆ ಮುಗೀತು ಅಷ್ಟೇ ಅವ್ರ ಕಥೆ. 

ಹೀಗೆ ಬೀದಿ ಬೀದಿ ಅಲೆದು ಅನ್ನವನ್ನ ಹಂಚುತ್ತಿರೋ ಇವರೆಲ್ಲಾ ಗದಗ ನಗರದ ನಿವಾಸಿಗಳು. ಸಾಮಾಜಿಕವಾಗಿ ಏನಾದ್ರು ಒಂದೊಳ್ಳೆ ಕೆಲಸ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಒಂದೆಡೆ ಸೇರಿದವ್ರು. ಕಳೆದ 8 ತಿಂಗಳಿಂದ ಗದಗ ನಗರದ ಅನಾಥರು, ನಿರ್ಗತಿಕರು, ಬಡವರ ಪಾಲಿಗೆ ಇವರೆಲ್ಲ ಆಪತ್ಭಾಂದವರಾದ ಅನ್ನದಾತರು.  

ನಗರದ ಎಲ್ಲಾ ಚೌಟ್ರಿಗಳಲ್ಲಿ ಇವರು ಸ್ಟಿಕರ್ಗಳನ್ನು ಅಂಟಿಸಿದ್ದಾರೆ. ಶುಭ ಸಮಾರಂಭಗಳಲ್ಲಿ ಉಳಿದ ಅನ್ನವನ್ನ ವ್ಯರ್ಥ ಮಾಡಬೇಡಿ, ಅದನ್ನ ನಮಗೆ ನೀಡಿ ಎಂದು ನಂಬರ್ ಕೊಟ್ಟಿದಾರೆ. ಊಟ ಉಳಿದ್ರೆ ಈ ಸ್ನೇಹಿತರ ಬಳಗಕ್ಕೆ ಫೋನ್ ಬರುತ್ತೆ. ಸೀದಾ ಆ ಚೌಟ್ರಿಗೆ ಹೋಗಿ ಉಳಿದಿರೊ ಆಹಾರ ತೆಗೆದುಕೊಂಡು ಬಂದು ನೀಟಾಗಿ ಪ್ಯಾಕ್ ಮಾಡಲಾಗುತ್ತೆ. ಹಂಚೋದಕ್ಕೂ ಮುಂಚೆ ಆಹಾರ ತಿನ್ನೋದಕ್ಕೆ ಯೋಗ್ಯ ಇದೆಯಾ ಅಂತಾ ತಂಡದ ಸದಸ್ಯರು ಚೆಕ್ ಮಾಡಿ ಖಾತ್ರಿಪಡಿಸಿಕೊಳ್ತಾರೆ. ನಂತರವೇ ವಿವಿಧ ಬಡಾವಣೆಗೆ ತೆರಳಿ ಅವಶ್ಯಕತೆ ಇರುವವರಿಗೆ ಹಂಚುತ್ತಾರೆ. ಹೆಚ್ಚಿಗೆ ಊಟ ಇದ್ರೆ, ಅನಾಥಾಶ್ರಮಗಳಿಗೂ ಕೊಡ್ತಾರೆ.

BIG 3 Hero: ಪೊಲೀಸ್ ಆಗುವ ಕನಸಿದೆಯೇ? ನಿಮ್ಮ ಕನಸು ನನಸಾಗಲು 'ಸುವರ್ಣ' ವೇದಿಕೆ!

ಈ ಮಹಾತ್ಕಾರ್ಯ ಮಾಡುತ್ತಿರೋದು ಸಾಜಿದ್ ಹೊಂಬಳ, ಶೌಕತ್ ಕಾತರಕಿ ಅವರು. ಗದಗ ನಗರದಲ್ಲಿ ವಾಸವಿರೋ  ಇವರಿಗೆ ಕೆಲ ವರ್ಷದಿಂದ ಒಂದು ಅನಾಥಾಶ್ರಮ ಆರಂಭಿಸಬೇಕು ಅನ್ನೋ ಆಸೆ ಇತ್ತಂತೆ. ಆದ್ರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈ ಡಿಫರೆಂಟ್ ಐಡಿಯಾದೊಂದಿದೆ ಊಟ ಹಂಚುವ ಕೆಲಸ ಶುರು ಮಾಡಿದಾರೆ. 8 ತಿಂಗಳ ಹಿಂದೆ ಇಬ್ಬರಿಂದ ಆರಂಭವಾದ ಈ ಸೇವಾ ಕಾರ್ಯಕ್ಕೆ ಈಗ ಐದು ಜನ ಸೇರಿಕೊಂಡಿದ್ದಾರೆ. ಆಹಾರ ಪ್ಯಾಕ್ ಮಾಡುವ ಸಾಮಗ್ರಿಗಳನ್ನ ಖರೀದಿಸೋದು, ಚೌಟ್ರಿಗೆ ಹೋಗಿ ಆಹಾರ ತರೋದಕ್ಕೆ ವ್ಯಯವಾಗುವ ಪೆಟ್ರೊಲ್ ಖರ್ಚನ್ನ ಈ ಗುಂಪಿನ ಸದಸ್ಯರೇ ನಿಭಾಯಿಸ್ತಾರೆ. 

ಹಣ ಕೊಟ್ರೆನೇ ಕೆಲಸಗಾರರು ಸಿಗೋದಿಲ್ಲ. ಅಂತಹದ್ರಲ್ಲಿ ಸಾಜಿದ್ & ಶೌಕತ್ ಅವರ ಗುಂಪಿಗೆ ಅನೇಕರು ನಾವು ಸೇವೆ ಮಾಡ್ತಿವಿ ಅಂತಾ ಸೇರಿಕೊಳ್ತಿದ್ದಾರಂತೆ. ಹಸಿವಿನಿಂದ ಯಾರೂ ಕೂಡ ಮಲಗಬಾರದು ಅನ್ನೋ ಕಾಳಜಿಯಿಂದ ಇಂತಹ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

click me!